ಬಸವಸಾಗರದಿಂದ 2.50 ಲಕ್ಷ ಕ್ಯೂಸೆಕ್ ನೀರು ಕೃಷ್ಣೆಗೆ: ಛಾಯಾ ಭಗವತಿ ದೇವಾಲಯದ ಗರ್ಭಗುಡಿ ಜಲಾವೃತ್ತ

ವರದಿ:-ರಾಘವೇಂದ್ರ ಮಾಸ್ತರ ಸುರಪುರ

ಯಾದಗಿರಿ : ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪೂರ ಜಲಾಶಯದಿಂದ ಕಳೆದ ಎರಡು ಮೂರು ದಿನಗಳಿಂದ ಸುಮಾರು 2.50 ಲಕ್ಷ ಕ್ಯೂಸೆಕ ದಿಂದ 2.80 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಸಿದ್ದರಿಂದ ನಾರಯಣಪೂರದ ಪ್ರಸಿದ್ದ ಶ್ರೀ ಛಾಯಾ ಭಗವತಿ ದೇವಾಲಯ ಮುಳುಗಡೆಯಾಗಿದ್ದು, ಗರ್ಭಗುಡಿ ಸಂಪೂರ್ಣ ಜಲಾವೃತ್ತಗೊಂಡಿದೆ. ಹೀಗಾಗಿ ದೂರದಿಂದಲೆ ದೇವಿಯ ಪೂಜೆಯನ್ನು ಸಲ್ಲಿಸಲಾಗುತ್ತಿದೆ.

 

ಮಂಗಳವಾರ ಸಹ ಆಲಿಮಟ್ಟಿಯಿಂದ 2.50 ಲಕ್ಷ ನೀರು ನಾರಾಯಣಪೂರ ಜಲಾಶಯಕ್ಕೆ ಬಿಟ್ಟಿದ್ದರಿಂದ ಬಸವಸಾಗರ ಪೂರ್ಣ ಭರ್ತಿಯಾಗಿದೆ. ಹೀಗಾಗಿ ಬಸವಸಾಗರಕ್ಕೆ 2.65 ಕಲ್ಷ ಕ್ಯೂಸೆಕ್ ಒಳಹರಿವು ಹೆಚ್ಚಾಗಿದ್ದರಿಂದ 2.54 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಇದರಿಂದಾಗಿ ನದಿ ಪಾತ್ರದಲ್ಲಿ ಬರುವ ದೇವಾಲಯಗಳು ಮತ್ತು ಸೇತುವೆಗಳು ಮುಳುಗಡೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ ಮಳೆ ಇಲ್ಲದಿದ್ದರೂ ಮೂರು ತಿಂಗಳ ಸತತ ಪ್ರವಾಹ ಎದರಿಸಿತ್ತು. ಆದರೆ ಈ ಸಲ ಜಿಲ್ಲೆಯಲ್ಲಿ ಸತತ ಮಳೆ ಇದ್ದು ಜಿಲ್ಲೆಯ ಎರಡು ಪ್ರಮುಖ ನದಿಗಳು ಅಪಯಮಟ್ಟ ಮೀರಿ ನೀರು ಉಕ್ಕಿ ಹರಿಯುತ್ತಿವೆ. ಇದರಿಂದ ನದಿ ಪಾತ್ರ ಅನೇಕ ಗ್ರಾಮಗಳು ಜನೀನುಗಳಿಗೆ ನೀರು ನುಗ್ಗಿ ಕಲಾವತ್ತಗೊಂಡ ಅಪಾರ ಬೆಳೆ ಹಾನಿಯಾಗಿದೆ. ಕಳೆದ ಸಲಿನಲ್ಲಿ ಹಾನಿಗೊಳಗಾದ ರೈತರಿಗೆ ಇನ್ನೂ ಪರಿಹಾರ ಸಿಗದೆ ಇರುವಾಗ ಈ ವರ್ಷವೂ ಪ್ರವಾಹದಿಂದ ಸಾಲಸೂಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಹಾನಿಯಾಗಿ ಸಾಲಕ್ಕೆ ಗುರಿಯಾಗಬೇಕಾಗಿದೆ ಎಂಬುದು ರೈತರ ಆತಂಕವಾಗಿದೆ.
ಲೇವಲ ನದಿಗಳು ಮಾತ್ರವಲ್ಲ ಜಿಲ್ಲೆಯ ಬಹುತೇಕ ಹಳ್ಳಕೊಳ್ಳಗಳು ಭರ್ತಿಯಾಗಿ ಹರಿಯುತ್ತಿದ್ದು, ಅವುಗಳಿಂದಲೂ ರೈತರ ಜಮೀನಿಗೆ ಹಾನಿ ಉಂಟು ಮಾಡಿದೆ. ಈಗಾಗಲೇ ರೈತರು ನದಿ ಪಾತ್ರದಲ್ಲಿ ಕೃಷಿಗಾಗಿ ಅಳವಡಿಸಲಾಗಿದ್ದ ವಿದ್ಯುತ್ ಮೋಟಾರು ತೆರವುಗೊಳಿಸಿದ್ದರಿಂದ ಇತರ ಜಮೀನುಗಳಿಗೆ ನೀರು ಹರಿಸಲು ಸಂಕಷ್ಟ ಎದರಿಸುವಂತಾಗಿದೆ.
ಜಿಲ್ಲಾಡಳಿತ ಕೂಡಲೆ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಲು ಮುಂದಾಗಬೇಕು ಎಂಬುದು ಪ್ರಗತಿ ಪರ ರೈತರ ಆಗ್ರಹವಾಗಿದೆ.

Be the first to comment

Leave a Reply

Your email address will not be published.


*