ಮೂಲಭೂತ ಸೌಕರ್ಯದಿಂದ ವಂಚಿತಗೊಂಡ ಶಾಸಕ ರಾಜುಗೌಡ ಮತಕ್ಷೇತ್ರದ ಕಚಕನೂರ ಗ್ರಾಮ…! ಅಳಲು ತೋಡಿಕೊಂಡ ಗ್ರಾಮಸ್ಥರಿಗೆ ಬೇಜವಾಬ್ದಾರಿಯಿಂದ ವರ್ತಿಸಿದ ತಹಸ್ಥೀಲ್ದಾರ

ವರದಿ: ರಾಘವೇಂದ್ರ ಮಾಸ್ತರ

ಜಿಲ್ಲಾ ಸುದ್ದಿಗಳು

ಯಾದಗಿರಿ:

“ಸಾಹೇಬ್ರೇ, ಮಳಿ ಬಂತಂದ್ರ ಮನೆಳೊಗೆ ನೀರು. ಇಲ್ಲಿ ಸರಿಯಾದ ರಸ್ತೆ, ಚರಂಡಿ ಇಲ್ಲಾ. ಇದರ ಬಗ್ಗೆ ಸ್ಥಳೀಯ ಪಿಡಿಓ ಸಾಹೇಬರಿಗೆ ಎಷ್ಟು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಇನ್ನೂ ತಹಸೀಲ್ದಾರ ಅವರಿಗೆ ಹೇಳಿದರೆ ನಿಮ್ಮ ಮನೆ ಬಾಗಿಲನ್ನು ಎತ್ತರ ಮಾಡ್ರಿ ಅಂತಾರಾ. ನಮ್ಮ ಗೋಳನ್ನ ಯಾರಿಗೆ ಹೇಳಬೇಕ್ರಿ.”



ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಚಕನೂರ ಗ್ರಾಮವು ಮೂಲಭೂತ ಸೌಕರ್ಯಗಳಿಗೆ ವಂಚಿತಗೊಂಡಿದೆ. ಇದರ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಅಲ್ಲದೇ ಚುನಾವಣೆಯಲ್ಲಿ ಮತ ಕೇಳಲು ಬಂದಂತಹ  ಒಬ್ಬ ಜನಪ್ರತಿನಿಧಿಗಳೂ ಗ್ರಾಮಸ್ಥರ ಕಡೆ ಮುಖ ಮಾಡಿಲ್ಲ. ಇದರಿಂದ ಗ್ರಾಮಸ್ಥರ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.


ಸುರಪುರ ತಹಸೀಲ್ದಾರ ನಿಂಗಣ್ಣ ಬಿರಾದಾರ

ಬೇಜವಾಬ್ದಾರಿಯಿಂದ ವರ್ತಿಸಿದ ತಹಸೀಲ್ದಾರ:

ಕಚಕನೂರ ಗ್ರಾಮದಲ್ಲಿ ನಿನ್ನೆ ಸಂಜೆ ಮತ್ತು ರಾತ್ರಿ ವೇಳೆ ಸುರಿದ ಭಾರಿ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಈ ವಿಷಯವನ್ನು ಸುರಪುರ ತಹಸೀಲ್ದಾರ್ ನಿಂಗಣ್ಣ ಬಿರಾದಾರ ಅವರ ಗಮನಕ್ಕೆ ತರಲು ದೂರವಾಣಿಯಲ್ಲಿ ಸಂಪರ್ಕಿಸಿದಾಗ ತಹಶೀಲ್ದಾರ್ ರವರು ಗ್ರಾಮಸ್ಥರಿಗೆ ಬೇಜವಾಬ್ದಾರಿತನ ಹೇಳಿಕೆ ನೀಡುವ ಮೂಲಕ ನಿಮ್ಮ ಮನೆಯಲ್ಲಿ ನಿಂತಿರುವ ನೀರನ್ನು ನಾನು ಬಂದು ತೆಗೆಯಲಾ… ಗೌಡ ಕುಲಕರ್ಣಿ ಇದ್ದರೇ ನಾನೇನು ಮಾಡಲಿ ನಿಮ್ಮ ಮನೆಗಳನ್ನು ಎತ್ತರಕ್ಕೆ ಕಟ್ಟಿಕೊಳ್ಳಬೇಕು, ನನ್ನನ್ನು ಕೇಳಲು ಮತ್ತು ಪ್ರಶ್ನೆ ಮಾಡಲು ನೀನೇನು MLA, MP ನಾ ಅಥವಾ DC ನಾ ಯೂಸ್ ಲೆಸ್ ಫೆಲೋ….. ಎನ್ನುವ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಒಬ್ಬ ತಾಲೂಕಿನ ಜವಾಬ್ದಾರಿಯುತ ಸ್ಥಾನದಲ್ಲಿರುವ ತಹಶೀಲ್ದಾರ್ ಅಧಿಕಾರಿಗಳು ಈ ರಿತಿ ಗ್ರಾಮಸ್ಥರೋಂದಿಗೆ ವರ್ತಿಸುತ್ತಿರುವುದು ಹಿರಿಯ ಸ್ಥಾನದಲ್ಲಿರುವ ಅಧಿಕಾರಿಗಳಿಗೆ ಶೋಭೆ ತರುವಂಥದ್ದಲ್ಲ, ಮಾನ್ಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಧಿಕಾರಿಗಳ ಬೆಜವಬ್ದಾರಿತನದ ಹೇಳಿಕೆಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವ ಮುಖಾಂತರ ನಮ್ಮ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.

“ಸುರಪುರ ತಹಶೀಲ್ದಾರ ನಿಂಗಣ್ಣ ಬಿರಾದಾರ ರವರು ನಮ್ಮ ಜೊತೆ ದೂರವಾಣಿ ಸಂಪರ್ಕದಲ್ಲಿ ಬೇಜವಾಬ್ದಾರಿತನದಿಂದ ವರ್ತಿಸಿರುವುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ತಾಲೂಕ ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬ ಗೆಜೆಡೇಡ್ ಅಧಿಕಾರಿ ನಮ್ಮ ಜೊತೆ ಈ ತರಹದ ವರ್ತನೆ ಮಾಡಿರುವುದು ಖಂಡನೀಯ ಮಾನ್ಯ ಜಿಲ್ಲಾಧಿಕಾರಿಗಳು ಈ ಆಡಿಯೋ ವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.”
➡️ ಭೀಮಣ್ಣ ಮಕಾಶಿ ಕಚಕನೂರ ಗ್ರಾಮಸ್ಥ



“ಕಚಕನೂರ ಗ್ರಾಮದಲ್ಲಿ ನಿನ್ನ ಸುರಿದ ಸುರಿದ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಇಂದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ, ಮುಂದಿನ ಕ್ರಮ ಜರುಗಿಸಲು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.”

➡️ಭೀಮರಾಯ ಮಕಾಶಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಚಕನೂರ

Be the first to comment

Leave a Reply

Your email address will not be published.


*