ತಾರಕಕ್ಕೇರಿದ ಕುಡಿಯುವ ನೀರಿನ ಸಮಸ್ಯೆ:300 ಮನೆಗಳಿಗೂ ಒಂದೆ ನಲ್ಲಿ.

ವರದಿ: ಶರಣಪ್ಪ ಬಾಗಲಕೋಟೆ

ಇನ್ನಾದರು ಹರಿಸುವರೆ ಚಿತ್ತವನ್ನ ಇವರತ್ತ?ಅಧಿಕಾರಿಗಳು, ಜನಪ್ರತಿನಿದಿಗಳು.

ರಾಜ್ಯದಲ್ಲಿ ಒಂದು ಕಡೆ ಕೊರೊನಾ ಅಟ್ಟಹಾಸ, ಮತ್ತೊಂದು ಕಡೆ ನೀರಿಗೆ ಹಾಹಾಕಾರ ಉಂಟಾಗಿದೆ.ಬದಾಮಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ಮೂಲಭೂತ ಅವಶ್ಯಕತೆಯಾದ ಕುಡಿಯುವ ನೀರಿನ ಕೊರತೆ ಉಂಟಾಗಿದೆ.ಬದಾಮಿಯ ಸುಳ್ಳ ಗ್ರಾಮದಲ್ಲಿ 300 ಮನೆಗಳಿದ್ದು ಒಂದೆ ನಲ್ಲಿ ಇದೆ.

2007 ಮತ್ತು 2009 ರಲ್ಲಿ ಮಲಪ್ರಭಾ ನದಿ ಪ್ರವಾಹದಿಂದ 300 ಮನೆಗಳನ್ನು ಸ್ಥಳಾಂತರಿಸಿದ್ದು ದಶಕ ಕಳೆದರು ಯಾವುದೇ ಅಧಿಕಾರಿಗಳಾಗಲಿ,ಜನಪ್ರತಿನಿಧಿಗಳಾಗಲಿ ಇತ್ತಕಡೆ ಸುಳಿದಿಲ್ಲ.ನಾವು ಕುಡಿಯುವ ನೀರಿಗಾಗಿ ಪರದಾಡುವ ವ್ಯವಸ್ಥೆ ತಪ್ಪಿಲ್ಲ.ಎಂದು ಗ್ರಾಮಸ್ಥರು,ಯುವಕರು ಅಕ್ರೋಷ ವ್ಯಕ್ತಪಡಿಸಿದ್ದಾರೆ.

ಪ್ರತಿದಿನ ವಯೋವೃದ್ದರು,ತುಂಬು ಗರ್ಭಿಣಿಯರು, ಚಿಕ್ಕ ಚಿಕ್ಕ ಮಕ್ಕಳು ನೀರಿಗಾಗಿ ಬಕಪಕ್ಷಿಯಂತೆ ಕಾಯುವುದೇ ಒಂದು ಉದ್ಯೋಗವಾಗಿದೆ. ಗ್ರಾಮದಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದೆ. ನೀರಿನ ಟ್ಯಾಂಕ್‌ ಮುಂದೆ ಸಾಲು ಬಿಂದಿಗೆಗಳು ಇಟ್ಟುಕೊಂಡು ಗ್ರಾಮಸ್ಥರು ನಿತ್ಯ ಮುಗಿಬಿದ್ದಿರುತ್ತಾರೆ.ಗ್ರಾಮದಲ್ಲಿ ಇನ್ನು ಕೂಡಾ ಸಿಸಿ ರಸ್ತೆ ಇಲ್ಲ, ಕುಡಿಯಲು ನೀರಿಲ್ಲದೆ ಗ್ರಾಮಸ್ಥರು ಪರದಾಟ ನಡೆಸುತ್ತಿದ್ದಾರೆ.ಹೌದು, ಬದಾಮಿ ತಾಲ್ಲೂಕಿನ ಸುಳ್ಳ ಗ್ರಾಮದ ಚಿಂತಾಜನಕ ಸ್ಥಿತಿ ಇದು. 300 ಮನೆಗಳು ಇದ್ದು ಸರ್ಕಾರ ನೀರಿಗಾಗಿ ಲಕ್ಷಗಟ್ಟಲೆ ಅನುದಾನ ಖರ್ಚು ಮಾಡಿದರೂ ಸಹ ಅದರ ಉಪಯೋಗ ಗ್ರಾಮದ ಜನರಿಗೆ ತಲುಪುತ್ತಿಲ್ಲ ಎನ್ನುತ್ತಾರೆ ನಿವಾಸಿಗಳು.

ಗ್ರಾಮದಲ್ಲಿ ಸಿಸಿ ರಸ್ತೆಗಳು ಹದಗೆಟ್ಟಿವೆ. ಚರಂಡಿ ವ್ಯವಸ್ಥೆ ಇಲ್ಲದಂತಾಗಿ ಸ್ವಚ್ಚತೆ ಮರೀಚಿಕೆಯಾಗಿದೆ. ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಅನೇಕ ಸಮಸ್ಯೆಗಳು ತಾಂಡವವಾಡುತ್ತಿವೆ. ಅಧಿಕಾರಿಗಳು ಬಂದು ನೋಡಿ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಾರೆ ಗ್ರಾಮಸ್ಥರು.ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತ ಇದೆ.ಈಗ ಶಾಲೆಗಳಿಗೆ ರಜೆ ಇದ್ದು ಸಣ್ಣ ಸಣ್ಣ ಮಕ್ಕಳು ತಳ್ಳುವು ಗಾಡಿಯಿಂದ ನೀರು ತರಲು ಹರ ಸಾಹಸ ಪಡುತ್ತಾರೆ.ಕಚ್ಚಾ ರಸ್ತೆ ಇದ್ದು ತಗ್ಗು – ದಿನ್ನೆಗಳಿಂದ ಕೂಡಿದೆ.

ಕುಡಿಯುವ ನೀರಿನ ಸಮಸ್ಯೆ ಕುರಿತು ದೂರವಾಣಿ ಮೂಲಕ ಪಿಡಿಒ ರವರನ್ನು ಸಂಪರ್ಕಿಸಿದಾಗ ರೈತರ ಹೊಲಗಳಿಂದ ಕುಡಿಯುವ ನೀರಿನ್ನು ನೀಡಲು ಈಗಾಗಲೆ ಕೇಳಲಾಗಿದ್ದು ರೈತರ ಜೊತೆ ಒಪ್ಪಂದ ಮಾಡಿಕೊಂಡು ಅಲ್ಲಿಂದ ಪೈಪಲೈನ್ ಮಾಡಿಸಿ ಒಂದು ವಾರದಲ್ಲಿ ವ್ಯವಸ್ಥೆ ಮಾಡಲಾಗುವುದೆಂದು ಅಂಬಿಗ ನ್ಯೂಸಗೆ ಮಾಹಿತಿ ನೀಡಿದ್ದಾರೆ.

Be the first to comment

Leave a Reply

Your email address will not be published.


*