ಯುರಿಯಾ ಗೊಬ್ಬರಕ್ಕೆ ಹೆಚ್ಚಿನ ಹಣ ವಸೂಲಿ ಮಾಡಿದ ಮುದ್ದೇಬಿಹಾಳ ಗೊಬ್ಬರ ಅಂಗಡಿ ಮಾಲಿಕ…..! ಸ್ಥಳಕ್ಕೆ ಕೃಷಿ ಸಹಾಯಕ ಅಧಿಕಾರಿ ಬೇಟಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ ಅ.15:

ರಾಜ್ಯಾದ್ಯಂತ ಕಡಿಮೆ ಪ್ರಮಾಣದಲ್ಲಿರುವ ಯುರಿಯಾ ಗೊಬ್ಬರದ ಲಾಭ ಮಾಡಿಕೊಳ್ಳುತ್ತಿರುವ ಗೊಬ್ಬರ ಅಂಗಡಿಕಾರರು ರೈತರಿಂದ ಮೂರು ಪಟ್ಟು ಹಣವನ್ನು ವಸೂಲಿ ಮಾಡುತ್ತಿದ್ದ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೊಬ್ಬರದ ಅಂಗಡಿ ಮಾಲಿಕರು ನೋಟಿಸ್ ಎದುರಿಸುವಂತಾಗಿದೆ.

ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಗೊಬ್ಬರದಂಡಿಯ ಮಾಲಿಕರೊಬ್ಬರು ಅಂಗಡಿಗೆ ಬಂದ ರೈತನೊಬ್ಬರಿನಿಗೆ ಯುರಿಯಾ ಗಿಬ್ಬರವನ್ನು ಮೂರುಪಟ್ಟದ ಅಧಿಕ ಬೆಲೆ ಕೊಡುತ್ತಿದ್ದು ಕೂಡಲೇ ಅಂಗಡಿ ಮಾಲಿಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸ್ಥಳೀಯ ರೈತರು ಆಗ್ರಹಿಸಿದ್ದಾರೆ.



ಈಗಾಗಲೇ ರಾಜ್ಯಾದ್ಯಂತ ಕೊರೊನಾದಿಂದ ತತ್ತರಿಸಿರುವ ರೈತರು ತಮ್ಮ ಪತ್ನಿಯರ ತಾಳಿಯನ್ನು ಒತ್ತೆ ಇಟ್ಟು ಹಣ ಸಂಗ್ರಹಿಸಿ ಜಮೀನುಗಳಿಗೆ ಗಬ್ಬರ ಬೀಜಗಳನ್ನು ಹಾಕುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವು ಗೊಬ್ಬರ ಅಂಗಡಿಕಾರರು ಗೊಬ್ಬರದ ಧರಕ್ಕಿಂತಲೂ ಹೆಚ್ಚಿನ ಬೆಲೆ ಪಡೆಯುತ್ತಿದ್ದು ಇಂತಹವರಿಗೆ ಸರಕಾರಿ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕವಾಗಿ ಸಿಕ್ಕಿಬಿದ್ದ ಗೊಬ್ಬರ ಅಂಗಡಿ ಮಾಲಿಕರು:
ರೈತರಿಗೆ ಮೊದಲಿಗೆ ಮೂರು ಪಟ್ಟು ಧರದಲ್ಲಿ ಯೂರಿಯಾ ಗೊಬ್ಬರವನ್ನು ನೀಡಿದ್ದಲ್ಲದೇ ಗೊಬ್ಬರ ಅಂಗಡಿ ಮಾಲಿಕರು ರೈತರಿಗೆ ನಕಲಿ ಬಿಲ್ ನೀಡಿದ್ದಾರೆ. ಮೂರು ಪಟ್ಟುಧರ ಪಡೆದು ನಕಲಿ ಬಿಲ್ ಯಾಕೆ ನೀಡಿದ್ದಿರಿ ಎಂದು ಕೆಲ ರೈತರ ಕೇಳಲು ಅಂಗಡಿಗೆ ಹೋದ ಸಂದರ್ಭದಲ್ಲಿ ಅಂಗಡಿಯಲ್ಲಿ ಮಾಲಿಕರು ಇದು ನಮ್ಮ ಅಂಗಡಿಯದಲ್ಲ ಎಂದು ವಾದವನ್ನು ಮಾಡಿದರು. ಅಷ್ಟೇ ಅಲ್ಲದೇ ಗೊಬ್ಬರೂ ನಮ್ಮದಲ್ಲ ಎಂದು ಖ್ಯಾತೆ ತೆಗೆದರು. ಆದರೆ ರೈತರ ಜಾನ್ಮೇಯ ಮಾತುಗಳನ್ನು ಕೇಳಿದ ಅಂಗಡಿಯವರ ಗುಂಪಿನಲ್ಲಿಯೊಬ್ಬರು ಈ ರೈತನ ಗೊಬ್ಬರ ಪಾಕೀಟು ನಮ್ಮ ಅಂಗಡಿಯದೇ ಆದರೂ ಅವರು ತೋರಿಸುತ್ತಿರುವ ನಕಲಿ ಬಿಲ್ ನಮ್ಮದಲ್ಲ ಎಂದು ಹೇಳಿ ತಪ್ಪಿನಲ್ಲಿ ಸಿಕ್ಕಿಕೊಂಡರು.



ಅಂಗಡಿಕಾರರಿಗೆ ನೋಟಿಸ್:
ಮೊದಲೇ ಯುರಿಯಾ ಗೊಬ್ಬರ ಕಡಿಮೆ ಪ್ರಮಾಣದಲ್ಲಿದ್ದ ಕಾರಣ ಇತ್ತಿಚಿಗಷ್ಟೇ ಎಲ್ಲ ಗೊಬ್ಬರ ಅಂಗಡಿಕಾರರಿಗೆ ಸಭೆ ಕರೆದು ಯಾವುದೇ ಕಾರಣಕ್ಕೂ ಯುರಿಯಾಗೆ ಹೆಚ್ಚಿನ ಬೆಲೆ ಹಾಕಬಾರದು ಎಂದು ತಾಕೀತು ಮಾಡಲಾಗಿತ್ತು. ಆದರೆ ಪಟ್ಟಣದ ನೀಲಕಂಠೇಶ್ವರ ಗಿಬ್ಬರ ಅಂಗಡಿಯವರು ರೈತರೊಬ್ಬರಿಗೆ ಹೆಚ್ಚಿನ ಬೆಲೆ ಯುರಿಯಾ ನೀಡಿದ ದೂರು ಬಂದಿದ್ದು ಕೂಡಲೇ ಅವರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ಸಹಾಯಕ ಕೃಷಿ ಅಧಿಕಾರಿ ಆರ್.ಬಿ.ರುದ್ರವಾಡಿ ತಿಳಿಸಿದ್ದಾರೆ.



 

Be the first to comment

Leave a Reply

Your email address will not be published.


*