ಶಹಾಬಾದ : ಚಿಂಚೋಳಿ ತಾಲೂಕಿನ ಹೂಡದಳ್ಳಿ ಗ್ರಾಮದಲ್ಲಿ ನಡೆದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ನಂತರ ಕೊಲೆ ಮಾಡಿರುವ ದುಷ್ಕರ್ಮಿಗಳನ್ನು ಗಲ್ಲುಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಸೋಮವಾರ ತಾಲೂಕಾ ಹಾಗೂ ಗ್ರಾಮೀಣ ಕೋಲಿ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು . ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಕಾರರು ಚಿಂಚೋಳಿ ತಾಲೂಕಿನ ಹೂಡದಳ್ಳಿ ಗ್ರಾಮದ ಕಾಮುಕ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ನಂತರ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯಾಗಿದೆ . ಕೂಡಲೇ ಆರೋಪಿಗೆ ಸರಕಾರ ಮರಣದಂಡನೆಯಂತಹ ಕಠಿಣ ಶಿಕ್ಷೆಗೆ ಒಳಪಡಿಸಬೇಕು.ಅಂದಾಗ ಮಾತ್ರ ಮುಂದೆ ಇಂತಹ ಘಟನೆಗಳಿಗೆ ಕಡಿವಾಣ ಸಾಧ್ಯ.ಎಂದು ಹೇಳಿದರು.ಈ ಸಂದರ್ಭದಲ್ಲಿ ಶಿವ ಕುಮಾರ್ ತಲ್ವಾರ್
ಲೋಹಿತ್ ಮಾಲ್ಕ್ ಮಾಡಿದರು
ನಾಗರಾಜ್ ಯದ್ರಮಿ
ರವಿ ಸಂತಮಾ
ರಾಜು ಸನ್ಮಾ
ಸಹನು ಹಾಲ್ಕತಿ
ಮಲಿಕಾರ್ಜು.ಇಟಗಿ
ಮಂಜು ಎಟಗಿ
ಬೆಲ್ಲೆಪ್ಪ ಕಂದಲ್
ಶಿವು ನಾಟೆಕರ್
ರವಿ ರಾವೂರ್
ಎರ್ರಣ್ಣ ಜೀವಂಗಿ
ರಾಹುಲ್ ಜಿರ್ಕಲ್
ರಗು ನಾಟೆಕರ್
ಮೊನೇಶ್ ಕೊಡ್ಲಿ
ಮಲ್ಲು ತಲ್ವಾರ್ ಹಾಜರಿದ್ದರು
Be the first to comment