ನಾಲತವಾಡ: ಕೊರೋನಾ ಮಧ್ಯೆಯೂ ವಿಜಯಪುರ ಜಿಲ್ಲೆಯಲ್ಲಿ ನಾಗರ ಪಂಚಮಿ ಹಬ್ಬವನ್ನು ಸಂಪ್ರದಾಯದಂತೆ ಮಹಿಳೆಯರು ಸರಳವಾಗಿ ಆಚರಣೆ ಮಾಡಿದರು.ಈ ಹಿಂದೆ ವಿಜೃಂಭಣೆಯಿಂದ ನಾಗರಪಂಚಮಿ ಹಬ್ಬವನ್ನು ಆಚರಿಸುತ್ತಿದ್ರು, ಆದ್ರೇ, ಈ ವರ್ಷ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ
ವಿಜಯಪುರ ಜಿಲ್ಲೆಯ ನಾಲತವಾಡಪಟ್ಟಣದ ವಿನಾಯಕ ನಗರದ ನಿವಾಸಿ ಎ.ಜಿ. ಗಂಗನಗೌಡರ ಕುಟುಂಬ ನಾಗರ ಪಂಚಮಿ ಹಬ್ಬವನ್ನು ಸಂಪ್ರದಾಯದಂತೆ ಸರಳವಾಗಿ ಆಚರಿಸಿ ನಾಗ ಪ್ರತಿಮೆಗಳಿಗೆ ಹಾಲು ಅಭಿಷೇಕ, ಅರಿಷಿಣ ದಾರ ಕಟ್ಟಿ ಭಕ್ತಿಯಿಂದ ಪೂಜಿಸಿದರು.
ಇನ್ನೂ ಮಹಿಳೆಯರು ಹುತ್ತಕ್ಕೆ ಹಾಲೆರೆದು ಭಕ್ತಿಯಿಂದ ನಮಿಸಿದರು. ಇನ್ನೂ ಹಬ್ಬಕ್ಕಾಗಿ ಮಾಡಿರುವ ಅಳ್ಳು, ಉಂಡೆ ಹಾಗೂ ವಿವಿಧ ಸಿಹಿ ಪದಾರ್ಥಗಳನ್ನು ನಾಗರಾಜನಿಗೆ ನೈವೇದ್ಯ ಮಾಡಿ ಭಕ್ತರು ಪುಣಿತರಾದರು.
ಕೊರೋನಾ ಎಂಬ ಮಹಾಮಾರಿ ರೋಗವು ಆದಷ್ಟು ಬೇಗ ದೇಶದಿಂದ ತೊಲಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದರು.
Be the first to comment