ಬಳ್ಳಾರಿ: ಕೂಡ್ಲಗಿ ಮಾನವತಾವಾದಿ,ಸಂವಿಧಾನ ಶಿಲ್ಪಿ ಡಾ॥ಬಿ.ಆರ್ ಅಂಬೇಡ್ಕರವರ ನಿವಾಸದ ಮೇಲೆ ದಾಳಿ ಪ್ರಕರಣ, ದುಷ್ಕಮಿ೯ಗಳನ್ನು ಕಠಿಣ ಶಿಕ್ಷೆಗೊಳಪಡಿಸುವಂತೆ ಕೂಡ್ಲಿಗಿ ತಾಲೂಕು ಮಾದಿಗ ದಂಡೋರ ಸಂಘಟನೆ ಹಾಗೂ ಡಾ॥ಬಿ.ಆರ್.ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.ಕೆಲ ದಿನಗಳ ಹಿಂದೆ, ಮಹಾರಾಷ್ಟ್ರದಲ್ಲಿರುವ ಅಂಬೇಡ್ಕರ್ ರವರ ರಾಜಗೃಹದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿರುವುದು,ನಾಗರೀಕ ಸಮಾಜ ತಲೆತಗ್ಗಿಸುವಂತದ್ದಾಗಿದೆ ಎಂದು ದಲಿತಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಆರೋಪಿಗಳನ್ನು ಗಡಿಪಾರು ಮಾಡುವಂತೆ ಒತ್ತಾಯಿಸಲಾಗಿದೆ.ಈ ಕುರಿತು ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಮೇಲೆ ಪ್ರಭಾವ ಬೀರಬೇಕೆಂದು, ಕನಾ೯ಟಕ ರಾಜ್ಯ ಮುಖ್ಯಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ರವರಿಗೆ ತಹಶಿಲ್ದಾರರವರ ಮೂಲಕ ಜು17ರಂದು ಮನವಿ ಮಾಡಲಾಗಿದೆ.ಮನವಿಯನ್ನು ಸಂಘಟನೆ ಪದಾಧಿಕಾರಿಗಳು ತಹಶಿಲ್ದಾರರಾದ ಎಸ್.ಮಹಾಬಲೇಶ್ವರವರಿಗೆ ನೀಡಿದರು.ಈ ಸಂದಭ೯ದಲ್ಲಿ ದಲಿತ ಮುಖಂಡರು ಮಾತನಾಡಿದರು. ಭಾರತದೇಶದ ಪ್ರತಿಯೊಬ್ಬ ಪ್ರಜೆಯು ಎಂದೆಂದಿಗೂ ಮರೆಯದ ಮಹಾಮಾನವತಾವಾದಿ ಅಂಬೇಡ್ಕರವರು,ಅವರ ನಿವಾಸ ರಾಜಗೃಹದ ಮೇಲೆನ ದಾಳಿ ಅಕ್ಷಮ್ಯ ಅಪರಾಧವಾಗಿದೆ.
ಅಪರಾಧಿಗಳನ್ನ ಶೀಘ್ರವೇ ಬಂಧಿಸಬೇಕು,ಅವರನ್ನ ರಾಷ್ಟ್ರಧ್ರೋಹಿ ಚಟುವಟಿಕೆ ಆರೋಪದಡಿ ಗಡಿಪಾರು ಮಾಡಬೇಕಾಗಿದೆ. ಎಂದು ಡಾ॥ಬಿ.ಆರ್.ಅಂಬೇಡ್ಕರ್ ಸಂಘ ಹಾಗೂ ಮಾದಿಗ ದಂಡೋರ ಸಂಘಟನೆಗಳ ಪದಾಧಿಕಾರಿಗಳು ಮಹಾರಾಷ್ಟ್ರ ಸಕಾ೯ರಕ್ಕೆ ಆಗ್ರಹಿಸಿದ್ದಾರೆ. ವಿವಿದ ದಲಿತ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಸಂಘಟನೆ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.
ವಿ.ಜಿ.ವೃಷಭೇಂದ್ರ ಕೂಡ್ಲಿಗಿ
Be the first to comment