ಗ್ರಾಮೀಣ ಭಾಗದ ಜನರಿಂದ ಧಾರ್ಮಿಕ ಆಚರಣೆಗಳು ಜೀವಂತ. ಶ್ರದ್ಧಾ,ಭಕ್ತಿಯ ಕೇಂದ್ರ ಗ್ರಾಮೀಣ ಭಾಗಗಳು .!

ವರದಿ: ಪ್ರಕಾಶ ಮಂದಾರ.

ದಾವಣಗೆರೆ : ಹರಿಹರ ತಾಲೂಕ್ ದುಳೆಹೊಳೆ ಗ್ರಾಮದಲ್ಲಿ ಸುಮಾರು 74 ವರ್ಷಗಳಿಂದ ಶ್ರೀ ದುರ್ಗಾಂಬಿಕಾ ದೇವಿಯ ಹಾಲು ತುಪ್ಪದ ಹಬ್ಬವನ್ನು ಕಡೆ ಶ್ರಾವಣ ಮಾಸದಲ್ಲಿಆಚರಣೆ ಮಾಡಿಕೊಂಡು ಬಂದಿದ್ದಾರೆ ಈ ವರ್ಷವೂ ಸಹ ಹಬ್ಬವನ್ನು ಆಚರಣೆ ಮಾಡಲಾಯಿತು. ದಿನಾಂಕ 12/08/2020 ರಂದು ಹಬ್ಬವನ್ನು ಆಚರಣೆ ಮಾಡಲಾಯಿತು ಹಬ್ಬದಲ್ಲಿ ವಿಶೇಷವೇನೆಂದರೆ ಶ್ರೀ ದುರ್ಗಾಂಬಿಕಾ ದೇವಿಗೆ ಬೆಳಗಿನ ಜಾವ 5 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ತುಂಗಭದ್ರೆಯ ನದಿಯ ದಂಡೆಯಲ್ಲಿ ದೇವಿಗೆ 101 ಪೂಜೆಯನ್ನು ಸಲ್ಲಿಸಿ ನಂತರ ಬಾಜಾ ಭಜಂತ್ರಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮೆರವಣಿಗೆ ಜರಗಿತು ನಂತರ ದೇವಸ್ಥಾನದ ಮುಂಭಾಗದಲ್ಲಿ ಪಡ್ಲಿಗಿ ತುಂಬಿಸುವುದು ಹಾಗೂ ಶ್ರೀ ಮೈಲಾರಲಿಂಗೇಶ್ವರ ರಾಕ್ಷಸರನ್ನು ಸಂಹಾರ ಮಾಡಿದ ನೆನಪಿಗಾಗಿ ಊರಿನ ಎಲ್ಲಾ ಗೊರವಯ್ಯ ನವರು ಕಾಯಕವನ್ನು ಸಲ್ಲಿಸಿದರು.

ಕಾಯಕ ಮಾಡುವ ಸಮಯದಲ್ಲಿ ಮುತ್ತಪ್ಪ ಗೊರವಯ್ಯ ನವರು 4 ನುಡಿ ಮುತ್ತು ನುಡಿದರು ಇಂಥ ವಾತಾವರಣದಲ್ಲಿ ಹಬ್ಬ ಮಾಡಿದಿರಿ ಎಂದರೆ ಉತ್ತಮವಾಗಿದೆ ಎಂದರು ಗೊರವಯ್ಯ ನವರು ಕೊರೋನಾದ ಬಗ್ಗೆ 2 ಮಾತುಗಳನ್ನು ನುಡಿದರು ಜಾಗ ಎಲ್ಲಿದಿಯಾ ಅಲ್ಲೆಲ್ಲ ಬರುತ್ತಿರುವುದು ನಾನು ಹೊರಗಡೆ ಇದ್ದೇನೆ ಚಿಂತೆ ಬೇಡ ಹೆಂಗೆ ಬಂದಿದೆಯೋ ಅಂಗೆ ಹೋಗುತ್ತೆ ಅನ್ನುವ ನುಡಿಮುತ್ತು ನುಡಿದರು ಈ ಸಮಯದಲ್ಲಿ ಶ್ರೀ ದುರ್ಗಾಂಬಿಕಾ ದೇವಿಯ ಕಮಿಟಿ ಯವರಾದ ಅಜ್ಜೇರ ನೀಲಪ್ಪ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ನಿಂಗಪ್ಪ ಮುಕನವರು ತಿಪ್ಪೇರುದ್ರಪ್ಪ ಕರಿಪೇರ್ ಬಸವರಾಜಪ್ಪ ಮುದೇನೂರು ಹನುಮಂತಪ್ಪ ಫೇರೆವರ್ ನೀಲಪ್ಪ ಹೀಗಿಡ್ಡವರು ಗುಂಡಿ ಬಸಪ್ಪ ಗುಡಿಕಟ್ಟಿ ಅವಳೆಪ್ಪರ್ ನೀಲಪ್ಪ ಹಾಗೂ ಪರಶುರಾಮ್ ಅಜ್ಜೇರ ಹಾಲಿ ಗ್ರಾಮ ಪಂಚಾಯತಿ ಸದಸ್ಯರು ಮಂಜಪ್ಪ ಅಜ್ಜೇರ ಹಾಗೂ ಕಮಿಟಿಯ ಎಲ್ಲಾ ಸದಸ್ಯರು ಊರಿನ ಗ್ರಾಮಸ್ಥರು ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದರು.

Be the first to comment

Leave a Reply

Your email address will not be published.


*