ಸಿ.ಇ.ಟಿ, ವೈದ್ಯಕೀಯ ಅಭೀಯಂತರರ ಪದವಿ ಅಂತಿಮ ವರ್ಷದ ಪರೀಕ್ಷೆಯನ್ನು ರದ್ದು ಮಾಡಿ:ಸದ್ದಾಂ ಕುಂಟೋಜಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ರಾಜ್ಯ ಸುದ್ದಿಗಳು

ವಿಜಯಪುರ:

ರಾಜ್ಯದಲ್ಲಿ ಕೋರೊನಾ ಸಂಗ್ಧದ ಪರಿಸ್ಥಿತಿ ಎದುರಾಗಿದ್ದು ಪರಿಸ್ಥಿತಿಯಲ್ಲಿ ಸಿ.ಇ.ಟಿ, ವೈದ್ಯಕೀಯ ವೃತ್ತಪರ, ಕಾನೂನು ಪದವಿ, ಅಭೀಯಂತರರ ಪದವಿ ಅಂತಿಮ ವರ್ಷದ ಪರೀಕ್ಷೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ಎನ್.ಎಸ್.ಯು.ಐ. ವಿಜಯಪುರ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ದಾರೆ.



ಕೊರೊನಾ ಸಂಗ್ಧದ ಪರಿಸ್ಥಿತಿಯಲ್ಲಿ ಈಗಾಗಲೇ ನೀಟ್, ಜೆ.ಇ.ಇ ಪರೀಕ್ಷೆಗಳನ್ನು ಮುಂದೊಡಲಾಗಿದೆ. ಅಲ್ಲದೇ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ಮುಂಬಡ್ತಿ ಮಾಡಿರುವುದು ಒಳ್ಳೆಯ ಸ್ವಾಗತಾರ್ಹವಾಗಿದೆ. ಅದರಂತೆ ಸಿ.ಇ.ಟಿ, ವೈದ್ಯಕೀಯ ವೃತ್ತಪರ, ಕಾನೂನು ಪದವಿ, ಅಭೀಯಂತರರ ಪದವಿ ಅಂತಿಮ ವರ್ಷದ ಪರೀಕ್ಷೆಯನ್ನು ರದ್ದು ಮಾಡಿ ವಿದ್ಯಾರ್ಥಿಗಳ ಹಿಂದಿನ ಪರೀಕ್ಷೆಗಳಲ್ಲಿ ಮಾಡಿದ ಸಾಧನೆಗೆ ಶೇ.೧೦ರಷ್ಟು ಹೆಚ್ಚುವರಿಯಾಗಿ ಅಂಕಗಳಿಗೆ ಮುಂಬಡ್ತಿ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಬುಬಕರ ಹಡಗಲಿ, ಪ್ರರಕಾನ ದರವೇಷ, ನಿಜಾಮ ದಖನಿ, ಕೌಶೀಪ ತುರಕನಗೇರಿ, ಅನ್ವರ ದಖನಿ, ಅಮನ ಕೋತ್ವಾಲ, ಹನಮಂತ ನಾಯಕ ಜಾವಿದ ಕುಂಟೋಜಿ ಇದ್ದರು.



 

Be the first to comment

Leave a Reply

Your email address will not be published.


*