ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ಅ.15:
ಮುದ್ದೇಬಿಹಾಳ ತಾಲೂಕಾ ಪತ್ರಕರ್ತರ ಸಂಘಗಳಿಗೆ ಶನಿವಾರ ನಡೆದ 75ನೇ ಸ್ವತಂತ್ರ ಸಂಭ್ರಮಾಚರಣೆ ಸಮಯದಲ್ಲಿ ತಾಲೂಕಾ ಅಧಿಕಾರಿಗಳಿಂದ ಭರ್ಜರಿ ಕೊಡುಗೆ ನೀಡಿದಂತಾಗಿದೆ.
ಹೌದು, ಶನಿವಾರ 75ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭವನ್ನು ಮುಗಿಸಿದ ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಅವರು ಪಟ್ಟಣದಲ್ಲಿ ತಾಲೂಕಾ ಪತ್ರಕರ್ತರ ಅನುಕೂಲಕ್ಕಾಗಿ ಪತ್ರಿಕಾ ಭವನವನ್ನು ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಿದ್ದು ತಾಲೂಕಾ ಪತ್ರಕರ್ತರಿಗೆ ಭರ್ಜರಿ ಕೊಡುಗೆ ನೀಡಿದಂತಾಗಿದೆ.
ಮುದ್ದೇಬಿಹಾಳ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಸಮಾಜ ಸೇವಕ ಶಾಂತಗೌಡ ನಡಹಳ್ಳಿ ಅವರು, ಪಟ್ಟಣದಲ್ಲಿ ಪುರಸಭೆ ವ್ಯಾಪ್ತಿಗೆ ಬರುವ ಹಾಗೂ ಎಲ್ಲರಿಗೂ ಅನುಕೂಲಕರವಾದ ಸೂಕ್ತ ಜಾಗದಲ್ಲಿ ಪತ್ರಿಕಾ ಭವನವನ್ನು ನಿರ್ಮಿಸಿಕೊಟ್ಟರೆ ಬಹು ವರ್ಷದ ಪತ್ರಕರ್ತರ ಬೇಡಿಕೆಯನ್ನು ಈಡೇರಿದಂತಾಗುತ್ತದೆ ಎಂದು ತಾಲೂಕಾ ದಂಢಾಧಿಕಾರಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಮುದ್ದೇಬಿಹಾಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಮೀನಸಾಬ ಮುಲ್ಲಾ, ಲಾಡ್ಲೇಮಶಾಕ ನದಾಫ, ಪರಶುರಾಮ ಕೊಣ್ಣೂರ, ಸಾಗರ ಉಕ್ಕಲಿ, ನಾರಾಯಣ ಮಾಯಾಚಾರಿ, ಶಂಕರ ಹೆಬ್ಬಾಳ, ಗುಲಾಮಮಹ್ಮದ ದಫೇದಾರ ಸೇರಿದಂತೆ ತಾಲೂಕಿನ ಪತ್ರಕರ್ತರು ಇದ್ದರು.
Be the first to comment