ಬೆಂಗಳೂರು:
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದ್ದು, ಶುಕ್ರವಾರ 5483 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,24,115ಕ್ಕೆ ಏರಿಕೆಯಾಗಿದೆ.
ಇಂದು ರಾಜ್ಯದಲ್ಲಿ 5483 ಹೊಸ ಪ್ರಕರಣಗಳು ವರದಿಯಾಗಿದ್ದು, 84 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇನ್ನು ರಾಜ್ಯದಲ್ಲಿ ಚೇತರಿಕೆ ಪ್ರಮಾಣವೂ ಉತ್ತಮವಾಗಿದ್ದು, ದಿನವೊಂದರಲ್ಲಿ 3130 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 2314 ಮಂದಿ ಸಾವನ್ನಪ್ಪಿದ್ದು, 72,005 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 609 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ನಗರದಲ್ಲಿ ಕೋವಿಡ್ ಮಹಾಮಾರಿಯ ಆರ್ಭಟ ಎಂದಿನಂತೆ ಮುಂದುವರಿದಿದ್ದು, 2,220 ಹೊಸ ಪ್ರಕರಣಗಳು ವರದಿಯಾಗಿವೆ. ಅಲ್ಲದೆ ನಗರದಲ್ಲಿ ಇಂದು 20 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ಬಳ್ಳಾರಿ 340, ಬೆಳಗಾವಿ 217, ಉಡುಪಿ 213, ದಕ್ಷಿಣ ಕನ್ನಡ 204, ಮೈಸೂರು 204, ಧಾರವಾಡ 180, ಶಿವಮೊಗ್ಗ 158, ಕಲಬುರ್ಗಿ 144, ದಾವಣಗೆರೆ 122, ರಾಯಚೂರು 119, ವಿಜಯಪುರ 118, ಬೆಂಗಳೂರು ಗ್ರಾಮಾಂತರ ಜಿಲ್ಲೆ 105 ಪ್ರಕರಣಗಳು ಪತ್ತೆಯಾಗಿವೆ.
ಬೀದರ್ – 104, ಹಾಸನ – 100, ತುಮಕೂರು- 95, ಉತ್ತರಕನ್ನಡ- 92, ಗದಗ – 92, ರಾಮನಗರ – 89, ಬಾಗಲಕೋಟೆ – 88, ಚಿಕ್ಕಮಗಳೂರು – 74, ಮಂಡ್ಯ – 65, ಹಾವೇರಿ – 57, ಯಾದಗಿರಿ – 56, ಚಿಕ್ಕಬಳ್ಳಾಪುರ – 48, ಚಾಮರಾಜನಗರ – 44, ಕೊಪ್ಪಳ – 38, ಚಿತ್ರದುರ್ಗ – 35, ಕೋಲಾರ – 32, ಮತ್ತು ಕೊಡಗಿನಲ್ಲಿ 30 ಪ್ರಕರಣಗಳು ವರದಿಯಾಗಿವೆ.
ಇಂದು ರಾಜ್ಯದಲ್ಲಿ ಒಟ್ಟು 22164 ರ್ಯಾಪಿಡ್ ಆ್ಯಂಟಿಜೆನ್ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ಮೂಲಕ ರಾಜ್ಯದಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಸೋಂಕು ಪತ್ತೆ ಪರೀಕ್ಷೆಗಳ ಒಟ್ಟು ಸಂಖ್ಯೆ 147255ಕ್ಕೆ ಏರಿಕೆಯಾಗಿದೆ.
Be the first to comment