ಜಾವೂರ್ ನಾಗರಹಾಳ ರಸ್ತೆ ದುರಸ್ತಿ ಕಾಮಗಾರಿ ಕಳಪೆ….! ಗುತ್ತಿಗೆದಾರರ ಬಿಲ್ ತಡೆಗೆ ಆಗ್ರಹ

ವರದಿ: ಬಸವರಾಜ ಬಿರಾದಾರ

ಲಿಂಗಸ್ಗೂರು :- ತಾಲೂಕಿನ ಜಾವೂರ್ ನಾಗರಹಾಳ ರಸ್ತೆಯ ಕಾಮಗಾರಿ ಕಳಪೆಯಾಗಿದೆ ಎಂದು ಯುವ ಮುಖಂಡ ಚೆನ್ನಾರೆಡ್ಡಿ ಬಿರಾದಾರ ಆರೋಪಿಸಿದ್ದು ಗುತ್ತಿಗೆದಾರರ ಬಿಲ್ ತಡೆಗೆ ಒತ್ತಾಯಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ಸುಮಾರು 1.80ಕಿಮೀ ಜಾವೂರ್ ಗ್ರಾಮದಿಂದ ನಾಗರಹಾಳ ಕ್ಕೆ ಹೋಗುವ ರಸ್ತೆಗೆ ಅಂದಾಜು ಎರಡೂವರೆ ಕೋಟಿ ಹಣ ಮಂಜೂರಾಗಿದ್ದು ಹಣಕ್ಕೆ ತಕ್ಕಂತೆ ಗುಣಮಟ್ಟದಿಂದ ಕಾಮಗಾರಿ ನಡೆಯುತ್ತಿಲ್ಲ ನೂತನ ರಸ್ತೆಯ ಜಲ್ಲಿ ಕಲ್ಲುಗಳು ಕಿತ್ತು ಹೋಗಿವೆ ತಗ್ಗು ದಿನ್ನೆಗಳು ನಿರ್ಮಾಣವಾಗಿವೆ ಇದರಿಂದಾಗಿ ಜನತೆ ಓಡಾಡಲು ತುಂಬಾ ತೊಂದರೆಯಾಗಿದೆ ಎಂದು ಆರೋಪಿಸಿದರು. ಕೇವಲ ಎರಡು ಕಿಲೋಮೀಟರ್ ಕ್ಕಿಂತಲೂ ಕಡಿಮೆ ಇರುವ ಸದರಿ ರಸ್ತೆಗೆ ಎರಡೂವರೆ ಕೋಟಿ ಹಣವನ್ನು ಹಾಕಿರುವುದು ಮತ್ತು ರಸ್ತೆಯ ಗುಣಮಟ್ಟದ ಕಾಮಗಾರಿಯು ನಡೆಯದಿರುವುದು ಸರಕಾರದ ಹಣ ಪೋಲು ಮಾಡಿದಂತಾಗುತ್ತದೆ ಕೂಡಲೇ ಸಂಬಂಧಿಸಿದವರು ಉತ್ತಮವಾದ ಕಾಮಗಾರಿ ನಿರ್ವಹಿಸುವ ತನಕ ಕಾಮಗಾರಿಯ ಬಿಲ್ ಮಾಡಬಾರದು ಮತ್ತು ಹಳೆ ಬ್ರಿಜ್ ಗಳನ್ನು ದುರಸ್ತಿ ಮಾಡಬೇಕೆಂದು ಆಗ್ರಹಿಸಿದ್ದಾರೆ ಈ ಸಂದರ್ಭದಲ್ಲಿ ಚಂದ್ರಶೇಖರ್ ಪಾಟೀಲ್ ರೋಡಲಬಂಡಾ ಮತ್ತು ಇನ್ನಿತರ ಮುಖಂಡರು ಉಪಸ್ಥಿತರಿದ್ದರು. ವರದಿ… ಬಸವರಾಜ ಬಿರಾದಾರ ಅಂಬಿಗ ನ್ಯೂಸ್ ಲಿಂಗಸ್ಗೂರು

Be the first to comment

Leave a Reply

Your email address will not be published.


*