ಅಗಸ, ಕ್ಷೌರಿಕರಿಗೆ 5 ಸಾವಿರ ನೆರವು

ವರದಿ: ಶರಣಪ್ಪ ಬಾಗಲಕೋಟೆ

ಬಾಗಲಕೋಟೆ: ಕೋವಿಡ್-19 ಕಾರಣ ಲಾಕ್‍ಡೌನ್ ಹಿನ್ನಲೆಯಲ್ಲಿ ದೈನಂದಿನ ಉದ್ಯೋಗವನ್ನು ನಡೆಸಲಾರದೆ ಆದಾಯವನ್ನು ಕಳೆದುಕೊಂಡಿರುವ ಅಗಸ ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರಿಗೆ ಒಂದು ಬಾರಿ ಪರಿಹಾರವಾಗಿ ಕುಟುಂಬದ ಒಬ್ಬ ಸದಸ್ಯರಿಗೆ 5 ಸಾವಿರ ರೂ.ಗಳ ನೆರವು ನೀಡಲು ಸರಕಾರ ಘೋಷಿಸಿದೆ.

ಬಾಗಲಕೋಟ ಜಿಲ್ಲೆಯ ಅಗಸ ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯದ ಕಾರ್ಮಿಕರು ಜೂನ್ 30 ರೊಳಗಾಗಿ ಸೇವಾ ಸಿಂದು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಸಲ್ಲಿಸುವ ಫಲಾನಿಭವಿಯು ಕ್ಷೌರಿಕ ಅಥವಾ ಅಗಸ ವೃತ್ತಿಯಲ್ಲಿ ತೊಡಗಿರಬೇಕು, 18 ರಿಂದ 65 ವರ್ಷ ವಯಸ್ಸಿನವರಾಗಿರವೇಕು, ಬಿಪಿಲ್ ಕಾರ್ಡ್ ಹೊಂದಿರಬೇಕು, ಎಂದು ಕಾರ್ಮಿಕ ಅಧಿಕಾರಿ ಬಾಗಲಕೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*