ಉರಗ ಹಿಡಿಯುವ ಕಲೆಯಲ್ಲಿ ಪಳಗಿದ ಉರಗ ತಜ್ಞನಿಗೆ ಕಚ್ಚಿದ ವಿಷ ಸರ್ಪ:ಆರೋಗ್ಯದಲ್ಲಿ ಚೇತರಿಕೆ.

ವರದಿ: ಶರಣಪ್ಪ ಬಾಗಲಕೋಟೆ

ಹಾವು ಹಿಡಿಯುವುದು ಒಂದು ಕಲೆ. ಆ ಕಲೆ ಎಲ್ಲರಿಗೂ ಬರುವುದಿಲ್ಲ. ಹಾವು ಹಿಡಿಯುವ ಕಲೆಯನ್ನು ಕರಗತ ಮಾಡಿಕೊಂಡವರೂ ಅನೇಕ ಬಾರಿ ಎಡವುದಿದೆ. ಹಾವು ಹಿಡಿಯುವಾಗ ಸ್ವಲ್ಪ ಯಾಮಾರಿ ಜೀವವನ್ನೇ ಕಳೆದು ಕೊಂಡ ಅನೇಕ ಉದಾಹರಣೆಗಳಿವೆ.

ಹಾವುಗಳು ಪ್ರತ್ಯಕ್ಷ ಗೊಂಡಾಗ ಸಾರ್ವಜನಿಕರ ಕರೆಗೆ ಸ್ಪಂದಿಸಿ ಕ್ಷಣಮಾತ್ರದಲ್ಲಿ ಹಾಜರಾಗುವ ಉರಗತಜ್ಞ ಡ್ಯಾನಿಯಲ್ ನ್ಯೂಟನ್ ಅವರಿಗೆ ನಾಗರ ಹಾವು ಕಚ್ಚಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ 22 ವರ್ಷಗಳಿಂದ ಉರಗಗಳನ್ನು ಸಂರಕ್ಷಿಸಿ ಉರಗ ಗಳನ್ನು ಕಾಡಿಗೆ ಬಿಡುವ ಕಾಯಕದಲ್ಲಿ ತೊಡಗಿರುವ ಅವರು ಬುಧವಾರ ಮುಚಖಂಡಿ ಕ್ರಾಸ್ ಬಳಿಯ ಜಯನಗರ ಬಡಾವಣೆಯಲ್ಲಿ ನಾಗರಹಾವು ಹಿಡಿಯುವ ವೇಳೆ ಅವರ ಎಡಗೈ ಬೆರಳಿಗೆ ನಾಗರ ಹಾವು ಕಚ್ಚಿದೆ.ತಕ್ಷಣ ಅವರ ಸಹೋದರ ಡೆವಿಡ್ ಹಾಗೂ ಸ್ನೇಹಿತ ಮುಕ್ತಾರ ಮೋಮಿನ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಘಟನೆಯಿಂದ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದು ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ.ಪ್ರಾಣಾಪಾಯವಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಘಟನೆ ಕುರಿತು ವಿವರಿಸಿದ ಡೇವಿಡ್ ಘಟನೆ ನಡೆದಾಗ ನಾನು ಸ್ಥಳದಲ್ಲಿದ್ದೆ 3000ಕ್ಕೂ ಅಧಿಕ ಹಾವುಗಳನ್ನು ಹಿಡಿದಿದ್ದಾರೆ ಈ ರೀತಿಯ ಘಟನೆಗಳು ಸಂಭವಿಸಿರಲಿಲ್ಲ ನಾಗರಹಾವು ಅಪಾಯಕಾರಿಯಾಗಿರುತ್ತದೆ. ಅವುಗಳ ಸಮೀಪ ಹೋಗುವಾಗ ಎಚ್ಚರದಿಂದ ಇರಬೇಕು ಅವುಗಳು ದಾಳಿ ಮಾಡುವ ಸಂಭವ ಹೆಚ್ಚು ಎಂದು ಹೇಳಿದರು.

ಪರಿಸರದಲ್ಲಿ ಹಾವುಗಳ ಪಾತ್ರ.

ಆಹಾರ ಸರಪಳಿಯಲ್ಲಿ ಹಾವುಗಳ ಪಾತ್ರ ಪ್ರಮುಖವಾ ದುದು. ಅವುಗಳ ಸಂಖ್ಯೆ ಕಡಿಮೆ ಆದಷ್ಟೂ ಇಲಿ, ಹೆಗ್ಗಣಗಳು ಹೆಚ್ಚಾಗಿ, ರೈತರಿಗೆ ಬೆಳೆನಷ್ಟ ಉಂಟಾಗುತ್ತದೆ. ಒಂದು ಹಾವು ವರ್ಷಕ್ಕೆ 200–300 ಇಲಿಗಳನ್ನು ತಿನ್ನುತ್ತದೆ. ಇದರಿಂದ ಎಷ್ಟೋ ಬೆಳೆ ಸಂರಕ್ಷಣೆ ಆಗುತ್ತದೆ. ಯಾವುದೋ ಒಂದು ಸಂದರ್ಭದಲ್ಲಿ ಮನೆಯೊಳಗೆ ಸೇರಿರುತ್ತದೆ ಎಂಬ ಕಾರಣಕ್ಕೆ, ಹಾವನ್ನು ಕೊಲ್ಲುವುದು ಸರಿಯಲ್ಲ. ಈ ವಿಷಯವನ್ನು ಜನರಿಗೆ ಮನವರಿಕೆ ಮಾಡುವುದೂ ನ್ಯೂಟನ್ ಡ್ಯಾನಿಯಲ್ ರವರ ಉದ್ದೇಶ.

Be the first to comment

Leave a Reply

Your email address will not be published.


*