ಬಡವರ ನೋವಿಗೆ ಸದಾ ಸ್ಪಂದಿಸುವೆ:ಎಸ್.ಆರ್.ನವಲಿಹಿರೇಮಠ.

ವರದಿ:- ಶರಣಪ್ಪ ಹೆಳವರ ಬಾಗಲಕೋಟ

ವಿವಿಧ ಸಮುದಾಯದವರಿಗೆ ಕೋವಿಡ್-19 ದಿನಸಿ ಕಿಟ್ ವಿತರಣೆ.

ಬಾಗಲಕೋಟೆ: ಹುನಗುಂದ ತಾಲೂಕಿನ ಕೆಲೂರ ಗ್ರಾಮದ ಕೋವಿಡ್-19 ಮಹಾಮಾರಿಯಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಅಲೆಮಾರಿ ಹೆಳವ ಸಮುದಾಯಗಳಿಗೆ ಎಸ್.ಆರ್.ಎನ್ ಫೌಂಡೇಷನ್‌ ನ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಆರ್.ನವಲಿಹಿರೇಮಠ ಆಹಾರ ದಿನಸಿ ಕಿಟ್ ವಿತರಿಸಿದರು.

ಗ್ರಾಮದ ಅತಿ ಬಡ ಮತ್ತು ಅಸಹಾಯಕ 300 ಕುಟುಂಬಗಳಿಗೆ 300 ಪಾಕೇಟ್ ದಿನಸಿ ಕಿಟ್ ನಲ್ಲಿ ಎಣ್ಣೆ,ಸಕ್ಕರಿ,ಅವಲಕ್ಕಿ,ಕೊಬ್ಬರಿಎಣ್ಣೆ,ಉಪ್ಪು,ಅರಿಶಿನ ಪುಡಿ,ಹವಿಜ ಪುಡಿ,ಕಡಲೆ ಕಾಳು ಸೇರಿದಂತೆ ಆಹಾರ ಧಾನ್ಯಗಳನ್ನು ವಿತರಿಸಿದ್ದಾರೆ.

ಫೌಂಡೇಶನ್ ಅಧ್ಯಕ್ಷ ನವಲಿಹಿರೇಮಠ ದಿನಸಿ ಕಿಟ್ ವಿತರಿಸಿ ಮಾತನಾಡಿ ಬಡಕುಟುಂಬಗಳಾದ ಹೆಳವರು ಒಕ್ಕಲು ಮನೆತನದ ವಂಶಾವಳಿ ಹೇಳುತ್ತ ಬೇರೆಯವರಿಗಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟಿರುತ್ತಾರೆ.ನಮ್ಮ ಮನೆಗು ಗೋಕಾಕ ತಾಲೂಕಿನ ಹೆಳವರು ಬರುತ್ತಾರೆ ಅವರಿಂದ ನಮ್ಮ ತಾತ ಮುತ್ತಾತರ ಮಾಹಿತಿ ಪಡೆದುಕೊಳ್ಳುತ್ತೇವೆ.ಇಂಥ ಸಮುದಾಯಕ್ಕೆ ಯಾವತ್ತೊ ಮೀಸಲಾತಿ ಸಿಗಬೇಕಾಗಿತ್ತು ಆದರೆ ಇದರಿಂದ ವಂಚಿತರಾಗಿದ್ದಾರೆ ಎಂದರು.

ಕೊರೊನಾ ಮಹಾಮಾರಿ ಜೊತೆ ಹೋರಾಡಲು ಮನೆ ಮದ್ದು ಅವಶ್ಯ.

ಇಂದು ಜಗತ್ತನ್ನೆ ತಲ್ಲಣಗೊಳಿಸಿದ ಕೊರೊನಾ ರೋಗಕ್ಕೆ ಔಷಧಿ ಕಂಡುಹಿಡಿಯುವುದು ಇನ್ನು ಬಹುದಿನಗಳು ಆಗಬಹುದು ನಾವು ಅದರ ಜೊತೆಗೆ ಬದುಕುವುದನ್ನು ಕಲಿತುಕೊಳ್ಳಬೇಕು.ಪ್ರತಿದಿನ ಬೆಳಿಗ್ಗೆ ಒಂದು ಗ್ಲಾಸ್ ಬಿಸಿ ನೀರಿಗೆ ನಿಂಬೆ ರಸ ಮತ್ತು ಅರಿಶಿನ ಪುಡಿ ಬೆರೆಸಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ತಪ್ಪದೆ ಎಲ್ಲರು ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಬದುಕನ್ನು ಸಾಗಿಸಬೇಕು ಎಂದರು.

ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ.

ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಅಲೆಮಾರಿ ಹೆಳವ ಜನಾಂಗದವರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ಕೊಡಿಸಬೇಕು. ತಾವು ತಮ್ಮ ಮಕ್ಕಳಿಗೆ ಎಸ್.ಎಸ್.ಎಲ್.ಸಿ ವರೆಗೆ ಶಿಕ್ಷಣ ಕೊಡಿಸಿ ಮುಂದಿನ ವ್ಯಾಸಾಂಗಕ್ಕೆ ಹಣಕಾಸಿನ ತೊಂದರೆಯಿಂದ ಅರ್ಧಕ್ಕೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ.ಅಂತ ಪ್ರತಿಭಾವಂತ ಮಕ್ಕಳ ಮುಂದಿನ ವ್ಯಾಸಾಂಗಕ್ಕೆ ನಮ್ಮ ಎಸ್.ಆರ್.ಎನ್ ಫೌಂಡೇಶನ್ ಸದಾ ನಿಮ್ಮೊಂದಿಗಿರುತ್ತದೆ.ಎಂದು ದಿನಸಿ ಕಿಟ್ ವಿತರಣಾ ಸಂದರ್ಭದಲ್ಲಿ ಎಸ್.ಆರ್.ನವಲಿಹಿರೇಮಠ ತಿಳಿಸಿದರು.

ಈ ಸಂದರ್ಭದಲ್ಲಿ ನಾಗರಾಜ ಶಡ್ಲಗೇರಿ,ಮೈಲಾರಪ್ಪ ತುಂಬದ ಯಮನಪ್ಪ,ರಾಜೆಸಾಬ,ರಾಮಣ್ಣ ಮಾದರ,ಮಲ್ಲಪ್ಪ ಚಲವಾದಿ,ಸಂಗೊಂದೆಪ್ಪ ಹೆಳವರ,ಕಾಂತೇಶ,ನಿಂಗಪ್ಪ ಭಜಂತ್ರಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*