ಕೋವಿಡ್ ನಿಯಮ ಉಲ್ಲಂಘನೆ : ದೂರು ದಾಖಲು

ವರದಿ: ಶರಣಪ್ಪ ಬಾಗಲಕೋಟೆ

ಬಾಗಲಕೊಟೆ:ಬಾಗಲಕೋಟೆ ನಗರದ ವಾರ್ಡ ನಂ.10ರ ರೈಲ್ವೆ ನಿಲ್ದಾಣದ ಹತ್ತಿರ ಅಂಚೆ ಕಛೇರಿ ಹಿಂಬಾಗದಲ್ಲಿ ಜೂನ್ 12 ರಂದು ಮದುವೆ ಕಾರ್ಯಕ್ರಮ ಜರುಗಿಸಲು ಷರತ್ತಿಗೆ ಒಳಪಟ್ಟು ನಗರಸಭೆಯಿಂದ ಅನುಮತಿ ನೀಡಲಾಗಿತ್ತು.

ಮದುವೆ ಕಾರ್ಯಕ್ರಮದಲ್ಲಿ ನಿಯಮ ಉಲ್ಲಂಘಿಸಿ ಕಾರ್ಯಕ್ರಮ ನಡೆಸಲಾಗಿದೆ. ಸದರಿ ಸ್ಥಳದಲ್ಲಿ ನಡೆದ ವರನಿಗೆ ಕೋವಿಡ್ ದೃಡಪಟ್ಟಿದೆ.

ಮದುವೆ ಸಂದರ್ಭದಲ್ಲಿ ತಪಾಸಣೆಗೆ ತೆರಳಿದಾಗ 50 ಜನ ಮಾತ್ರ ಇದ್ದದ್ದು ಕಂಡುಬಂದಿತು. ಅವರೆಲ್ಲರ ಹೆಸರು ಮತ್ತು ಮೊ.ನಂ ಪಡೆಯಲಾಗಿತ್ತು. ತದನಂತರ 50 ಕ್ಕೂ ಹೆಚ್ಚು ಜನ ಇದ್ದ ಬಗ್ಗೆ ಮದುವೆ ಸಮಾರಂಭದ ಸಿಡಿಯಿಂದ ತಿಳಿದುಬಂದಿದೆ.

ಆದ್ದರಿಂದ ನಗರದಲ್ಲಿ ಕೋವಿಡ್ ಹರಡಲು ಕಾರಣರಾದ ಎಮ್.ಎಸ್.ಸೌದಾಗರ ಅವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ-2005 ಹಾಗೂ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಅನ್ವಯ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿರುವುದಾಗಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*