ನರಕಲದಿನ್ನಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲೆ ಸಲ್ಲಿಸಿದ ದೂರು ಸತ್ಯಕ್ಕೆ ಸುಳ್ಳಾದ ಆಪಾದನೆ

ವರದಿ: ಬಸವರಾಜ್ ಬಿರಾದಾರ

ಜಿಲ್ಲಾ ಸುದ್ದಿಗಳು

ರಾಯಚೂರ(ಲಿಂಗಸೂರು) ಜು.31:

ಲಿಂಗಸೂರು ತಾಲೂಕಿನ ನರಕಲದಿನ್ನಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಡಾಟಾ ಎಂಟ್ರಿ ಆಪರೇಟರ್ ಅಮರೇಶ್ ನಾಯಕ್ ಇವರ ವಿರುದ್ಧ ಸಲ್ಲಿಸಿದ ದೂರು ಸತ್ಯಕ್ಕೆ ದೂರವಾದ ಆಪಾದನೆಯನ್ನು ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ಅಧಿಕಾರಿಯವರಿಗೆ ಸಹಾಯಕ ಆಯುಕ್ತರ ಮೂಲಕ ನರಕಲದಿನ್ನಿ ಗ್ರಾಮಸ್ಥರು ಆರೋಪಿಸಿದರು.



ನಮ್ಮ ನರಕಲದಿನ್ನಿಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿವೃದ್ಧಿ ಅಧಿಕಾರಿ ಖಾಜಾಹುಸೇನ್ಒಳ್ಳೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಮತ್ತು ಡಾಟಾ ಎಂಟ್ರಿ ಆಪರೇಟರ್ ಅಂಬರೀಶ್ ಅಧಿಕಾರಿಗಳ ಮಾರ್ಗದರ್ಶನದಂತೆ ಕೆಲಸ ನಿರ್ವಹಿಸುತ್ತಾರೆ
ಸದರಿ ಇಬ್ಬರು ಒಳ್ಳೆಯ ಕೆಲಸಗಳನ್ನು ನಿರ್ವಹಿಸುತ್ತಿದ್ದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುತ್ತಾರೆ ಇವರ ವಿರುದ್ದ ಕೆಲಸ ಕಾರ್ಯಗಳಿಗೆ ಅಡ್ಡಿ ಪಡಿಸುತ್ತಾ ಕಾರಣ ಮಾಡುತ್ತಾ ಸದರಿಯವರಿಗೆ ತುಂಬಾ ತೊಂದರೆಗಳನ್ನು ನೀಡುತ್ತಿದ್ದಾರೆ
2019 20 ನೇ ಸಾಲಿನಲ್ಲಿ ಯಾವುದೇ ಅವ್ಯವಹಾರ ಮತ್ತು ದುರ್ಬಳಕೆ ಮಾಡಿರುವುದಿಲ್ಲ ಅಭಿವೃದ್ಧಿ ಅಧಿಕಾರಿಗಳು ಬಂದಾಗಿನಿಂದಲೂ ಗ್ರಾಮಗಳಲ್ಲಿ 14ನೇ ಹಣಕಾಸು ಯೋಜನೆ ಅಡಿಯಲ್ಲಿ ಹಾಗೂ ಸರ್ಕಾರದ ಮಾರ್ಗಸೂಚಿ ಅಡಿಯಲ್ಲಿ ಕುಡಿಯುವ ನೀರಿನ ಸೌಲಭ್ಯ ಬೀದಿದೀಪದ ಸೌಲಭ್ಯ ರಸ್ತೆಗಳು ಚರಂಡಿಗಳು ನೀರಿನ ಸ್ವಚ್ಛತೆ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ರಿಪೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತ ಬಂದಿದ್ದಾರೆ
ಯಾವುದೇ ವಸತಿ ಯೋಜನೆ ಅಡಿಯಲ್ಲಿ ದುರ್ಬಳಕೆ ಮಾಡಿಕೊಂಡಿರುವುದಿಲ್ಲ ಸರ್ಕಾರ ಆದೇಶದಂತೆ ಕೆಲಸ ನಿರ್ವಹಿಸುತ್ತಾರೆ
ಆದ್ದರಿಂದ ನರಕಲದಿನ್ನಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಖಾಜಾ ಮಹಮ್ಮದ್ ಹುಸೇನ್ ಮತ್ತು ಡಾಟಾ ಎಂಟ್ರಿ ಆಪರೇಟರ್ ಅಮರೇಶ್ ಇವರ ಮೇಲೆ ಉದ್ದೇಶಪೂರ್ವಕವಾಗಿ ದೂರುದಾರರನ್ನು ಕೊಟ್ಟಿರುತ್ತಾರೆ ಆದ್ದರಿಂದ ಸದರಿ ಅವರನ್ನು ಇಲ್ಲಿಗೆ ಮುಕ್ತಾಯಗೊಳಿಸಿ ಗ್ರಾಮಗಳ ಅಭಿವೃದ್ಧಿ ಮಾಡಲು ಸಹಕಾರ ನೀಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ
ಸದರಿ ಅವರನ್ನು ಆರೋಪದಿಂದ ಮುಕ್ತಗೊಳಿಸಿದ್ದರು ತಾಲ್ಲೂಕು ಪಂಚಾಯತ ಮತ್ತು ಗ್ರಾಮ ಪಂಚಾಯತಿಯ ಮುಂಭಾಗದಲ್ಲಿ ಕುಳಿತು ಗ್ರಾಮಸ್ಥರು ಧರಣಿ ಕೊಡುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಲ್ಲಯ್ಯ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರು ಬಸಣ್ಣ ಕಟ್ಟಿಮನಿ ರಾಮಣ್ಣ ಜಾವೂರ ಮಾಜಿ ಗ್ರಾಮ ಪಂಚಾಯತ್ ಸದಸ್ಯರುಗಳು ಊರಿನ ಮುಖಂಡರು ಉಪಸ್ಥಿತರಿದರು.



 

Be the first to comment

Leave a Reply

Your email address will not be published.


*