ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ನಿರೀಕ್ಷೆ ಇಟ್ಟು ಬೆಳೆದಿದ್ದ ತೋಟಗಾರಿಕೆ ಬೇಳೆ ಪಪ್ಪಾಯ ಮಾರಾಟ ವಾಗದೆ ಹಣ್ಣಾಗಿ ಉದುರಿ ಬಿಳುತ್ತಿದ್ದು ರೈತರ ಪಾಲಿಗೆ ನುಂಗಾಲಾರದ ತುತ್ತಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಬಹು ನಿರೀಕ್ಷೆ ಇಟ್ಟುಕೊಂಡು ಅನ್ನದಾತ ಬೆಳಿದಿರುವ ಬೇಳೆಗಳು ವ್ಯಾಪಾರಸ್ಥರಿಲ್ಲದೆ, ವ್ಯಾಪಾರವಾಗದೇ ಬೆಳೆದ ಬೆಳೆಗಳನ್ನು ನೋಡುತ್ತಾ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ತಿತಿ ರೈತನಿಗೆ ಬಂದೊದಗಿದೆ,
ಹೌದು ದೇಶದಲ್ಲಿ ಯಾವುದೆ ಸಂದಿಗ್ಧ ಪರಸ್ತಿತಿ ಬಂದಾಗ ಮೊದಲಿಗೆ ಬಲಿಯಾಗುವುದೇ ದೇಶದ ಬೆನ್ನೆಲುಬು ರೈತರು
ಅನೇಕ ನಿರೀಕ್ಷೆ ಇಟ್ಟುಕೊಂಡು ರೈತರು ಬೆಳೆದಿರುವ ತೋಟಗಾರಿಕೆ ಬೆಳೆಯಾದ ಪಪ್ಪಾಯ ಬೆಳೆ , ಇನ್ನೇನು ರೈತರ ಕೈ ಸೇರಿತು ಏನ್ನುವ ಹೊತ್ತಿಗೆ ಕೊರೊನಾ ವೈರಸ್ ನಿಂದಾಗಿ ಈಡೀ ದೇಶವೇ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ನಮ್ಮ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪಪ್ಪಾಯಿ ಗಿಡಗಲ್ಲೆ ಹಣ್ಣಾಗಿ, ಕೊಳೆತು ಉದುರಿ ಬಿಳುತ್ತಿವೆ..
ಮಾರುಕಟ್ಟೆ ವ್ಯವಸ್ಥೆಯಲ್ಲಿ ಸೂಕ್ತ ಬೆಂಬಲ ಬೆಲೆ ಇಲ್ಲದೆ ಸಂಪೂರ್ಣ ನೆಲ ಕಚ್ಚಿದ್ದು ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ದುಡಿತಕ್ಕೆ ಮೋಸವಿಲ್ಲವೆನ್ನುವ ಹಾಗೆ ರೈತ ಬೇವರಿಳಿಸಿ ದುಡಿದಾಗ ಭೂಮಿ ದುಡಿತಕ್ಕೆ ತಕ್ಕ ಫಸಲನ್ನು ಕೊಟ್ಟಿದೆ ಆದರೆ ಉತ್ತಮವಾಗಿ ಬೇಳೆದ ಬೆಳೆಗಳು ಹಣ್ಣಾಗಿ ಗಿಡಗಳಲ್ಲೇ ಉದುರಿ ಬಿಳುತ್ತಿವೆ.. ಹೀಗಾಗಿ ರೈತರು ಸಂಕಷ್ಟಕ್ಕಿಡಾಗಿದ್ದಾರೆ.
ತಾಲ್ಲೂಕಿನ ಚಿಕನಹಳ್ಳಿ ಗ್ರಾಮದಲ್ಲಿ ಹತ್ತಾರು ಜನ ರೈತರು ಬಹು ನಿರೀಕ್ಷೆ ಇಟ್ಟು ಪಪ್ಪಾಯ ಬೆಳೆದಿದ್ದಾರೆ,
ನಿರೀಕ್ಷೆಗೆ ತಕ್ಕಂತೆಯೇ ಫಸಲು ಉತ್ತಮವಾಗಿ ಬಂದಿದೆ ಆದರೆ ವ್ಯಾಪಾರಸ್ಥರಿಲ್ಲದೆ ಸುಮಾರು 20 ಎಕರೆ ಪಪ್ಪಾಯಿ ಬೆಳೆ ಬೆಳೆಯಲಾಗಿದ್ದು
ಚಿಕ್ಕನಹಳ್ಳಿ ಗ್ರಾಮದ ರೈತರಾದ
ಬಸಣ್ಣ ಕಟ್ಟಿಮನಿ, ಯಂಕಪ್ಪ ಹುಣಸಗಿ, ಸಂಜೀವ ದೇವದುರ್ಗ, ರಾಮಚಂದ್ರ ಕಟ್ಟಿಮನಿ ತಮ್ಮ ಸ್ವಂತ ಜಮೀನಿನಲ್ಲಿ ಪಪ್ಪಾಯ ಬೆಳೆದಿದ್ದು ವ್ಯಾಪರವಾಗದೆ ಎಲ್ಲಾ ರೈತರ ಒಟ್ಟು ಅಂದಾಜು 30 ರಿಂದ 36ರ ಲಕ್ಷ ರೂಪಾಯಿಗಳಷ್ಟು ಬೆಳೆ ಬೆಳೆದು ವ್ಯಾಪಾರವಾಗದೆ ಉದುರಿ ಬಿಳುತ್ತಿವೆ.
ಕೂಡಲೇ ಸರ್ಕಾರ ರೈತರಿಗೆ ಪರಿಹಾರ ಕಲ್ಪಿಸುವುದರ ಜೊತೆಗೆ ರೈತರು ಬೆಳೆದಿರುವ ಬೇಳೆಯನ್ನು ಖರೀದಿಸಿ ಅನುಕೂಲ ಮಾಡಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ .
Be the first to comment