ಕೋರೊನಾ ಹೋರಾಟದಲ್ಲಿ ಪ್ರಧಾನಿ ಮೋದಿಯೊಂದಿಗೆ ಕೈಜೋಡಿಸಿ: ಶ್ರೀಮತಿ ಡಿ.ಆರ್.ದೇಸಾಯಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ದೇಶದ ೭೫ನೇ ಸ್ವಾತಂತ್ರ್ಯೋತ್ಸವಕ್ಕೆ ಸಾಕಷ್ಟು ಅಡ್ಡಿಯಾಗಿದ್ದ ಕೊರೊನಾ ಸಂದಿಗ್ಧ ಪರಿಸ್ಥಿತಿಗೆ ದೇಶದ ಪ್ರಧಾನಿ ಸೂಕ್ತ ಉತ್ತರ ನೀಡಿದ್ದು ನಾವೆಲ್ಲರೂ ಅವರಿಗೆ ಕೈಜೋಡಿಸುವ ಮೂಲಕ ದೇಶದ ಏಕತೆಗೆ ಸಾಕ್ಷಿಯಾಗಬೇಕು ಎಂದು ಮುಖ್ಯಗುರುಮಾತೆ ಡಿ.ಆರ್.ದೇಸಾಯಿ ಹೇಳಿದರು.


ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಶ್ರೀ ಘನಮಠೇಶ್ವರ ಪಬ್ಲಿಕ್ ಸ್ಕೂಲ್ ಮುಖ್ಯ ಗುರುಮಾತೆ ಡಿ.ಆರ್.ದೇಸಾಯಿ ಅವರು ಧ್ವಜಾರೋಹಣ ನೆರವೇರಿಸಿದರು.

ತಾಲೂಕಿನ ಕುಂಟೋಜಿ ಗ್ರಾಮದ ಘನಮಠೇಶ್ವರ ಪಬ್ಲಿಕ್ ಸ್ಕೂಲ್‌ನಲ್ಲಿ ೭೫ನೇ ಸ್ವಾತಂತ್ರ್ಯೋತ್ಸವ ದಿನದಂದು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೋರೊನಾ ವೈರಸ್‌ಗಾಗಿ ಹೋಗಲಾಡಿಸಲು ಈಗಾಗಲೇ ಪ್ರಧಾನಿ ಮೋದಿಯವರು ಮಾತನಾಡಿದ್ದು ಶೀಘ್ರದಲ್ಲಿಯೇ ಇದಕ್ಕೆ ಒಂದು ಸೂಕ್ತ ಉತ್ತರ ನೀಡಲಿದ್ದಾರೆ. ಆದರೂ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ರಕ್ಷಣೆಗಾಗಿ ದುಡಿದ ಆರೋಗ್ಯ, ಪೋಲಿಸ ಇಲಾಖೆಗಳಿಗೆ ನಾವೆಲ್ಲರೂ ಋಣಿಯಾಗಿರಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥೆಯಾದ ರೇಖಾ ಬಾರಖೇರ, ಶಿಕ್ಷಕಿಯರಾದ ರಷ್ಮಿ ರಾಯಚೂರ, ಮಾಬನ್ನಿ ಮುಲ್ಲಾ, ಅನುಪಮಾ ಕತ್ತಿ, ಚೈತ್ರಾ, ಮಂಜುನಾಥ ಸಜ್ಜನ ಇದ್ದರು.

Be the first to comment

Leave a Reply

Your email address will not be published.


*