ವಾರ್ಡ ಸಂಖ್ಯೆ:02 ಸಂಪೂರ್ಣ ಸ್ಥಬ್ದ.
ಬಾಗಲಕೋಟೆ:ಇಳಕಲ್ ತಾಲೂಕಿನ ಗುಡೂರ ಗ್ರಾಮದ ವಾರ್ಡ ಸಂಖ್ಯೆ:02 ರಲ್ಲಿ 50 ವರ್ಷದ ಮಹಿಳೆಗೆ ಕೊರೊನಾ ಸೊಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
50 ವರ್ಷದ ಮಹಿಳೆ ಪಿ-8301 ಮದುವೆ ಸಮಾರಂಭಕ್ಕೆಂದು ಹೋಗಿ ಬೆನ್ನು ನೋವಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ಹೋದಾಗ ಅಲ್ಲಿಂದ ಕೆ.ಎಂ.ಸಿ ಆಸ್ಪತ್ರೆಗೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿ ಪೊಸಿಟಿವ್ ಬಂದಿದ್ದು ಮನೆಯಲ್ಲಿ ಯಾರಿಗೂ ತಿಳಿಸದೆ ನೇರವಾಗಿ ಹುಬ್ಬಳ್ಳಿ ಬಸ್ ನಿಲ್ದಾಣದಿಂದ ಖಾಸಗಿ ವಾಹನದ ಮೂಲಕ ಗುಡೂರಿಗೆ ಆಗಮಿಸಿದ್ದು ಸುದ್ದಿ ತಿಳಿದ ತಕ್ಷಣ ಆಶಾ ಕಾರ್ಯಕರ್ತೆಯರು ಈ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆ ಗುಡೂರಿನಲ್ಲಿ ದಾಖಲು ಮಾಡಿ ನಂತರ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಮುಂದಿನ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ.ಸಂಪರ್ಕದಲ್ಲಿರುವ 17 ಜನರನ್ನು ಸರಕಾರಿ ಪ.ಪೂ ಕಾಲೇಜಿನಲ್ಲಿ ಕ್ವಾರಂಟೈನ್ ನಲ್ಲಿಡಲಾಗಿದೆ.
ಅಲ್ಲಿಯ ಕಂದಾಯ ಇಲಾಖೆ,ಪಂಚಾಯತ್ ಇಲಾಖೆಯ ಸಿಬ್ಬಂದಿ, ಪೋಲಿಸ್ ಸಿಬ್ಬಂದಿ ಹವಾಲ್ದಾರರಾದ ವಾಯ್.ಹೆಚ್.ವಾಲಿಕಾರ ಮತ್ತು ಎಸ್.ಎನ್.ತುಪ್ಪದ ಗ್ರಾಮ ಪಂಚಾಯತಿ ಸದಸ್ಯರಾದ ಹನಮಂತ ಹನಮನಾಳ, ಮಹೇಶ ಪವಾರ,ದೀಪಕ್ ದಾನಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯವರೆಲ್ಲರು ಸೇರಿ ಸಂಬಂಧಿಸಿದ ಏರಿಯಾವನ್ನು ಸಂಪೂರ್ಣ ಸೀಲ್ ಡೌನ್ ಮಾಡಿದ್ದಾರೆ.
ಈ ಪ್ರದೇಶದಲ್ಲಿ 280 ಮನೆಗಳಿದ್ದು ಜನಸಂಖ್ಯೆ ಅಂದಾಜು 993 ಇರುತ್ತದೆ ಕಂಟಾನ್ಮೆಂಟ್ ಪ್ರದೇಶದಲ್ಲಿ ಅವಶ್ಯಕ ವಸ್ತುಗಳ ಪೂರೈಕೆಗಾಗಿ ಆರಕ್ಷಕ, ಕಂದಾಯ, ಪಂಚಾಯತ್, ಸಿಡಿಪಿಒ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
Be the first to comment