ಮಳೆಯಲ್ಲಿಯೇ ಡಾಂಬರಿಕರಣ ನಡೆಯುತ್ತಿರುವ ಜಾವೂರ-ಚಿತ್ತಾಪೂರ ರಸ್ತೆ….ಯುವ ಮುಖಂಡ ನಿಂದ ಆರೋಪ

ವರದಿ: ಬಸವರಾಜ ಬಿರಾದಾರ

ಜಿಲ್ಲಾ ಸುದ್ದಿಗಳು

ಲಿಂಗಸೂರು:

ತಾಲೂಕಿನ ಜಾವೂರ್ ಕ್ರಸಿನಿಂದ ಚಿತ್ತಾಪುರ ವರೆಗೆ ನಡೆಯುತ್ತಿರುವ ಡಾಂಬರಿಕರಣ ಮಳೆಯಲ್ಲಿ ನಡೆಯುತ್ತಿರುವುದರಿಂದ ಯುವ ಮುಖಂಡ ಚೆನ್ನಾರೆಡ್ಡಿ ಬಿರಾದಾರ ತೀವ್ರವಾಗಿ ಖಂಡಿಸಿದರು

ಈಗಾಗಲೇ ಸಾಕಷ್ಟು ಬಾರಿ ಅಧಿಕಾರಿಗಳಿಗೂ ತಿಳಿಸಿದರು ಕೂಡ ಕಳಪೆ ಕಾಮಗಾರಿ ನಡೆದಿದೆ ಎಂದು ತಿಳಿಸಿದರು ಕೂಡ ಅಧಿಕಾರಿಗಳು ಕೂಡ ಕ್ಯಾರೆ ಎನ್ನುತ್ತಿಲ್ಲ ಸುಮಾರು ಎರಡೂವರೆ ಕೋಟಿ ರೂಪಾಯಿ ಅಂದಾಜು ಮೊತ್ತದ ಈ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದೆ ಹಾಗೂ ಮಳೆಯಲ್ಲಿ ಡಾಂಬರೀಕರಣ ಮಾಡುತ್ತಿರುವುದು ದುರಂತ ಎಂದು ಅಸಮಾಧಾನ ಹೊರಹಾಕಿದರು.



ಅಂದಾಜು ಪತ್ರಿಕೆಯ ಪ್ರಕಾರ ಕಾಮಗಾರಿ ನಡೆಯುತ್ತಿಲ್ಲ ಹಾಗೂ 12 ಲಕ್ಷ ರೂಪಾಯಿಗಳ ಮೊತ್ತದ ಸಿಡಿಗಳು ಕೂಡ ತೀವ್ರ ಕಳಪೆ ಮಟ್ಟದಿಂದ ಕೂಡಿದೆ ಎಂದು ಟೀಕಿಸಿದರು. ಮಳೆಗಾಲದಲ್ಲಿ ನಡೆದಿರುವ ಡಾಂಬರೀಕರಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆತಿಳಿಸಿದರು ಕೂಡ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬಾರದೇ ಕಾಮಗಾರಿಯನ್ನು ಪರಿಶೀಲಿಸದೆ ಮೌನವಾಗಿರುವುದು ಕಂಡು ಗ್ರಾಮಸ್ಥರಲ್ಲಿಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ತಿಳಿಸಿದರು ಅಂದಾಜು ಪತ್ರಿಕೆಯ ಪ್ರಕಾರ ಕಾಮಗಾರಿಯು ನಡೆಯದೇ ಹೋದರೆ ಇನ್ನೆರಡು ದಿನಗಳಲ್ಲಿ ರೈತರೊಂದಿಗೆ ಹೋರಾಟಕ್ಕೆ ಇಳಿಯಲಾಗುವುದು ಎಂದು ಚೆನ್ನಾರೆಡ್ಡಿ ಬಿರಾದಾರ ತಿಳಿಸಿದರು. ಇವರ ಜೊತೆಗೆ ಸ್ಥಳೀಯ ಬಿಜೆಪಿ ಮುಖಂಡರಾದ ಚಂದ್ರಶೇಖರ್ ಪಾಟೀಲ್ ಇದ್ದರು

Be the first to comment

Leave a Reply

Your email address will not be published.


*