ಶುಚಿ ಯೋಜನೆ ಅನುಷ್ಠಾನದಲ್ಲಿ ವಿಫಲ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿಗೆ ಸಿಇಓ ಮಾನಕರ ನೋಟಿಸ

ವರದಿ:- ಶರಣಪ್ಪ ಹೆಳವರ ಬಾಗಲಕೋಟ

ಬಾಗಲಕೋಟೆ: ಶುಚಿ ಯೋಜನೆಯಡಿಯಲ್ಲಿ ಶಾಲಾ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ನ್ಯಾಪ್‍ಕಿನ್‍ಗಳನ್ನು ಹಂಚಿಕೆ ಮಾಡುವಲ್ಲಿ ಕರ್ತವ್ಯ ಲೋಪ ಎಸಗಿದ ಜಿಲ್ಲಾ ಆರ್.ಸಿ.ಎಚ್ ಹಾಗೂ ಶುಚಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ಬಿ.ಜಿ.ಹುಬ್ಬಳ್ಳಿ ಅವರಿಗೆ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಇತ್ತೀಚೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ನ್ಯಾಪಕಿನ್‍ಗಳನ್ನು ವಿತರಣೆ ಮಾಡಿರುವುದು ಕಂಡುಬಂದಿತು. ಜನವರಿ ಮಾಹೆಯಲ್ಲಿಯೇ 4 ಲಕ್ಷ ನ್ಯಾಪಕಿನ್‍ಗಳು ಇದ್ದರು ಸಹ ಕೋವಿಡ್ ಸಮಯದಲ್ಲಿಯೂ ವಿತರಿಸದೇ ಇಲಾಖೆಯ ಕಚೇರಿಯ ನೆಲದ ಮೇಲೆ ಇಟ್ಟಿರುವದನ್ನು ಕಂಡು ಅತೃಪ್ತಿ ವ್ಯಕ್ತಪಡಿಸಿದರು.ಕಣ್ಣಿನ ದೋಷ ಇದ್ದವರಿಗೆ ಚೆಸ್ಮಾ, ಅಂಗವಿಕಲರಿಗೆ ವಾಹ ವಿತರಿಸದೇ ಕಚೇರಿಯಲ್ಲಿಯೇ ದಾಸ್ತಾನು ಮಾಡಿ ತಮ್ಮ ಗಮನಕ್ಕೆ ತರದಿರುವುದು ತಿಳಿದುಬಂದಿತು.

ಕಳೆದ 2019-20ನೇ ಸಾಲಿನಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ನೀಡಲು ಬಂದಿದ್ದ ಆರೋಗ್ಯ ಕಿಟ್, ಅಂಗವಿಕಲರಿಗೆ ಊರುಗೋಲು, ಟ್ರೈಸೈಕಲ್ ಹಾಗೂ ದಿನದ 24 ಗಂಟೆಗಳ ಆಸ್ಪತ್ರೆಗಳಿಗೆ ಅಗತ್ಯವಿರುವ ಡಸ್ಟಬಿನ್‍ಗಳು ಸಹ ಕಚೇರಿಯಲ್ಲಿ ಇರುವುದು ಕಂಡುಬಂದಿತು. ಮಹಿಳೆಯರು ಹಾಗೂ ಹದಿಹರೆಯದ ಹೆಣ್ಣು ಮಕ್ಕಳು ಋತು ಕಾಲದ ಸಮಯದಲ್ಲಿ ಉತ್ತಮ ಶುಚಿತ್ವ ಹಾಗೂ ಆರೋಗ್ಯ ಕಾಪಾಡುವ ದಿಸೆಯಲ್ಲಿ ಜಿಲ್ಲಾ ಮಟ್ಟದಲ್ಲಿ ರಚಿಸಲಾದ ಸಮಿತಿ ಇದ್ದರು ಸಮಿತಿಯ ಗಮನಕ್ಕೆ ತರದೇ ಇರುವುದು. ಕಳೆದೆರಡು ವರ್ಷಗಳಲ್ಲಿ ಶುಚಿ ಯೋಜನೆಯಡಿ 3 ಲಕ್ಷಕ್ಕೂ ಮೇಲ್ಪಟ್ಟು ನ್ಯಾಪಕಿನ್‍ಗಳು ಇದ್ದರೂ ವಿತರಸದೇ ಇರುವುದು ಪರಿಶೀಲನೆ ವೇಳೆಯಲ್ಲಿ ತಿಳಿದು ಬಂದಿರುವುದಾಗಿ ತಿಳಿಸಿದರು.

ಸರಕಾರಿ ಶಾಲೆ, ವಸತಿ ಶಾಲೆಯ ಮಕ್ಕಳಿಗೆ ತಿಂಗಳಿಗೆ ಒಂದು ಪಾಕೇಟ್ ನೀಡದೇ ಇರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕ್ರಮಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಹ ತಿರ್ಮಾನಿಸಲಾಯಿತು. ತಾಲೂಕಾ ಮಟ್ಟದಿಂದ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ನ್ಯಾಪಕಿನ್ ಈವರೆಗೂ ವಿತರಸದೇ ತಾಲೂಕಾ ಆಸ್ಪತ್ರೆಯಲ್ಲಿಯೇ ಕ್ರೋಢೀಕರಿಸಿರುವುದನ್ನು ಕಂಡುಬಂದಿತು. ಆರೋಗ್ಯ ಜಾಗೃತಿಯ ವಿವಿಧ ಸಾಮಗ್ರಿ ಹಾಗೂ ಆಯುರ್ವೇಧಿಕ್ ಔಷಧಿಗಳನ್ನು ಸಹ ದಾಸ್ತಾನು ಮಾಡಲಾಗಿದ್ದನ್ನು ಪ್ರಶ್ನಿಸಿ ವಿವರಣೆ ಕೇಳಲಾಯಿ ಸಮರ್ಪಕ ಉತ್ತರ ಬಾರದೇ ಹಿನ್ನಲೆಯಲ್ಲಿ, ಸಮಿತಿಯ ಮುಂದೆ ಪ್ರತಿ ತಿಂಗಳು ಹಂಚಿಕೆ ಮಾಡಲಾದ ಮಾಹಿತಿ ನೀಡದೇ ಕರ್ತವ್ಯಲೋಪ ಎಸಗಿದ್ದು, ವಿವರಣೆ ನೀಡಲು ಕಾರಣ ಕೇಳಿ ನೋಟಿಸ್ ನೀಡಿರುವುದಾಗಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*