ಮುದ್ದೇಬಿಹಾಳ ಪ್ರತಿಷ್ಠಿತ ವ್ಯಕ್ತಿಯ ನಿರ್ಲಕ್ಷದಿಂದ ವಾಣಿಜ್ಯ ಮಳಿಗೆಗೆ ನುಗುತ್ತಿದ್ದ ನೀರು: ಅಗ್ನಿ ಶಾಮಕದಳದಿಂದ ತಪ್ಪಿದ ಅನಾಹುತ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರದ ಪಾಟೀಲ ವಾಣಿಜ್ಯ ಮಳಿಗೆಗಳಲ್ಲಿ ನೀರು ನುಗ್ಗಿದ್ದು ಅದೇ ವಾಣಿಜ್ಯ ಮಳಿಲಗೆಯಲ್ಲಿ ಕಿರಾಣಿ ಅಂಗಡಿ ವ್ಯಾಪಾರಸ್ಥ ಪಟೇಲ ಅವರ ಸಮಯ ಪ್ರಜ್ಞೆಯಿಂದ ಇನ್ನೂಳಿದ ಅಂಗಡಿಕಾರರಿಗೆ ಆಗುತ್ತಿದ್ದು ಹಾನಿ ಆಘಾತವನ್ನು ತಪ್ಪಿದಂತಾಗಿದೆ.



ವಾಣಿಜ್ಯ ಮಳಿಗೆಗಳ ಮದ್ಯಭಾಗದಲ್ಲಿ ಮಳಿಗೆಯ ಮಾಲಿಕೆ ಕೆಲ ಟ್ಯಾಂಕ್ ಮಾಡಿದ್ದಾರೆ. ಇದೇ ಟ್ಯಾಂಕಿಗೆ ಇನ್ನಿತರ ಮೂಲದಿಂದ ನೀರು ಬಸಿದ ಪರಿಣಾಮ ಕಾಂಪ್ಲೇಕ್ಸ್‌ನಲ್ಲಿರುವ ಅಂಗಡಿಗಳ ಬಾಗಿಲಿಗೆ ನೀರು ಬಂದು ನಿಂತಿದೆ. ಪಟೇಲ ಅವರ ಸಮಯಪ್ರಜ್ಞೆಯಿಂದ ನೀರು ಅಂಗಡಿಯೊಳಗೆ ನುಗ್ಗುವುದನ್ನು ತಪ್ಪಿಸಿದಂತಾಗಿದೆ.
ಸ್ಥಳಕ್ಕೆ ದಾವಿಸಿದ ಅಗ್ನಿ ಶಾಮಕದಳ:
ನೀರು ಅಂಗಡಿಗಳಲ್ಲಿ ನುಗ್ಗುತ್ತಿರುವುದನ್ನು ಗಮನಿಸಿದ ಪಟೇಲ ಹಾಗೂ ಇನ್ನಿತರರು ತಕ್ಷಣವೇ ಅಗ್ನಿ ಶಾಮಕದಳಕ್ಕೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣದಲ್ಲಿಯೇ ಕಾರ್ಯಪೌವೃತ್ತರಾದ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಾಣಿಜ್ಯ ಮಳಿಗೆಯ ಮುಂದೆ ಬಂದು ನಿಂತಿದ್ದ ನೀರನ್ನು ಪಂಪ್‌ಸೇಟ್ ಮೂಲಕ ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.



ಪ್ರತಿಷ್ಠಿತ ವ್ಯಕ್ತಿಯಿಂದಲೇ ಅನಾಹುತಕ್ಕೆ ಕಾರಣ:
ಪಟ್ಟಣದ ಪಾಟೀಲ ಕಾಂಪ್ಲೇಕ್ಸ್ ಹಿಂಬದಿಯಲ್ಲಿ ಒಂದು ಭಾವಿ ಇತ್ತು. ಆದರೆ ಕೆಲವರು ಅದನ್ನು ಮುಚ್ಚಿಹಾಕಿ ಅದರಲ್ಲಿ ವಾಣಿಜ್ಯ ಮಳಿಗೆಯನ್ನು ಕಟ್ಟಿಸಿದ್ದಾರೆ. ಆದರೆ ಭಾವಿ ಮುಚ್ಚುವಲ್ಲಿ ನಿರ್ಲಕ್ಷ ಮಾಡಿದ ಕಾರಣ ಈಹ ಅದೇ ಭಾವಿಯ ಮೂಲದಿಂದ ಪಾಟೀಲ ಕಾಂಪ್ಲೇಕ್ಸ್‌ನಲ್ಲಿರುವ ಟ್ಯಾಂಕ್‌ಗೆ ನೀರು ಬಸಿದು ಬರುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.



 

Be the first to comment

Leave a Reply

Your email address will not be published.


*