ಮುದ್ದೇಬಿಹಾಳ ತಾಲೂಕಾ ಆಡಳಿತದಿಂದ 74ನೇ ಸ್ವತಂತ್ರ್ಯೊತ್ಸವ… ಕೇವಲ ಆಹ್ವಾನ ಪತ್ರಿಕೆಗೆ ಸೀಮಿತಗೊಂಡ ಸಾಮಾಜಿಕ ಅಂತರ…! ಆಶಾ ಕಾರ್ಯಕರ್ತೆಯರನ್ನು ನಿರ್ಲಕ್ಷಿಸಿದ ತಾಲೂಕಾ ಆಡಳಿತ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಸಾಮಾಜಿಕ ಅಂತರ ಕಳೆದುಕೊಂಡ ತಾಲೂಕಾ ಆಡಳಿತದ ಸನ್ಮಾನ ಸಮಾರಂಭ

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ ಆ.15:

ಪ್ರಸ್ತುಕ 2020ನೇ ವರ್ಷ ಕೊರೊನಾ ವೈರಾನುದಿಂದ ವಿಶ್ವಕ್ಕೆ ಕರಾಳ ವರ್ಷವಾಗಿದೆ. ಆದರೆ ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತ ಅತ್ಯುತ್ತಮವಾಗಿದೆ. ಆದ್ದರಿಂದಲೇ ದೇಶದ 74ನೇ ಸ್ವತಂತ್ರ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ಆಲೂಕಾ ಆಡಳಿತ ಮಂಡಳಿಯಿಂದ ಹಮ್ಮಿಕೊಳ್ಳಲಾದ 74ನೇ ಸ್ವತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾಗೆ ಇತರೆ ದೇಶಗಳಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ನಮ್ಮ ದೇಶದಲ್ಲಿ ಪೌಷ್ಠಿಕಾಂಶ ಹೆಚ್ಚಾಗಿರುವ ಕಾರಣವೇ ಕೊರೊನಾಗೆ ಬಲಿಯಾದ ಸಂಖ್ಯೆ ಕಡಿಮೆಯಾಗಿದೆ. ಇಂತಹ ಸ್ಥಿತಿಯಲ್ಲೂ ಚೀನಾ ದೇಶ ಭಾರತದ ಗಡಿ ಭಾಗಕ್ಕೆ ಕಣ್ಣು ಹಾಕಿತ್ತು. ಆದರೆ ಪ್ರಧಾನಿ ಮೋದಿಯವರು ಚೀನಾಗೆ ತಕ್ಕ ಉತ್ತರ ನೀಡಿದ್ದಾರೆ. ನಾವೆಲ್ಲರೂ ಪ್ರಧಾನಿಯವರಿಗೆ ಕೈಜೋಡಿಸಿದರೆ ಚೀನಾ ನಮ್ಮ ದೇಶದ ಗುಲಾಮವಾಗುವುದು ನಿಶ್ಚಿತ ಎಂದು ಅವರು ಹೇಳಿದರು.



ಕೋವಿಡ್-19 ವಾರಿಯರ್ಸ್ ಗೆ ಸನ್ಮಾನ:

ಕೋವಿಡ್-19ರ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೇ ಇತರೆ ಜೀವಗಳಿಗೆ ಆಸರೆಯಾಗಿದ್ದು ಅವರ ಸೌರಕ್ಷಣೆಗೆ ಮುಂದಾದ ಆರೋಗ್ಯ, ಕಂದಾಯ ಹಾಗೂ ಪುರಸಭೆ ಇಲಾಖೆ ಸಿಬ್ಬಂಧಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಸಾಮಾಜಿಕ ಅಂತರ ಕಳೆದುಕೊಂಡ ತಾಲೂಕಾ ಆಡಳಿತದ ಸನ್ಮಾನ ಸಮಾರಂಭ

ಆಶಾ ಕಾರ್ಯಕರ್ತೆಯರನ್ನು ನಿರ್ಲಕ್ಷಿಸಿದ ತಾಲೂಕಾ ಆಡಳಿತ ಹಾಗೂ ಆರೋಗ್ಯ ಇಲಾಖೆ:

ಕೋವಿಡ್-19ರ ಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆ ಹಾಗೂ ತಾಲೂಕಾ ಆಡಳಿತವು ಆಶಾ ಕಾರ್ಯಕರ್ತೆಯರನ್ನು ಕೊರೊನಾ ಬಂದಂತಹ ವ್ಯಕ್ತಿಗಳ ಮಾಹಿತಿಗಾಗಿ ಹಾಗೂ ಅವರಿಂದ ವಿವಿಧ ರೀತಿಯ ಸಹಾಯವನ್ನು ಪಡೆದುಕೊಂಡು ಸ್ವತಂತ್ರಯ ದಿನಾಚರಣೆಯಲ್ಲಿ ಪುರಸಭೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ನೀಡಿದಂತೆ ಗೌರವವನ್ನು ನೀಡದೇ ನಿರ್ಲಕ್ಷ ತೋರಲಾಗಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿತು.

ಕೇವಲ ಆಹ್ವಾನ ಪತ್ರಿಕೆಗೆ ಸೀಮಿತವಾದ ಸಾಮಾಜಿಕ ಅಂತರ:

ಸ್ವತಂತ್ರ ದಿನಾಚರಣೆಯಂದು ಮುದ್ದೇಬಿಹಾಳ ತಾಲೂಕಾ ಆಡಳಿತದಿಂದ ಛಾಪಿಸಲಾದ ಆಹ್ವಾನ ಪತ್ರಿಕಯ ಕೊನೆಯ ಪುಟದಲ್ಲಿ ಆಹ್ವಾನಿತರು ಕಡ್ಡಾಯವಾಗಿ ಮಾಸ್ಕ ಹಾಗೂ ಸಾಮಾಜಿಕ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕೆಲವರಲ್ಲಿ ಮಾಸ್ಕ ಕಂಡು ಬಂದಿತು. ಆದರೆ ಸಾಮಾಜಿಕ ಅಂತರ ಮಾತ್ರ ಮಾಯವಾಗಿತ್ತು.

ತಹಸೀಲ್ದಾರ ಜಿ.ಎಸ್.ಮಳಗಿ ಧ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

Be the first to comment

Leave a Reply

Your email address will not be published.


*