ಹರಿಹರ:-ಹರಿಹರ ನಗರಸಭೆ ಅಧಿಕಾರಿಗಳ ಕಾರ್ಯವೈಖರಿ ಎಷ್ಟು ಪ್ರಾಮಾಣಿಕವಾಗಿದೆ ಎಂದರೆ ಒಮ್ಮೆ ಬೆಂಕಿನಗರ ವಾರ್ಡ್ಗೆ ಭೇಟಿ ನೀಡಿ ನೋಡಬೇಕು,ನಗರದ ಎಲ್ಲ ಸೌಂದರ್ಯ ಈ ಬೆಂಕಿ ನಗರದಲ್ಲೇ ಅಡಗಿದೆ.
ಕರೋನಾ ವೈರಸ್ ನಗರದಲ್ಲಿ ಶೀಘ್ರಗತಿಯಲ್ಲಿ ಹರಡಲು ಕಾರಣ ಕೇವಲ ಜನಸಾಮಾನ್ಯರು ಮಾತ್ರವಲ್ಲ,ನಗರಸಭೆಯವರ ನಿರ್ಲಕ್ಷ್ಯವೂ ಅಡಗಿದೆ ಕರೋನಾ ವೈರಸ್ ಕೆಲ ಅಧಿಕಾರಿಗಳ ಪ್ರಾಮಾಣಿಕತೆಯ ನೈಜತೆಯ ಬಣ್ಣವನ್ನು ಬಯಲು ಮಾಡಲು ನಗರಕ್ಕೆ ಕಾಲಿಟ್ಟಂತೆ ಕಾಣುತ್ತಿದೆ .
ಬೆಂಕಿ ನಗರದ ಚರಂಡಿ, ಗಟಾರಗಳು ಶುಚಿತ್ವವಿಲ್ಲದೆ ತಿಂಗಳಾನುಗಟ್ಟಲೇ ಕಳೆದಿದೆ.ಹಂದಿಗಳ ವಾಸ ಸ್ಥಾನಕ್ಕೆ ನಗರಸಭೆಯವರೇ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಅನುಮಾನ ಹುಟ್ಟು ಹಾಕುತ್ತದೆ ಗೊತ್ತಿಲ್ಲದಂತೆ ನಗರಸಭೆಯ ಅಧಿಕಾರಿಗಳು ಪ್ರಾಣಿಗಳೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ .?
ಇನ್ನು ಈ ವಾರ್ಡ್ನಲ್ಲಿ ಬೀದಿ ದೀಪದ ಕಂಬಗಳನ್ನು ಅಳವಡಿಸಿ ಮೂರು ತಿಂಗಳು ಕಳೆದಿದೆ,ಇದುವರೆಗೂ ಬೀದಿ ದೀಪದ ವ್ಯವಸ್ಥೆ ಮಾಡಿಲ್ಲ.ಇನ್ನು ವಾರ್ಡಿನ ರಸ್ತೆಯ ಗತಿಯಂತೂ ಕೇಳಲೇಬೇಡಿ.ಸೊಳ್ಳೆಗಳ ಸಂತಾನಾಭಿವೃದ್ಧಿಗೆ ರಸ್ತೆಯಲ್ಲಿ ನೀರು ನಿಲ್ಲುವಂತೆ ಮಾಡಿದ್ದಾರೆಯೇ.? ಜನಸಾಮಾನ್ಯರು ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಎರಡು ಕಣ್ಣು ಸಾಲದು,
ಬೆಂಕಿ ನಗರದ ಚರಂಡಿಯ ಗಟಾರದಲ್ಲಿ ನಿಂತಿರುವ ಕೊಳಚೆ ನೀರಿನ ವಾಸನೆ ಮುಂದೆ ಯಾವ ಸುಗಂಧ ದ್ರವ್ಯದ ಪರಿಮಳದ ವಾಸನೆಯ ಅವಶ್ಯಕತೆ ಅಲ್ಲಿನ ಜನಸಾಮಾನ್ಯರಿಗೆ ಬೇಡವೇ,ಬೇಡ.ಅಷ್ಟರ ಮಟ್ಟಿಗೆ ಚರಂಡಿಯಲ್ಲಿ ನಿಂತಿರುವ ಕೊಳಚೆ ನೀರು ನಾಡಿನ ಜನರಿಗೆ ದುರ್ವಾಸನೆಯ ಪರಿಮಳ ನೀಡುತ್ತಿದೆ.
ಈ ವಾರ್ಡಿನಲ್ಲಿ ಇರುವ ಬೋರಿಗೆ ಇನ್ನು ಸಂಪರ್ಕ ಕಲ್ಪಿಸಿ ಜನರಿಗೆ ಸಮರ್ಪಣೆ ಮಾಡಲು ನಗರಸಭೆ ಅಧಿಕಾರಿಗಳಿಗೆ ಪುರುಸೊತ್ತು ಸಿಕ್ಕಿಲ್ಲ ಇರಬೇಕು.ಪಾಪ ಕರೋನ ಜಾಗೃತಿಯಲ್ಲಿ ಮುಳುಗಿರುವಾಗ ಜನರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸಮಯವಾದರೂ ಸಿಗುವುದಾದರೂ ಹೇಗೆ.? ನೀವೇ ಹೇಳಿ.
ಚೆಂಬರ್ ಗುಂಡಿ ತೆಗೆದು ಈಗಾಗಲೇ ತಿಂಗಳು ಕಳೆಯುತ್ತಾ ಬಂದಿದೆ ಇನ್ನು ಕಾಮಗಾರಿ ಪೂರ್ಣಗೊಂಡಿಲ್ಲ ಅಧಿಕಾರಿಗಳನ್ನು ಕೇಳಿದರೆ ಸಮರ್ಪಕವಾದ ಉತ್ತರ ನೀಡುತ್ತಿಲ್ಲ ಎಂದು ವಾರ್ಡಿನ ಜನರು ನಗರಸಭೆ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ .
ತಮ್ಮ ವಾರ್ಡಿನ ಸಮಸ್ಯೆಗೆ ಪರಿಹಾರ ಕೇಳಲು ಬಂದ ಜನರಿಗೆ ಸಿದ್ಧವಾದ ಉತ್ತರವನ್ನು ಇಟ್ಟುಕೊಳ್ಳುವ ನೀವು ಒಮ್ಮೆ ಬೆಂಕಿನಗರದ ವಾರ್ಡಿಗೆ ಭೇಟಿ ನೀಡಿ ನಿಮ್ಮ ಕೆಲಸದ ಕಾರ್ಯದಕ್ಷತೆಯ ಪ್ರಾಮಾಣಿಕತೆಯನ್ನು ತಮ್ಮ ಆತ್ಮಸಾಕ್ಷಿಗೆ ಪ್ರಶ್ನಿಸಿಕೊಳ್ಳಿ ,ಆತ್ಮಸಾಕ್ಷಿ ನೀಡುವ ಉತ್ತರದ ಮುಂದೆ ಇನ್ಯಾವ ಉತ್ತರವೂ ಬೇಕಿಲ್ಲ ಅಲ್ಲವೇ.?
ಪ್ರಧಾನಿಯವರು ಕೆಂಪು ಕೋಟೆಯ ಮೇಲೆ ನಿಂತು ಸ್ವಚ್ಛತೆಯ ಪಾಠವನ್ನು ಸಾರುತ್ತಾರೆ .ಆದರೆ ಈ ದಪ್ಪ ಚರ್ಮದ ಬೇಜವಾಬ್ದಾರಿ ಅಧಿಕಾರಿಗಳು ಇರುವ ತನಕ ಯಾವ ಸ್ವಚ್ಛತೆಯೂ ಇಲ್ಲ ,ಶುಚಿತ್ವವೂ ಇಲ್ಲ .
ಎಲ್ಲಿಯವರೆಗೆ ಬೇಜವಾಬ್ದಾರಿತನದ ಭ್ರಷ್ಟ ಅಧಿಕಾರಿಗಳು ಇರುತ್ತಾರೆಯೋ ಅಲ್ಲಿಯವರೆಗೂ ಭವ್ಯ ಭಾರತ ಬದಲಾಗದು. ಯಾವ ಪಕ್ಷದ ಯಾವ ಪ್ರಧಾನಿಗಳು ದೇಶದ ಅಭಿವೃದ್ಧಿಯ ಬಗ್ಗೆ ಚಿಂತಿಸಿದರು ಪ್ರಯೋಜನ ಇರುವುದಿಲ್ಲ.ಮೊದಲು ದೇಶಕ್ಕೆ ಬೇಕಾಗಿರುವುದು ಬೇಜವಾಬ್ದಾರಿತನದ ಭ್ರಷ್ಟ ಅಧಿಕಾರಿಗಳನ್ನು ಶಿಕ್ಷಿಸುವ ಸಮರ್ಥ ಕಾನೂನು .
ಈಗಾಗಲೇ ಕೊರೊನಾದಂಥ ಹೆಮ್ಮಾರಿ ಬೆಂಕಿನಗರದ ವಾರ್ಡಿಗೂ ವಕ್ಕರಿಸಿದೆ. ಇನ್ನು ಮುಂದಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಬೆಂಕಿ ನಗರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ ಕಾದು ನೋಡಬೇಕಾಗಿದೆ.
Be the first to comment