ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ:ವಿವೇಕಾನಂದ ಹುಲ್ಯಾಳ.

ವರದಿ: ಶರಣಪ್ಪ ಬಾಗಲಕೋಟೆ

ನೇಕಾರ ಸಮ್ಮಾನ್ ಯೋಜನೆಯ ಮೊತ್ತ ಹೆಚ್ಚಳ ಕುರಿತು ಸರ್ಕಾರಕ್ಕೆ ಒತ್ತಾಯ.

ಬಾಗಲಕೋಟೆ: ದೇಶದಲ್ಲಿ ಕೋವಿಂಡ 19 ಕೊರೊನಾದ ಲಾಕ್ ಡೌನದಿಂದ ಬಡ ಜನರ ಜೀವನ ಬಹಳ ಕಷ್ಟಕರವಾಗಿದ್ದು ಅದೇರೀತಿ ಕೈಮಗ್ಗ ನೇಕಾರರ ಮತ್ತು ವಿದ್ಯುತ್ ಚಾಲಿತ ನೇಕಾರರ ಸಂಕಷ್ಟವನ್ನರಿತು ರಾಜ್ಯ ಸರ್ಕಾರ ಘೋಷಣೆ ಮಾಡಿದ “ನೇಕಾರ ಸಮ್ಮಾನ” ಯೋಜನೆಯಡಿಯಲ್ಲಿ ಪ್ರತಿ ವರ್ಷಕ್ಕೆ 2000 ನೀಡುತ್ತಿರುವ ಸುದ್ದಿ ಸ್ವಾಗತಾರ್ಹವಾದದ್ದು.

ಒಬ್ಬ ನೇಕಾರ ಬಟ್ಟೆ ನೇಯ್ದರೆ ಅವರ ಪತ್ನಿ ನೂಲನ್ನು ಸುತ್ತಬೇಕು,ಒಂದು ಸೀರೆ ತಯಾರಾಗಿ ಮಾರಾಟವಾಗುವ ಹಂತಕ್ಕೆ ಬಂದು ತಲಪುವವರೆಗೂ ಅದರ ಹಿಂದಿರುವ ಹಲವಾರು ಕಾರ್ಮಿಕರ ಪರಿಶ್ರಮ, ಅವರುಗಳ ಸಂಬಳ, ಮಗ್ಗದ ವಿದ್ಯುತ್ ಬಿಲ್ಲ್ , ಡಿಸೈನ್ ಹಾಗೂ ಜಕಾರ್ಡ್ ಕಟ್ಟಿಸುವ ಖರ್ಚೂ ಸೇರಿದಂತೆ ಅದಕ್ಕೆ ಸಂಬಂಧ ಪಟ್ಟ ಕಚ್ಚಾ ವಸ್ತುಗಳಾದ ಜರದ ಕೊನಸ್, ಪಾಲಿಸ್ಟರ್ ಹಾಗೂ ಬಿಂಬ, ಮತ್ತು ಬಾಬಿನ್ಗಳು, ಮಗ್ಗದ ಸಾಮಾನುಗಳು ಇನ್ನಿತರೇ ವಸ್ತುಗಳನ್ನು ಬಳಕೆಮಾಡಿಕೊಂಡು ಸೀರೆ ತಯಾರಿಸುವುದು ಒಂದು ಕಡೆಯಾದರೆ ,ಆಯಾ ಭಾಗದ ದೊಡ್ಡ ಮಟ್ಟದ ದಲ್ಲಾಳಿಗಳು ಅತಿ ಕಡಿಮೆ ಬೆಲೆಗೆ ಖರೀದಿಸುವುದಲ್ಲದೆ ಹಣವನ್ನು ಕೊಡಬೇಕಾದರೆ ಹಲವಾರು ದಿನಗಳವರೆಗೆ ಸತಾಯಿಸುತ್ತಾರೆ.

ಇದರಿಂದ ಒಂದು ಕೈಮಗ್ಗ ಹಾಗೂ ವಿದ್ಯುತ ಚಾಲಿತ ಮಗ್ಗಗಳನ್ನು ನಡೆಸಬೇಕಾದರೆ ಮೂರರಿಂದ ನಾಲ್ಕು ಜನರ ಅವಶ್ಯಕತೆ ಇದ್ದು ಇವರ ಶ್ರಮಕ್ಕಾದರೂ ಸರ್ಕಾರ ನೇಕಾರರ ಸಮ್ಮಾನ ಯೋಜನೆಯ ಮೊತ್ತವನ್ನು 2000 ರೂಪಾಯಿಗಳಿಂದ 5000 ರೂಪಾಯಿಗಳಿಗೆ ಹೆಚ್ಚಿಸಬೇಕು.

ನೇಕಾರ ಒಕ್ಕೂಟದ ವಿವಿಧ ಬೇಡಿಕೆಗಳು:

ರೈತರಿಗೆ ಯಾವರೀತಿ ರೂಪಾಯಿ 3 ಲಕ್ಷದವರೆಗೆ 0 % ಬಡ್ಡಿದರದಲ್ಲಿ ಸಾಲ
ನೀಡಲಾಗುತ್ತದೇಯೋ ಅದೆ ರೀತಿ ನೇಕಾರರಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ, ನೇಕಾರರ ಸಹಕಾರ ಸಂಘದ ಮುಖಾಂತರ 0% ಬಡ್ಡಿ ದರದಲ್ಲಿ ರೂಪಾಯಿ 3 ಲಕ್ಷ ಗಳವರೆಗೆ ಸಾಲನೀಡಬೇಕು .

2019 ಎಪ್ರೀಲ್ ದಿಂದ 2020 ಮೇ ವರಗೆ ಇರುವ ರಾಷ್ಟ್ರೀಕೃತ ಬ್ಯಾಂಕ, ನೇಕಾರರ ಸಹಕಾರ ಸಂಘ, ಪತ್ತಿನ ಸಹಕಾರ ಸಂಘ, ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕಿನಲ್ಲಿರುವ ನೇಕಾರರ ಸಂಪೂರ್ಣ ಸಾಲಮನ್ನಾ ಮಾಡಬೇಕು ಮತ್ತು ವಿದ್ಯುತ್ ಚಾಲಿತ ಮಗ್ಗಗಳ ವಿದ್ಯುತ್ ಬಿಲ್ ಮನ್ನಾ ಮಾಡುವುದು.

ನೇಕಾರರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು, ಪ್ರತಿಯೊಬ್ಬ ನೇಕಾರರಿಗೆ ನೇಕಾರ ಕಾರ್ಡ ಒದಗಿಸುವುದು, ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ ಕಾರ್ಮಿಕರಿಗೆ ದೊರಯುವ ಸೌಲಭ್ಯಗಳು ನೇಕಾರರಿಗೂ ಸಿಗುವಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಾನ್ನ ಮುಖ್ಯ ಮಂತ್ತಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರಲ್ಲಿರಾಜ್ಯ ನೇಕಾರ ಒಕ್ಕೂಟದ ನಿರ್ದೇಶಕರಾದ ವಿವೇಕಾನಂದ ರುದ್ರಪ್ಪ ಹುಲ್ಯಾಳ ಮತ್ತು ಚಿದಾನಂದ
ದೂಪದ ಮಾಜಿ ತಾಲೂಕ ಪಂಚಾಯ್ತಿ ಸದಸ್ಯರು ಸೂಳಿಬಾವಿ ಒತ್ತಾಯಿಸಿದ್ದಾರೆ.

Be the first to comment

Leave a Reply

Your email address will not be published.


*