ಕಾಗಿಣಾ ನದಿಯ ಪ್ರವಾಹದಲ್ಲಿ ಸಿಲುಕಿದ, 8 ಜನರ ಪ್ರಾಣ ಕಾಪಾಡಿದ ಸಾಹಸಿ ಮಿನುಗಾರ ಯುವಕ ಶರಣು

ವರದಿ: ಅಮರೇಶ ಕಾಮನಕೇರಿ

ದಿನಾಂಕ 03-07-2020, ಶುಕ್ರವಾರ ದಂದು,ಕಲ್ಬುರ್ಗಿ ಜಿಲ್ಲೆ, ಸೇಡಂ ತಾಲ್ಲೂಕು,ಬಿಬ್ಬಳಿ ಗ್ರಾಮದಲ್ಲಿ ಕಾಗಿಣಾ ನದಿ ಪಾತ್ರದಲ್ಲಿ ಎಂಟು ಜನರ ತಂಡವು ಬೆಳಗಿನ ಜಾವ ಮರಳು ತೆಗೆಯಲು ನದಿಗೆ ಇಳಿದಿದ್ದರು ಹಿಂದಿನ ರಾತ್ರಿ ಧಾರಕಾರ ಮಳೆಯಾದ ಕಾರಣ ಕಾಗಿಣಾ ನದಿಯಲ್ಲಿ ಏಕಾಏಕಿ ಪ್ರವಾಹವು ಉಲ್ಬಣವಾಯಿತು.

ಪ್ರವಾಹ ಹೆಚ್ಚಾದ ಕಾರಣ ನದಿಯಿಂದ ಆಚೆ ಬರಲು ಸಾಧ್ಯವಾಗದೆ, ಜೀವ ಭಯದಿಂದ ನದಿಯಲ್ಲಿದ
ಮರಗಳನ್ನು ಹತ್ತಿ ಕುಳಿತರು.
ಕ್ಷಣ ಕ್ಷಣಕ್ಕು ಪ್ರವಾಹ ಹೆಚ್ಚಾಗುತ್ತಲಿತ್ತು,
ಅವರಲ್ಲಿ ಒಬ್ಬರು ಮೊಬೈಲಿನಿಂದ ಸ್ನೇಹಿತರಿಗೆ ಕರೆ ಮಾಡಿ ಗ್ರಾಮದವರಿಗೆ ಮಾಹಿತಿ ನೀಡಿದರು.
ಈ ಮಾಹಿತಿ ಪಡೆದ ಪೋಲೀಸರು,
ಆಗ್ನಿ ಶಾಮಕದಳ, ತಾಲ್ಲೂಕು ಆಡಳಿತ ಸ್ಥಳಕ್ಕೆ ಬಂದರು.

ಸ್ವತ ಮೀನುಗಾರ, ಕೋಲಿ ಗಂಗಾಮತಸ್ಥ ಸಮುದಾಯದ 20 ವರ್ಷದ ಸಾಹಸಿ ಯುವಕ ಶರಣು
ತಾನೇ ಮುಂದೆ ಬಂದು 8 ಜನರ ರಕ್ಷಣೆ ಮಾಡುವುದಾಗಿ ತಿಳಿಸಿದ,
ಆಗಾ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ
ದೋಣಿ ಮೂಲಕ ಅಪಾಯಕಾರಿ ಪ್ರವಾಹವನ್ನು ಲೆಕ್ಕಿಸದೆ, ತನ್ನ ಪ್ರಾಣದ ಹಂಗನ್ನು ತೊರೆದು
ಒಂದೂವರೆ ಗಂಟೆ ಅವಧಿಯಲ್ಲಿ
ಒಬ್ಬೊಬ್ಬರನ್ನಾಗಿ ಎಂಟು ಜನ ಗ್ರಾಮಸ್ಥರ ಪ್ರಾಣ ರಕ್ಷಣೆ ಮಾಡಿದ.
ಪ್ರವಾಹದಿಂದ ಪಾರಾದ
1) ಶ್ರೀಮಂತ ರಾಯಪ್ಪ.
2) ಸಿದಿಲೆಪ್ಪ ರಾಯಪ್ಪ.
3) ಚಂದ್ರಪ್ಪ ರಾಯಪ್ಪ.
4) ಸತೀಶ.
5) ಶಂಕರಪ್ಪ ನಾಗಪ್ಪ.
6) ಬೀರಪ್ಪ ಪೂಜಾರಿ.
7) ರಾಜಪ್ಪ ಬಸವರಾಜ.
8)ಸಂತೋಷ ರಾಜಪ್ಪ.
ಈ ಎಂಟು ಜನರು ಕೂಡ ಶರಣು ನಮಗೆ ಪುನರ್ಜನ್ಮ ನೀಡಿದ ಪುಣ್ಯಾತ್ಮ,
ಅಪತ್ಬಾಂದವ,
ಅವನಿಗೆ ನಾವು ಸದಾ ಚಿರರುಣಿ ಎಂದು ಕೊಂಡಾಡಿದ್ದಾರು.
ಇದೆ ಸಂಧರ್ಭದಲ್ಲಿ ಸೇಡಂ ತಾಲ್ಲೂಕು ಕೋಲಿ ಸಮಾಜದ ಮಾಜಿ ಅಧ್ಯಕ್ಷರು,
ಕಾಂಗ್ರೆಸ್ ಮುಖಂಡರಾದ
ಸೋಮಶೇಖರ್ ಬಿಬ್ಬಳಿ ಅವರ ನೇತೃತ್ವದಲ್ಲಿ
ಚಂದ್ರಶೇಖರ ಹೊಸಮನಿ ಬಿಬ್ಬಳಿ,
ಜಗನ್ನಾಥ ಪೋಲಿಸ್ ಪಾಟೀಲ್ ಬಿಬ್ಬಳಿ,
ಹಾಗೂ ಊರಿನ ಮುಖಂಡರುಗಳು
ವೀರ, ಸಾಹಸಿ ಯುವಕ ಶರಣು ಅವರನ್ನು ಸನ್ಮಾನಿಸಿ ಗೌರವಿಸಿದರು,
ಹಾಗೂ 11 ಸಾವಿರ ರೂಪಾಯಿಗಳ ಗೌರವಧನ ನೀಡಿ
ಪುರಸ್ಕಾರಿಸಿದರು.
ಶರಣು ಅವರ ಸಾಧನೆ ಮಿನುಗಾರ ಸಮಾಜಕ್ಕೆ ಪ್ರೇರಣೆ ಪ್ರೋತ್ಸಾಹವಾಗಿದೆ,
ಸಾಹಸಿ ಶರಣು ನಮ್ಮ ಅಂಬಿಗ ನ್ಯೂಸ್ ವತಿಯಿಂದ ಅಭಿನಂದನೆಗಳು

Be the first to comment

Leave a Reply

Your email address will not be published.


*