ರಾಜ್ಯ ಶಿಕ್ಷಣ ಇಲಾಖೆಯು ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ಅವರ ಪಾಠ ಕೈ ಬಿಟ್ಟಿರುವ ನಿರ್ಧಾರ ಹಿಂಪಡೆಯುವಂತೆ ಸದ್ದಾಂ ಕುಂಟೋಜಿ ಆಗ್ರಹ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ ಮಕ್ಕಳ ಪಠ್ಯದ ಹೊರೆ ಕಡಿಮೆ ಮಾಡಬೇಕು ಎಂಬ ಸರ್ಕಾರದ ನಿರ್ಧಾರ ಸ್ವಾಗತಾರ್ಹ, ಆದರೆ ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡು ಶಾಲಾ ಮಕ್ಕಳ ಪಠ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ , ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನ್ ಅದರ ಪಠ್ಯವನ್ನು ಕೈಬಿಡಲು ಮುಂದಾಗಿರುವುದು ವಿಷಾದನೀಯ. ಕೊವಿಡ್ ಪರಿಸ್ಥಿತಿಯಲ್ಲಿ ಸರ್ಕಾರ ಈ ರೀತಿಯ ಕೇಸರೀಕರಣ ಮತ್ತು ಕೋಮುವಾದದ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆಗಮನಿಸುವುದು ಸೂಕ್ತ.
ಟಿಪ್ಪು ಸುಲ್ತಾನ್ ಅವರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ , ಅವರು ಈ
ದೇಶದ ಇತಿಹಾಸದ ಭಾಗವಾಗಿದ್ದಾರೆ. ಟಪ್ಪ ಅವರ ಹೆಸರಿಲ್ಲದೆ ದೇಶದ ಚರಿತ್ರೆ ಅಪೂರ್ಣವಾಗುತ್ತದೆ . ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಅಪಾರವಾಗಿದೆ . ನಮ್ಮ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕರ್ನಾಟಕ ವಿಧಾನಮಂಡಲದಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದಾಗ ಟಿಪ್ಪು ಸುಲ್ತಾನ್ ಅವರು ರಾಜ್ಯಕ್ಕೆ ನೀಡಿದ ಕೊಡುಗೆ, ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರವನ್ನು ಕೊಂಡಾಡಿದ್ದಾರೆ.
ಟಿಪ್ಪು ಸುಲ್ತಾನ್ ಅವರನ್ನು ಭಾರತೀಯ ಜನತಾ ಪಕ್ಷದ ನಾಯಕರು ರಾಜಕೀಯ ಲಾಭಕ್ಕಾಗಿ ವಿರೋಧಿಸುತ್ತಿದ್ದಾರೆ .ಈ ಸಂದರ್ಭದಲ್ಲಿ ಸರ್ಕಾರವು ತನ್ನ ರಾಜಕೀಯ ಉದ್ದೇಶ ಈಡೇರಿಸಿಕೊಳ್ಳಲು ಇತಿಹಾಸವನ್ನು ತಿರುಚಲು ಮುಂದಾಗಿರುವುದು ಖಂಡನೀಯ. ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆದು , ಶಾಲಾ ಮಕ್ಕಳ ಪಠ್ಯದಲ್ಲಿ  ಸುಲ್ತಾನ್ ಅವರ ಪಾಠಗಳನ್ನು ಮುಂದುವರಿಸಬೇಕೆಂದು ವಿಜಯಪುರ ಜಿಲ್ಲಾ N.S.U.I ಅಧ್ಯಕ್ಷ ಹಾಗು ಭಾರತೀಯ ಸಂಚಾರ ನಿಗಮ ನಿಯಮಿತ ದೂರವಾಣಿ ಸಲಹಾ ಸಮಿತಿಯ (B.S.N.L) ಸದಸ್ಯ ಸದ್ದಾಂ ಕುಂಟೋಜಿ ರವರು ಮಾನ್ಯ ಮುಖ್ಯಮಂತ್ರಿ ಗಳಲ್ಲಿಆಗ್ರಹಿಸಿದ್ದಾರೆ.


 

Be the first to comment

Leave a Reply

Your email address will not be published.


*