ಬಾಗಲಕೋಟೆ: ಹುನಗುಂದ ವಿಕಲಚೇತನರ ಸ್ಥಗಿತಗೊಂಡ ಮಾಶಾಸನ,ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಜಾರಿಗೆ ತರುವುದು, 15ನೇ ಹಣಕಾಸಿನ ಶೇಕಡ 5ರ ಅನುದಾನವನ್ನು ಸದ್ಬಳಕೆ, ರಾಜ್ಯದ್ಯಂತ ಮುಕ್ತವಾಗಿ ಸಂಚರಿಸಲು ಬಸ್ ಪಾಸ್ ನೀಡುವುದು ಸೇರಿದಂತೆ 20 ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಜುಲೈ 6 ರಂದು ಬೆಳಿಗ್ಗೆ 10.30 ಗಂಟೆಗೆ ನಮ್ಮ ಕಾರ್ಯಾಲಯದಿಂದ ತಹಶೀಲ್ದಾರ್ ಕಚೇರಿಯ ವರೆಗೆ ಬೃಹತ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಪುಟ್ಟರಾಜ ಗವಾಯಿಗಳ ವಿಕಲಚೇತನರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಂಗಮೇಶ್ ಬಾವಿಕಟ್ಟಿ ಹೇಳಿದರು.ಪಟ್ಟಣದ ತಾಲೂಕು ವಿಕಲಚೇತನರ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಬಹುತೇಕ ಗ್ರಾಮಗಳ ವಿಕಲಚೇತನರ ಮಾಶಾಸನವನ್ನು ಸ್ಥಗಿತಗೊಳಿಸಿ ವಿಕಲಚೇತನರ ಬದುಕನ್ನು ದುಸ್ತರ ಗೊಳಿಸಿದ್ದು ಇದರ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮೌಖಿಕವಾಗಿ ಹೇಳಿದರು ಪ್ರಯೋಜನವಾಗಿಲ್ಲ ಕಳೆದ ಎರಡು ವರ್ಷಗಳಿಂದ ಅಂಗವಿಕಲರಿಗಾಗಿ ಮೀಸಲಿರುವ 20ಲಕ್ಷ ಶಾಸಕರ ಅನುದಾನ ಬಳಕೆಯಾಗಿಲ್ಲ ಇಂತಹ ಹತ್ತು ಹಲವು ವಿಕಲಚೇತನರ ಸಮಸ್ಯೆಗಳನ್ನು ಸರಕಾರಕ್ಕೆ ಮುಟ್ಟಿಸುವ ಸಲುವಾಗಿ ಈ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ರಘು ಹುಬ್ಬಳ್ಳಿ ಮಾತನಾಡಿ ಹುಟ್ಟುವ ಮಕ್ಕಳ ಅಂಗವೈಕಲ್ಯವನ್ನು ಪತ್ತೆಹಚ್ಚುವ ಸ್ಕ್ರೀನಿಂಗ್ ಸೆಂಟರ್ ಗಳನ್ನು ತಾಲೂಕಿನ ಪ್ರತಿಯೊಂದು ಪಂಚಾಯಿತಿಗೊಂದರಂತೆ ಇಲ್ಲವೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒಂದರಂತೆ ಸ್ಥಾಪಿಸುವ ಕಾರ್ಯವಾಗಬೇಕು.ಆಗ ಮಾತ್ರ ಅಂಗವೈಕಲ್ಯವನ್ನು ತಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ರೆಹಮಾನ ಬುಹಾಜಿ,ಚಿದಾನಂದ ತತ್ರಾಣಿ ಹುಸೇನಸಾಬ ಮುದಗಲ್ಲ,ಮಹಾಂತೇಶ ಬೈಲಕೂರ ಮತ್ತು ಮಲ್ಲಿಕಾರ್ಜುನ ಹಳ್ಳೂರ ಸೇರಿದಂತೆ ಅನೇಕರು ಇದ್ದರು.
Be the first to comment