ವಿದ್ಯಾರ್ಥಿಗಳ ಭವಿಷ್ಯದ ಸಂಕಲ್ಪಗಳಿಗೆ ಶುಭ ಹಾರೈಕೆ:ಆನಂದ ನ್ಯಾಮಗೌಡ
ಬಾಗಲಕೋಟೆ: ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ. ಪ್ರಸ್ತುತ ಸಾಲಿನ ಪರೀಕ್ಷೆಗಳು ನಡೆಯುತ್ತಿರುವುದರಿಂದ. ಜಮಖಂಡಿ ನಗರದ ಪರೀಕ್ಷಾ ಕೇಂದ್ರಗಳಿಗೆ (ಪಿ.ಬಿ. ಹೈಸ್ಕೂಲ್ ಮತ್ತು ಜಿ.ಜಿ.ಹೈಸ್ಕೂಲ) ಭೇಟಿ ನೀಡಿ ಕೈಗೊಂಡಿರುವ ಮುಂಜಾಗ್ರತಾ ಕ್ರಮ, ಸುರಕ್ಷತಾ ಕ್ರಮಗಳ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಶಾಸಕರಾದ ಆನಂದ ನ್ಯಾಮಗೌಡ
ಪರಿಶೀಲಿಸಿದರು.
ಈ ವೇಳೆ ಶಾಲಾ ಮುಖ್ಯಸ್ಥರೊಂದಿಗೆ ಚರ್ಚಿಸಿ ಈಗಾಗಲೇ ಕೈಗೊಂಡಿರುವ ಎಲ್ಲ ಸುರಕ್ಷತಾ ಮತ್ತು ಮುಂಜಾಗ್ರತಾ ಕ್ರಮಗಳು ಸಮಂಜಸವಾಗಿದ್ದು ಇನ್ನೂ ಹೆಚ್ಚಿನ ಅವಶ್ಯಕ ವ್ಯವಸ್ಥೆಗಳೆನಾದರೂ ಇದ್ದಲ್ಲಿ ನಮ್ಮ ಗಮನಕ್ಕೆ ತಂದರೆ ಕೂಡಲೆ ಸೂಕ್ತ ಅನುಕೂಲ ಮಾಡಲಾಗುವದು ಎಂದು ಹೇಳಿದರು.ನಮ್ಮ ಕ್ಷೇತ್ರದ ಸುಮಾರು 7746 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದು ಎಲ್ಲ ಪರೀಕ್ಷಾರ್ಥಿಗಳು ನಿಮ್ಮ ನಿಮ್ಮ ಶಾಲಾ ಆಡಳಿತ ಮಂಡಳಿಯವರು ನೀಡಿದ ಸಲಹೆ, ಸೂಚನೆ, ನಿರ್ದೇಶನಗಳನ್ನು ಸರಿಯಾಗಿ ಪಾಲಿಸಿರಿ ಮತ್ತು ವೈಯಕ್ತಿಕ ಸುರಕ್ಷತೆ ವಹಿಸಿರಿ. ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗದೆ ಏಕಾಗ್ರತೆಯಿಂದ ಪರೀಕ್ಷೆ ಬರೆದು ಯಶಸ್ವಿಯಾಗಿ ಮುಂದಿನ ಹಂತಕ್ಕೆ ಹೆಜ್ಜೆ ಹಾಕಿರಿ. ನಿಮ್ಮ ಭವಿಷ್ಯದ ನಿಮ್ಮ ಸಂಕಲ್ಪಗಳೆಲ್ಲ ಈಡೇರಲಿ ಎಂದು ಶುಭ ಹಾರೈಸಿದರು.
Be the first to comment