ಮದ್ದಿಲ್ಲದ ಮಹಾಮಾರಿಗೆ ಯೋಗವೆ ಟಾನಿಕ್.
ಬಾಗಲಕೋಟೆ:ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಶಿವಗಂಗಾ ಹಾಗೂ ಕೆಲೂರ ಕ್ಷೇತ್ರ ಇವರು ಅಂತರಾಷ್ಟ್ರೀಯ ಯೋಗದಿನಾಚರಣೆಯು
ವಿಶ್ವಕ್ಕೆ ಭಾರತೀಯರ ಮಹತ್ತರ ಕೊಡುಗೆ ಎಂದು ಯೋಗಾಸನ ಮಾಡುವುದರೊಂದಿಗೆ ಭಕ್ತರಿಗೆ ಸಂದೇಶ ನೀಡಿದರು.
ಪತಂಜಲಿ ಮಹರ್ಷಿಗಳು ಸರ್ವಜನಾಂಗಕ್ಕೂ ನೀಡಿದ ಯೋಗ ಸಾಧನ ಪ್ರತಿಯೊಬ್ಬರಿಗೂ ಆದರ್ಶ. ದೈಹಿಕ, ಮಾನಸಿಕ ಸ್ವಾಸ್ಥ್ಯ ಪ್ರಾಪ್ತಿಗಾಗಿ ಅನುದಿನವೂ ಆಚರಿಸಬೇಕಾದ ಮಹತ್ತರ ಸಾಧನವೇ ಯೋಗ. ಮದ್ದಿಲ್ಲದ ಮಹಾಮಾರಿಯ ಅಟ್ಟಹಾಸ ಅತಿಯಾಗಿ ಆತಂಕದಲ್ಲಿರುವ ಜನತೆ ಜಾಗೃತರಾಗ ಬೇಕಿದೆ. ಆರೋಗ್ಯ ಭಾಗ್ಯದಿಂದ ಬದುಕು ಶ್ರೀಮಂತವಾಗ ಬೇಕಿದೆ ಮನಸ್ಸು ವ್ಯಸನಗಳಿಂದˌ ಶರೀರ ವ್ಯಾಧಿಗಳಿಂದ ಮುಕ್ತವಾಗಬೇಕಿದೆ ಎಂದರು.
ಸ್ವಸ್ಥಬದುಕು ನಮ್ಮದಾಗಬೇಕಾದರೆ ಸರ್ವ ಸಂಕಷ್ಠಗಳಿಗೆ ಪರಿಹಾರ ಸಾಧನವಾದ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು.ಇಂತಹ ಮಹತ್ತರ ಸಾಧನ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ನಮ್ಮ ದೈನಂದಿನ ದಿನಚರಿಯ ಅವಿಭಾಜ್ಯ ಅಂಗವಾಗಬೇಕು. ಮನುಕುಲದ ಸಾರ್ಥಕ ಬದುಕಿಗೆ ಮಹತ್ತರ ಕೊಡುಗೆ ನೀಡಿದ ಪತಂಜಲಿ ಮಹರ್ಷಿಗಳನ್ನೂ, ಇದನ್ನು ವಿಶ್ವದಾದ್ಯಂತ ಜನಪ್ರಿಯಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು, ಜನತೆಗೆ ತಲುಪಿಸುವಲ್ಲಿ ಕಾರ್ಯತತ್ಪರರಾದ ಅಸಂಖ್ಯಾತ ಯೋಗ ಸಾಧಕರಿಗೆ ವಿಶೇಷ ಅಭಿನಂದನೆಗಳನ್ನು ಶ್ರೀ ಗಳು ತಿಳಿಸಿದರು.
Be the first to comment