ಸರ್ಜಾಪುರ ಗ್ರಾಮ ಪಂಚಾಯತ್ ಪಿಡಿಒ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು

ವರದಿ: ಬಸವರಾಜ ಬಿರಾದಾರ

 

ರಾಯಚೂರು:

ಲಿಂಗಸೂರು ತಾಲೂಕಿನ ಸರ್ಜಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಅವರ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿ ಇದೇ ಪಂಚಾಯತಿಯಲ್ಲಿ ಮುಂದುವರಿಸಲು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ರಾಯಚೂರು ಇವರಿಗೆ ಲಿಂಗಸ್ಗೂರು ಸಹಾಯಕ ಆಯುಕ್ತರ ಮುಖಾಂತರ ಮನವಿ ಸಲ್ಲಿಸಿದರು.

ಸರ್ಜಾಪುರ ಕುಪ್ಪಿಗುಡ್ಡ ಅಮರವತಿ ಗ್ರಾಮಸ್ಥರು ಶ್ರೀಮತಿ ಶೋಭಾರಾಣಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯವರು ನಾಲ್ಕೈದು ವರ್ಷಗಳಿಂದ ಸರ್ಜಾಪುರ ಗ್ರಾಮ ಪಂಚಾಯತ್ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರು ಪ್ರಾಮಾಣಿಕ ಅಧಿಕಾರಿ ಅನ್ನುವ ವಿಷಯ ಎಲ್ಲ ಸಾರ್ವಜನಿಕರು ತಿಳಿದಿರುವ ವಿಷಯ.



ಉದ್ಯೋಗ ಖಾತ್ರಿ ಯೋಜನೆಯ ಎಲ್ಲಾ ನಿಯಮಗಳನ್ನು ಸರ್ಕಾರದ ಅನುಸಾರವಾಗಿ ಪ್ರತಿಯೊಂದು ಬಡಕುಟುಂಬಗಳಿಗೆ ಕೂಡ ಉದ್ಯೋಗ ಒದಗಿಸುವುದು .ಜಾಬ್ ಕಾರ್ಡ್ ಒದಗಿಸುವುದು. ಕೂಲಿಕಾರ್ಮಿಕರಿಗೆ ಕೆಲಸ ಹಾಗೂ ನಿಗದಿತ ಸಮಯದಲ್ಲಿ ಕೂಲಿ ಪಾವತಿಯಾಗುವಂತೆ ಶ್ರಮಿಸುತ್ತಾರೆ.

ಉದ್ಯೋಗ ಖಾತ್ರಿ ಕೆಲಸದ ಬಗ್ಗೆ ಏನು ತಿಳಿದಿರದ ಜನರೆಲ್ಲರಿಗೂ ಯೋಜನೆಯ ಉದ್ದೇಶದ ಬಗ್ಗೆ ಮನವರಿಕೆ ಮಾಡಿಸಿ ಪ್ರತಿಯೊಂದು ಬಡಕುಟುಂಬಗಳಿಗೆ ಕೂಡ ಯೋಜನೆಯ ಸದುಪಯೋಗ ಪಡೆಯಲು ಪ್ರೇರೇಪಿಸುತ್ತಾರೆ

ಹದಿನಾಲ್ಕನೇ ಹಣಕಾಸು ಯೋಜನೆಯಡಿ ಇದುವರೆಗೂ ಸುಮಾರು ವರ್ಷದಿಂದಲೂ ಪೈಪ್ಲೈನ್ ಕಾಣದ ಪ್ರತಿಯೊಂದು ಓಣೆ ಗಳಿಗೂ ಪೈಪ್ಲೈನ್. ರಸ್ತೆ. ವಿದ್ಯುತ್ ದೀಪಗಳ. ವ್ಯವಸ್ಥೆ ಮಾಡಿಸಿ ಸಾರ್ವಜನಿಕ ತೊಂದರೆಗಳಿಗೆ ಸ್ಪಂದಿಸುತ್ತಾರೆ.

ಕರವಸೂಲಿ ಹಾಗು ಅದರ ಕಲ್ಪನೆಯನ್ನು ಜನರಿಗೆ ತಿಳಿಯಪಡಿಸಿ ರುತ್ತಾರೆ ಸ್ವತಃ ತಾವೇ ಗ್ರಾಮ ಪಂಚಾಯಿತಿ ಸಿಬ್ಬಂದಿ ಜೊತೆಗೆ ಹೋಗಿ ಜನರಿಗೆ ಮನವರಿಕೆ ಮಾಡಿ ಕರ ವಸೂಲಿ ಮಾಡಿ ಸಿಬ್ಬಂದಿಗಳಿಗೆ ಸಕಾಲಕ್ಕೆ ವೇತನ ಪಾವತಿ ಮಾಡಿರುತ್ತಾರೆ ಸಿಬ್ಬಂದಿಗಳನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರೂ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಲು ಅನುವು ಮಾಡಿಕೊಟ್ಟಿದ್ದಾರೆ.

ಸರ್ಜಾಪುರ್ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಹಳ್ಳಿಗಳಲ್ಲಿ ಸಾರ್ವಜನಿಕರು ಯಾರು ದೂರನ್ನು ನೀಡಿರುವುದಿಲ್ಲ. ಆದ್ದರಿಂದ ಇವರನ್ನು ಬೇರೆ ತಾಲೂಕಿಗೆ ಆಗಲಿ ಬೇರೆ ಪಂಚಾಯತಿ ಗಾಗಲಿ ವರ್ಗಾವಣೆ ಮಾಡದೆ ಇದೇ ಪಂಚಾಯತಿಯಲ್ಲಿ ಮುಂದುವರಿಸಲು ಗ್ರಾಮಸ್ಥರು ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಮನವಿ ಮಾಡಿದರು.

ಒಂದುವೇಳೆ ಅವರನ್ನು ನಮ್ಮ ಪಂಚಾಯಿತಿಯಲ್ಲಿ ಮುಂದುವರೆ ಸ ದಿಂದ ಪಕ್ಷದಲ್ಲಿ ಎಲ್ಲಾ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಅನಿರ್ದಿಷ್ಟ ಧರಣಿ ಕೊಡುತ್ತೇವೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸರ್ಜಾಪುರ ಕುಪ್ಪಿಗುಡ್ಡ ಎರಡು ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*