ಮುದ್ದೇಬಿಹಾಳ ತಾಪಂ ಅವಿರೋಧಗೊಂಡು ಬಿಜೆಪಿ ಮಡಿಲಿಗೆ…! ನೂತನ ಅಧ್ಯಕ್ಷೆಯಾಗಿ ಲಕ್ಷ್ಮೀಬಾಯಿ ಹವಾಲ್ದಾರ ಅಧಿಕಾರಸ್ವೀಕಾರ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ ಜು.31:

ಮುದ್ದೇಬಿಹಾಳ ತಾಲೂಕ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಗೂಲಾಲ ಎರಚುವುದನ್ನು   ಒಂದು ವಾರದ ಮಟ್ಟಿಗೆ ಮುಂದೋಡಿಸಿದ ಕೀರ್ತಿ ಕಾಂಗ್ರೆಸ್ ಮಡಲಿಗೆ ಸಲ್ಲಿದಂತಾಗಿದೆ. ಹೌದು, ತಾಪಂ ಕೊರಂನಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರೇ ಹೆಚ್ಚಾಗಿದ್ದರೂ ಅಧ್ಯಕ್ಷಸ್ಥಾನ ಮಾತ್ರ ಅವಿರೋಧಗೊಂಡು ಬಿಜೆಪಿ ಮಡಲಿಗೆ ದೊರಕಿದ್ದು ಗುರುವಾರ ಬಿಜೆಪಿ ಕಾರ್ಯಕರ್ತರು ಗೂಲಾಲ ಆಟಕ್ಕೆ ಚಿತ್ರಣವಾಯಿತು.



ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕುಗಳ ರಚನೆಗೊಂಡ ನಂತರ ಮುದ್ದೇಬಿಹಾಳ ತಾಪಂ ಅಧ್ಯಕ್ಷರ ಚುನಾವಣೆ ಎದುರಾಗಿತ್ತು. ಚುನಾವಣೆಸುತ್ತೊಲೆ ಪ್ರಕಾರವೇ  ಜು.23 ರಂದು ಅಧ್ಯಕ್ಷ ಸ್ಥಾನದ ಫಲಿತಾಂಶ ಪ್ರಕಟವಾಗಬೆಕಿತ್ತು. ಆದರೆ ಕಾಂಗ್ರೆಸ್್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಲತಾ ಗೂಳಿ ಅವರಿಂದ ನಾಮಪತ್ರ ಸಲ್ಲಿಕೆಯಲ್ಲಿ ತೊಂದರೆಯಾದ ಕಾರಣ ಅವರ ನಾಮಪತ್ರವನ್ನು ರದ್ದುಪಡಿಸಲಾಗುತ್ತಿತ್ತು. ಇದರನ್ನು ಅರಿತ ಕಾಂಗ್ರೆಸ್ ಮುಖಂಡರು ಒಂದೇ ದಿನದಲ್ಲಿ ಫಲಿತಾಂಶ ಪ್ರಕಟಗೊಂಡರೆ ತೊಂದರೆಯಾಗಬಹುದು ಎಂದು ತಿಳಿದು ಅಂದು ಚುನಾವಣೆ ಅಧಿಕಾರಿಗಳು ನಡೆಸಿದ್ದ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಗೈರಾಗಿ ಉಳಿಯುವಂತೆ ನೋಡಿಕೊಂಡರು. ಈ ನೀತಿ ಸಾರ್ವಜನಿಕರ ವಲಯದಲ್ಲಿ ತಂತ್ರಗಾರಿಕೆಯಂತೆ ಕಂಡಿತು. ಆದರೆ ಅಂದೇ ಕಾಂಗ್ರೆಸ್ ಸದಸ್ಯರು ಚುನಾವಣಾ ಅಧಿಕಾರಿಗಳ ಸಭೆಗೆ ಹಾಜರಾಗಿದ್ದರೆ ಅದೇ ದಿನ ಕಾಂಗ್ರೆಸ್ ಪಕ್ಷದ ಲತಾ ಗೂಳಿ ಅವರ ನಾಮಪತ್ರವನ್ನು ರದ್ದು ಪಡಿಸಿ ಬಿಜೆಪಿ ಪಕ್ಷದ ಲಕ್ಷ್ಮೀಬಾಯಿ ಹವಾಲ್ದಾರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು. ಇದೊಂದೆತಪ್ಪಿಸಲು ಕಾಂಗ್ರೆಸ್ ಮುಖಂಡರು ಚುನಾವಣೆ ದಿನದಂದು ಹೈಡ್ರಾಮಾ ಮಾಡಿ ಫಲಿತಾಂಶವನ್ನು ಒಂದು ವಾರಕ್ಕೆ ಮುಂದೋಡುವಂತೆ ಮಾಡಿದ್ದರು. ಅದರಂತೆ ಇಂದು ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಬಿಜೆಪಿ ಮಡಿಲಿಗೆ ಸೇರಿಕೊಂಡಿದೆ.


ಸಾರ್ವಜನಿಕರಿಂದ ನಗೆಗೀಡಾದ ಕಾಂಗ್ರೆಸ್:

ಮುದ್ದೇಬಿಹಾಳ ತಾಪಂ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಸಾಕಷ್ಟು ಏರುಪೇರಾಗಿದ್ದು ಇದರಲ್ಲಿ ಕಾಂಗ್ರೆಸ್ ಮುಖಂಡರು ತಂತ್ರಗಾರಿಕೆ ಮಾಡಿ ಚುನಾವಣೆಯಲ್ಲಿ ಗೆಲವು ಸಾಧಿಸುತ್ತಾರೆ ಎಂಬ ಭರವಸೆಯನ್ನು ಇಟ್ಟುಕೊಂಡಿದ್ದ ಕಾಂಗ್ರೆಸ್ ಪಕ್ಷವು ಬಿಜೆಪಿ ಪಕ್ಷದಸದಸ್ಯೆಗೆ ಅಧ್ಯಕ್ಷ ಸ್ಥಾನವನ್ನು ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಿದ್ದು ಸಾರ್ವಜನಿಕರ ವಲಯದಲ್ಲಿ ನಗೆಪಾಟಿಲಾಗಿದೆ.

Be the first to comment

Leave a Reply

Your email address will not be published.


*