ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ನವನಗರದ ಹೊರವಲಯ ರಸ್ತೆಯಲ್ಲಿರುವ ಶ್ರೀ ಮಗದ ಕೆಂಚಮ್ಮನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
ಪ್ರತಿ ವರ್ಷ ಭಜನೆಯೊಂದಿಗೆ ಸಾಮೂಹಿಕ ಪ್ರಸಾದ ವಿತರಿಸುವ ಮೂಲಕ ವೈಭವಯುತವಾಗಿ ಅಮ್ಮನ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗುತ್ತಿತ್ತು.ಆದರೆ ಈ ವರ್ಷ ಕೋವಿಡ್-19 ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಹೆಚ್ಚು ಜನರು ಸೇರದೆ ಸರಳ ಸಿಹಿ ಪ್ರಸಾದ ಹಂಚುವುದರ ಮೂಲಕ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮವನ್ನು ದೇವಸ್ಥಾನದ ಕಮಿಟಿಯ ಅಧ್ಯಕ್ಷರಾದ ರಾಮ ಚಾವ್ಲಾ ನೇತೃತ್ವದಲ್ಲಿ ಯಶಸ್ವಿಗೊಳಿಸಿದರು.
ದೇವಿಯ ಪರಮ ಭಕ್ತರಿಗೆ ಸನ್ಮಾನ
ದೇವಿಯ ಪರಮಭಕ್ತರಾದ ಹೂವಪ್ಪ ರಾಠೋಡ ಜಿಲ್ಲಾ ಪಂಚಾಯತ ಸದಸ್ಯರು ಪ್ರತಿವರ್ಷದಂತೆ ಈ ವರ್ಷ ಶ್ರಾವಣಮಾಸದಂದು ದೇವಸ್ಥಾನಕ್ಕೆ ಆಗಮಿಸಿ ಕಮಿಟಿಯಿಂದ ಸನ್ಮಾನ ಪಡೆಯುವುದರಮೂಲಕ ದೇವಿಯ ಆಶಿರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಚಂದ್ರಶೇಖರ ತಾಂಡೂರ,ಖಜಾಂಚಿಯಾದ ನಾಗರಾಜ ದೊಂಗಡಿ ಹಿರಿಯರು ಹಾಗೂ ವಿಹಾರ ಹೊಟೇಲ್ ಮಾಲಿಕರು,ಕಾರ್ಯದರ್ಶಿ ವಿಜಯ ಸುಲಾಖೆ, ಸದಸ್ಯರಾದ ವಿಠ್ಠಲ ಜೋಶಿ, ಬಸವರಾಜ ಹೆಳವರ,ನಾರಾಯಣ ಶಟ್ಟಿ ಉಪಸ್ಥಿತರಿದ್ದರು.
Be the first to comment