ಪತ್ರಕರ್ತನ ಮೇಲೆ ಸುಳ್ಳು ಆರೋಪ ಕ್ರಮಕ್ಕೆ ಡಿಎಸ್ ಎಸ್ ಒತ್ತಾಯ.

ವರದಿ:ರಾಘವೇಂದ್ರ ಮಾಸ್ತರ

ಸುಳ್ಳು ಸುದ್ದಿ ಮಾಡಿದ ಖಾಸಗಿ ವಾಹಿನಿಯ ಜಿಲ್ಲಾವರದಿಗಾರನ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯ ಯುವ ಪರ್ತಕರ್ತ ವಿರೇಶ ರಡ್ಡಿ ಯಾಳಗಿ ಅವರ ಮೇಲೆ ಖಾಸಗಿ ವಾಹಿನಿಯೊಂದು ಸುಳ್ಳು ಸುದ್ದಿ ಮಾಡಿ ಕೋವಿಡ-೧೯ ಪ್ರಕರಣದಲ್ಲಿ ಸಿಲುಕಿಸಲು ಹೊರಟಿದ್ದಾರೆ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಉಪತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆಮನವಿ ಸಲ್ಲಿಸಲಾಯಿತು .

ಇದೇ ವೇಳೆ ಮಾತನಾಡಿದ ಸಮಿತಿ ಸಂಚಾಲಕ ಮರೇಪ್ಪ ಗೌಂಡಿ ಇಂದಿನ ದಿನಮಾನಗಳಲ್ಲಿ ಹಳೆಯ ವೈಷಮ್ಯ ವನ್ನು ಪತ್ರಿಕಾ ರಂಗಕ್ಕೆ ಎಳೆದು ತರುತ್ತಿದ್ದಾರೆ, ಇದು ಉತ್ತಮ ಬೆಳವಣಿಗೆಯಲ್ಲ ಕೊರೊನಾದಂತಹ ಸಮಯದಲ್ಲಿ ಕೊವಿಡ್ – ೧೯ ಪ್ರಕರಣದಲ್ಲಿ ಸುಳ್ಳು ಸುದ್ದಿಯಲ್ಲಿ ಯುವ ಪತ್ರಕರ್ತನ ಪೋಟೋ ಬಳಸಿಕೊಂಡು ಹೆಸರು ಬಳಸಿ ತೇಜೋವದೆ ಮಾಡುವ ಹುನ್ನಾರವಿದೆ, ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡು ಭಾಗಿಯಾದ ಆರೋಪಿಗಳಿಗೆ ಕಾನೂನು ಕ್ರಮ ಕೈಗೊಳ್ಳಬೇಕು. ಸುಳ್ಳು ಸುದ್ದಿ ಮಾಡಿದ ಜಿಲ್ಲಾವರದಿಗಾರರ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲವಾದ್ರೆ ಉಗ್ರ ಹೋರಾಟ ಮಾಡಲಾಗುವದು ಎಂದು ಹೇಳಿದರು .

ಇದೇ ಸಂದರ್ಭದಲ್ಲಿ ಶಿವಶರಣ ನಾಗರೆಡ್ಡಿ ,ಪ್ರಶಾಂತ ಗೋರಗೋರಿ,ಮರೇಪ್ಪ ಕಟ್ಟಿಮನಿ,ಚಂದ್ರಪ್ಪ ಯಾಳಗಿ ಇನ್ನಿತರರು ಇದ್ದರು.

 

Be the first to comment

Leave a Reply

Your email address will not be published.


*