ರಾಯಚೂರು:
ಲಿಂಗಸೂರು ತಾಲೂಕಿನ ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಯಾದ ಪಂಪಾಪತಿ ಹಿರೇಮಠ್ ಇವರ ಕಿರುಕುಳದಿಂದ ತಾಲೂಕ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ ಗಂಭೀರವಾದ ಆರೋಪ ತಾಲೂಕಿನಲ್ಲಿ ಹರಿದಾಡುತ್ತಿದೆ
ಲಿಂಗಸೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರ ಸ್ವೀಕರಿಸಿದ ನಂತರ ಒಂದಲ್ಲ ಒಂದು ಕಾರಣಕ್ಕೆ ಪಿಡಿಒ ಗಳಿಗೆ ಕಿರುಕುಳ ನೀಡುತ್ತಿರುವುದರ ಕುರಿತಂತೆ ಈಗಾಗಲೇ ಜಿಲ್ಲಾ ಪಂಚಾಯತ್ ಆಂತರಿಕ ದೂರು ಸಮಿತಿ ಅಧ್ಯಕ್ಷರಿಗೆ ದೂರು ಸಲ್ಲಿಸಲಾಗಿದೆ
ಆದರೆ ಈ ಕುರಿತಂತೆ ಯಾವುದೇ ಕ್ರಮ ಕೈಗೊಂಡಿರುವುದು ಕಂಡುಬಂದಿಲ್ಲ ಪಂಪಾಪತಿ ಹಿರೇಮಠ್ ಅವರು ಮಹಿಳಾ ಪಿಡಿಒಗಳಿಗೆ ಮಾನಸಿಕ ಹಿಂಸೆ ಯಾಗುವಂತೆ ಹಾಗೂ ಕೌಟುಂಬಿಕ ಅಪನಂಬಿಕೆ ಉಂಟುಮಾಡುವಂಥ ಸಂದೇಶ್ ಕಲಿಸುತ್ತಿದ್ದಾರೆ ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ ಎಂಬುದು ದೂರಿನ ಸಾರಾಂಶ.
ದೂರು ನೀಡಿದ ಸಹದ್ಯೋಗಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ದೂರು ನೀಡಿದವರಿಗೆ ಬೆಂಬಲಕ್ಕೆ ನಿಲ್ಲಬಾರದೆಂದು ಬೆದರಿಕೆ ಹಾಕಿದ್ದಾರೆ ಎಂಬುದು ದೂರಿನಲ್ಲಿ ಉಲ್ಲೇಖಿಸಲಾಗಿದೆ
ಹಾಗೆಯೇ ವಿವಿಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಹಾಗೂ ಕರವಸೂಲಿಗಾರ ರಿಂದ 50000 ಗಳಂತೆ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ
ಕಿರುಕುಳದಿಂದ ಬೇಸತ್ತು ಹಲವು ಮಹಿಳಾ ಪಿಡಿಓಗಳು ಮಾನಸಿಕ ಹಿಂಸೆಗೊಳಗಾಗಿ ಆತ್ಮಹತ್ಯೆಯಂತಹ ಪ್ರಯತ್ನಕ್ಕೆ ಕೈಹಾಕಿರುವುದು ನಡೆದಿದೆ ಎಂದು ಮೂಲಗಳು ತಿಳಿಸಿವೆ
ಒಟ್ಟು 30 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರಂತರ ಕಿರುಕುಳ ನಡೆಯುತ್ತಿದೆ ಈ ಕುರಿತಂತೆ ದೂರು ನೀಡಲು ಮುಂದಾದ ಹಲವು ಪಿಡಿಒಗಳಿಗೆ ಸ್ವತಃ ಕಾರ್ಯನಿರ್ವಾಹಕ ಅಧಿಕಾರಿ ಅವರು ದೂರವಾಣಿ ಕರೆ ಮಾಡಿ ನಿಮ್ಮನ್ನು ನೌಕರಿಯಿಂದ ಅಭದ್ರ ಗೊಳಿಸುತ್ತೇವೆ ಎಂದು ಹೆಸರು ಹೇಳಲಿಚ್ಛಿಸದ ಪಿಡಿಓಗಳು ತಿಳಿಸಿದರು
ಈಗಾಗಲೇ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಅಂತಹ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ವರ್ಗಾವಣೆ ಮಾಡಿರುವುದು ಕಂಡುಬಂದಿದೆ.
ಇಷ್ಟಾದರೂ ಪಂಪಾಪತಿ ಹಿರೇಮಠ್ ಅವರ ಮೇಲೆ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಜಿಲ್ಲಾ ಪಂಚಾಯತ್ ಆಂತರಿಕ ದೂರು ಸಮಿತಿ ಅಧ್ಯಕ್ಷರಿಗೆ ಮುಖ್ಯಕಾರ್ಯನಿರ್ವಾಹಕ ಕಾರಿಗಳು ನಿರ್ದೇಶನ ನೀಡಿ ಮಾಹಿತಿ ನೀಡಲು ಸೂಚಿಸಿದರು ಕ್ರಮ ಕೈಗೊಂಡಿಲ್ಲ
Be the first to comment