ಗಿರಿಜನ ರೈತ ಉತ್ಪಾದಕ ಸಂಸ್ಥೆ ಸ್ಥಾಪಿಸುವಂತೆ ಶ್ರೀ ಗೋವಿಂದ ಕಾರಜೋಳ ಸೂಚನೆ

ವರದಿ:ಅಮರೇಶ ಕಾಮನಕೇರಿ. ಸಂಪಾದಕೀಯ

ರಾಜ್ಯ ಸುದ್ದಿಗಳು

ಬೆಂಗಳೂರು:

ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ನಾಗಾಪುರ ಬುಡಕಟ್ಟು/ಗಿರಿಜನ ಪುನರ್ವಸತಿ ಕೇಂದ್ರದ 280 ಕುಟುಂಬಗಳನ್ನೊಳಗೊಂಡ ಗಿರಿಜನ ರೈತ ಉತ್ಪಾದಕ ಸಂಸ್ಥೆಯನ್ನು ಸ್ಥಾಪಿಸುವಂತೆ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಸೂಚಿಸಿದರು.

ವಿಧಾನಸೌಧದಲ್ಲಿಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, 280 ಕುಟುಂಬಗಳಿಗೆ 1340 ಎಕರೆ ಜಮೀನನ್ನು ಕೃಷಿ ಉದ್ದೇಶಕ್ಕಾಗಿ ನೀಡಲಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರದ ಗಿರಿಜನ ಕಲ್ಯಾಣ ಇಲಾಖೆಯ ಅನುದಾನ ಹಾಗೂ ರಾಜ್ಯ ಸರ್ಕಾರದ ಸ ಇ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಅಲ್ಲಿ ತೋಟಗಾರಿಕೆ ಕೃಷಿ ಬೆಳೆಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬೆಳೆಯುವ ಮೂಲಕ ಅವರ ಆರ್ಥಿಕ ಮಟ್ಟ ಹೆಚ್ಚಿಸಬೇಕು. ಈ ಉದ್ದೇಶದಿಂದ ಅವರನ್ನು ರೈತ ಕಂಪನಿಗಳಡಿಯಲ್ಲಿ ತರುವ ಮೂಲಕ ಅವರಿಗೆ ಅವಶ್ಯಕವಿರುವ ಉತ್ತಮ ಗುಣಮಟ್ಟದ ಕೃಷಿ ಪರಿಕರ, ಉತ್ತಮ ಬೇಸಾಯ ತಂತ್ರಜ್ಞಾನ, ಸುಧಾರಿತ ತಳಿಗಳ ಉತ್ಪಾದನೆ, ಕೊಯ್ಲೋತ್ತರ ತಂತ್ರಜ್ಞಾನ ಅಳವಡಿಕೆ ಹಾಗೂ ಸುಧಾರಿತ ಮಾರುಕಟ್ಟೆ ಸೌಲಭ್ಯ ಸಂಪರ್ಕ ಕಲ್ಪಿಸಬೇಕು. ಈ ರೈತರಿಗೆ ಸಾಮೂಹಿಕ ನೀರಾವರಿ ಸೌಲಭ್ಯವನ್ನು ಒದಗಿಸಿ, ಉತ್ತಮ ಬೆಳೆಗಳನ್ನು ಬೆಳೆಯಲು ಸಹಕರಿಸಬೇಕು. ರೈತ ಉತ್ಪಾದಕ ಸಂಸ್ಥೆ ರಚನೆಗೆ ಕರ್ನಾಟಕ ಸರ್ಕಾರದ ರೈತಉತ್ಪಾದಕ ಸಂಸ್ಥೆಗಳ ಉತ್ಕøಷ್ಠ ಕೇಂದ್ರ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಇವರಿಗೆ ಮಾರ್ಗದರ್ಶನ, ಕ್ಷೇತ್ರ ಬೆಂಬಲ, ತರಬೇತಿ ಹಾಗೂ ಸಾಮರ್ಥವರ್ಧನೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಸಲಹೆಗಾರರಾದ ಶ್ರೀ ಇ. ವೆಂಕಟಯ್ಯ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಶ್ರೀ ಸಂಗಪ್ಪ, ರೈತ ಉತ್ಪಾದಕ ಸಂಸ್ಥೆಗಳ ಉತ್ಕøಷ್ಟ ಕೇಂದ್ರದ ನಿರ್ದೇಶಕ ಡಾ. ಅಶೋಕ ಆಲೂರು, ಡಿಸಿಎಂ ಅವರ ಆಪ್ತಕಾರ್ಯದರ್ಶಿ ಶ್ರೀ ವಿ. ಶ್ರೀನಿವಾಸ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*