ಜಿಲ್ಲೆಯಲ್ಲಿ ಹೊಸದಾಗಿ 184 ಕೋವಿಡ್ ಪ್ರಕರಣಗಳು ದೃಡ:ಸೋಂಕಿತರ ಸಂಖ್ಯೆ 1168 ಕ್ಕೆ ಏರಿಕೆ.

ವರದಿ: ಶರಣಪ್ಪ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:

ಜಿಲ್ಲೆಯಲ್ಲಿ ಹೊಸದಾಗಿ 184 ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು ಸೋಂಕಿತರ ಸಂಖ್ಯೆ 1168 ಕ್ಕೆ ಏರಿಕೆಯಾಗಿದೆ.ಗುಣಮುಖರಾದವರ ಒಟ್ಟು ಸಂಖ್ಯೆ 507, ಸಕ್ರಿಯ ಪ್ರಕರಣ 625 ಇರುತ್ತದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾದ್ಯಮ ಹೇಳಿಕೆ ನೀಡಿದ್ದಾರೆ.

ಹೊಸದಾಗಿ ದೃಡಪಟ್ಟ ಸೋಂಕಿತರ ಪೈಕಿ ಬಾಗಲಕೋಟೆ ತಾಲೂಕಿನಲ್ಲಿ 25, ಬಾದಾಮಿ 32, ಬೀಳಗಿ 4, ಜಮಖಂಡಿ 50, ಹುನಗುಂದ 30, ಮುಧೋಳ 42, ಬೆರೆ ಜಿಲ್ಲೆಯ ಒಂದು ಪ್ರಕರಣ ಪತ್ತೆಯಾಗಿದೆ.

ಬಾಗಲಕೋಟೆ ನಗರದ 73 ವರ್ಷದ ಓರ್ವ ವೃದ್ದೆ ಮೃತಪಟ್ಟಿದ್ದು, ಕೊವಿಡ್ ಮಾರ್ಗಸೂಚಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.ಜಿಲ್ಲೆಯಿಂದ ಕಳುಹಿಸಲಾಗಿದ್ದ 113 ಸ್ಯಾಂಪಲ್‍ಗಳ ವರದಿ ನಿರೀಕ್ಷಿಸಲಾಗುತ್ತಿದೆ.ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದವರು 1264.

ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ ಗಳ ಸಂಖ್ಯೆ 22142 ಇದರಲ್ಲಿ
ಒಟ್ಟು ನೆಗಟಿವ್ ಪ್ರಕರಣ 20623, ಪಾಜಿಟಿವ್ ಪ್ರಕರಣ 1168, ಮೃತ ಪ್ರಕರಣ 38 ಕೋವಿಡ್‍ನಿಂದ ಗುಣಮುಖರಾದವರು 507
ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರು ಒಟ್ಟು 625 ಇರುತ್ತದೆ. ಒಟ್ಟು ಕಂಟೈನ್‍ಮೆಂಟ್ ಝೋನ್ 95 ಇದ್ದು,ರಿಜೆಕ್ಟ ಆದ ಸ್ಯಾಂಪಲ್ ಗಳ ಸಂಖ್ಯೆ159.14 ದಿನಗಳ ಕ್ವಾರಂಟೈನ್‍ನಿಂದ ಬಿಡುಗಡೆ ಹೊಂದಿದವರು ಒಟ್ಟು 6296.

Be the first to comment

Leave a Reply

Your email address will not be published.


*