ಹರಿಹರದ ಸರ್ಕಾರಿ ಅಧಿಕಾರಿಗಳಿಂದ. ‘ಮಾಹಿತಿ’ಹಕ್ಕು,’ಮುಚ್ಚಿ ‘ಹಾಕು.?

ವರದಿ:- ಪ್ರಕಾಶ ಮಂದಾರ ಹರಿಹರ

ಜೀಲ್ಲಾ ಸುದ್ದಿಗಳು

ಹರಿಹರ:-ಆಡಳಿತದಲ್ಲಿ ಪಾರದರ್ಶಕತೆ ತರುವ ಸದ್ದುದ್ದೇಶದಿಂದ 2005 ರಲ್ಲಿ ಅಂದಿನ ಕೇಂದ್ರ ಸರಕಾರವು ಮಾಹಿತಿ ಹಕ್ಕು ಕಾಯ್ದೆಯನ್ನು ಇಡೀ ದೇಶಾದ್ಯಂತ ಜಾರಿಗೆ ತಂದಿತ್ತು .

ನಾಗರಿಕರು ಸರ್ಕಾರದ ಅಧೀನ ಸಂಸ್ಥೆಗಳಿಂದ ತಮ್ಮ ಅಗತ್ಯ ಸೇವೆಗಳಿಗೆ ಬೇಕಾದ ದಾಖಲೆಗಳನ್ನು ಕೇಳಿ ಪಡೆಯಲು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ.

ಆಡಳಿತದಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲು ದೇಶದ ನಾಗರಿಕರಿಗೆ ನೀಡಿರುವ ಒಂದು ಮುಕ್ತ ಅವಕಾಶ .ಕಡತಗಳು, ದಾಖಲೆಗಳು ,ಪತ್ರಿಕಾ ಪ್ರಕಟಣೆ ,ಆದೇಶಗಳು, ಸುತ್ತೋಲೆಗಳು, ಅಧಿಸೂಚನೆಗಳು, ಷರಾ- ಟಿಪ್ಪಣಿಗಳು,ಲಾಗ್ ಪುಸ್ತಕ ಪ್ರತಿಗಳು, ಗುತ್ತಿಗೆ ವಿವರಗಳು ಮತ್ತು ಟೆಂಡರ್ ದಾಖಲೆಗಳು, ವರದಿಗಳು ,ಮಾದರಿಗಳು,ಗಣೀಕೃತ ಮಾಹಿತಿಗಳು ಸೇರಿದಂತೆ ಇನ್ನೂ ಅನೇಕ ಲಭ್ಯವಿರುವ ಕಚೇರಿಯ ಮಾಹಿತಿ ಪಡೆಯಲು ಈ ಮಾಹಿತಿ ಹಕ್ಕು ಕಾಯ್ದೆಯನ್ನು ದೇಶದ ನಾಗರಿಕರು ಬಳಸಿಕೊಳ್ಳಬಹುದು .

ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದ ಸಂಪೂರ್ಣ ವಿವರ ಒಳಗೊಂಡಿರುವ ನಾಮಫಲಕವನ್ನು ಪ್ರತಿ ಸರ್ಕಾರಿ ಕಚೇರಿಯ ಮುಂಭಾಗದಲ್ಲಿ ಜನಸಾಮಾನ್ಯರಿಗೆ ಕಾಣುವಂತೆ ಹಾಕುವಂತೆ ನಿಯಮವನ್ನು ಹೊರಡಿಸಿ ಆದೇಶಿಸಲಾಗಿದೆ .

ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬಹುತೇಕ ಸರ್ಕಾರಿ ಕಚೇರಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಬಳಸಬೇಕಾದ ನಿಯಮಗಳ ನಾಮಫಲಕವನ್ನು ಹಾಕದೇ ಇರುವುದು ವಿಪರ್ಯಾಸವೇ ಸರಿ. ಇದರ ಜೊತೆ ಅನೇಕ ಅನುಮಾನಗಳನ್ನು ಸಹ ಹುಟ್ಟು ಹಾಕುತ್ತದೆ .

ತಾಲ್ಲೂಕಿನ ಆಡಳಿತದ ಕೇಂದ್ರಬಿಂದು ಮಿನಿ ವಿಧಾನಸೌಧದ ಕಚೇರಿಯ ಮುಂಭಾಗದಲ್ಲಿ ಈ ಮಾಹಿತಿ ಹಕ್ಕು ಕಾಯ್ದೆಯ ನಾಮಫಲಕವೇ ಮಾಯವಾಗಿದೆ .ಇವರ ಅಧೀನದಲ್ಲಿ ಬರುವ ಇನ್ನೂ ಅನೇಕ ಕಚೇರಿಯ ಕಥೆಯಂತೂ ಕೇಳಲೇಬೇಡಿ .’ಯಥಾ ರಾಜಾ, ‘ತಥಾ ಪ್ರಜೆ. ಎನ್ನುವಂತೆ ಮಿನಿ ವಿಧಾನಸೌಧದಲ್ಲಿ ‘ಮಾಹಿತಿ ಹಕ್ಕು’ ಕಾಯ್ದೆಯ ನಾಮಫಲಕವೇ ಇಲ್ಲ ಎಂದ ಮೇಲೆ,ಇನ್ನು ಪಂಚಾಯತ್ ಎಂಜಿನಿಯರಿಂಗ್ ಇಲಾಖೆ ,ತಾಲ್ಲೂಕು ಪಂಚಾಯತ್ ,ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ,ಮಹಿಳಾ ಮತ್ತು ಶಿಶು ಅಭಿವೃದ್ಧಿ ,ಇಲಾಖೆ ಕಾರ್ಮಿಕ ಕಲ್ಯಾಣ ಇಲಾಖೆ ,ಹಾಗೂ ತಾಲೂಕು ಕೇಂದ್ರದಲ್ಲಿ ಇರುವ ಇತರ ಇಲಾಖೆಯ ಕಚೇರಿಯಲ್ಲಿ ಮಾಹಿತಿ ಹಕ್ಕು ನಾಮಫಲಕ್ಕೆ ಇಲ್ಲ ಎಂದರೆ ಆಶ್ಚರ್ಯ ಪಡುವಂಥದ್ದು ಏನೂ ಇಲ್ಲ .

ತಾಲ್ಲೂಕಿನ ಸರ್ಕಾರಿ ಕಚೇರಿ ಮುಂಭಾಗದಲ್ಲಿ ಮಾಹಿತಿ ಹಕ್ಕು ನಾಮಫಲಕ ಹಾಕದೇ ಇರುವುದನ್ನು ನೋಡಿದರೆ ನಾಗರಿಕರು ತಮ್ಮ ಭ್ರಷ್ಟಾಚಾರವನ್ನು ಈ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಎಲ್ಲಿ ಬಣ್ಣ ಬಯಲು ಮಾಡುತ್ತಾರೆ ಎಂಬ ಭಯ ಇರಬಹುದೇ ಎಂಬ ಅನುಮಾನ ಕಾಡುತ್ತದೆ .

ತಾಲ್ಲೂಕಿನ ಎಷ್ಟೋ ಜನರಿಗೆ ಮಾಹಿತಿ ಹಕ್ಕು ಕಾಯ್ದೆ ಉಪಯೋಗದ ಬಗ್ಗೆ ಮಾಹಿತಿಯೇ ಇಲ್ಲ .ಇನ್ನು ಈ ಸರ್ಕಾರಿ ಕಚೇರಿಯ ಮುಂಭಾಗದಲ್ಲಿ ನಾಮಫಲಕ ಹಾಕದೇ ಇರುವುದರಿಂದ ಸಾರ್ವಜನಿಕರಿಗೆ ಇದರ ಉಪಯೋಗದ ಮಹತ್ವವಾದರೂ ತಿಳಿಯುವುದಾದರೂ ಹೇಗೆ .?

ಸರ್ಕಾರದ ಆದೇಶ ಕಾನೂನುಗಳು ಕೇವಲ ಜನಸಾಮಾನ್ಯರಿಗೆ ಮಾತ್ರ ಸೀಮಿತವಾಗಿದೆ. ಸರ್ಕಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ದಪ್ಪ ಚರ್ಮದ, ಒರಟು ಬುದ್ಧಿಯ ಅಧಿಕಾರಿಗಳಿಗೆ ಈ ಕಾನೂನು ಆದೇಶಗಳು ಅನ್ವಯಿಸುವುದಿಲ್ಲವೇ.?

ಈಗಾಗಲೇ ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ .ಅನ್ನಭಾಗ್ಯ ಅಕ್ಕಿಯಲ್ಲಿ ಹಗಲು ದರೋಡೆ ನಡೆಯುತ್ತಿದೆ.ಇಂದಿರಾ ಕ್ಯಾಂಟೀನ್ ಊಟದಲ್ಲಿ ದೊಡ್ಡ ಹಗರಣದ ಜಾಲವೇ ಅಡಗಿದೆ ಕಟ್ಟಡ ಕಾಮಗಾರಿಯಿಂದ ಹಿಡಿದು ಬಡವರಿಗೆ ನೀಡುವ ಊಟದವರೆಗೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ .ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದೊಡ್ಡ ಮಟ್ಟದ ಯಂತ್ರಗಳ ಬಳಕೆ ನಡೆಯುತ್ತಿದೆ .ನಕಲಿ ಜಾಬ್ ಕಾರ್ಡ್ ಗಳ ಹಾವಳಿ ಹೆಚ್ಚಾಗಿದೆ. ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗೆ ಸಂಬಂಧಿಸಿದಂತೆ ಗುತ್ತಿಗೆಯಲ್ಲಿ, ಕಾಮಗಾರಿಯಲ್ಲಿ ,ಕಳಪೆ ಕಂಡು ಬರುತ್ತಿದೆ ಅಧಿಕಾರಿಗಳು ಹಗಲು ದರೋಡೆಗೆ ಇಳಿದಿದ್ದಾರೆ. ಇನ್ನೂ ಅನೇಕ ಹಗರಣಗಳನ್ನು ಬಯಲಿಗೆ ಎಳೆಯಲು ಮಾಹಿತಿ ಹಕ್ಕು ಕಾಯ್ದೆಯ ಉಪಯೋಗದ ಮಹತ್ವವನ್ನು ತಾಲ್ಲೂಕಿನ ಜನತೆಗೆ ತಿಳಿಯಬೇಕಾಗಿದೆ .

ಇನ್ನು ಮುಂದಾದರೂ ಸಂಬಂಧಿಸಿದ ಅಧಿಕಾರಿಗಳು ಕಾನೂನನ್ನು ತಿರಿಸುವ ಕುತಂತ್ರಕ್ಕೆ ಕೈಹಾಕಿದೆ ತಮ್ಮ ತಮ್ಮ ಕಚೇರಿಯ ಮುಂಭಾಗದಲ್ಲಿ ಮಾಹಿತಿ ಹಕ್ಕು ಕಾಯಿದೆಯ ನಾಮಫಲಕವನ್ನು ಹಾಕುವಂತೆ ನಮ್ಮ ಪತ್ರಿಕೆಯು ಒತ್ತಾಯಿಸುತ್ತದೆ. ಇಲ್ಲವಾದರೆ ಮುಂದಿನ ದಿನದಲ್ಲಿ ಇದರ ಬಗ್ಗೆ ನಮ್ಮ ಪತ್ರಿಕೆಯು ಬರವಣಿಗೆ ಎಂಬ ಅಸ್ತ್ರದ ಮೂಲಕ ಜಿಲ್ಲಾದ್ಯಂತ ಬೃಹತ್ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತೇವೆ .

ಮಾನ್ಯ ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿಯವರು ಮಾಹಿತಿ ಹಕ್ಕು ಬಳಕೆಯ ನಾಮಫಲಕ ಅಳವಡಿಸದ ಹರಿಹರ ತಾಲ್ಲೂಕಿನ ಸರ್ಕಾರಿ ಕಚೇರಿ ಅಧಿಕಾರಿಗಳಿಗೆ ಕೂಡಲೇ ನಾಮಫಲಕ ಅಳವಡಿಸುವಂತೆ ಖಡಕ್ ಸೂಚನೆ ನೀಡಿ ಆದೇಶಿಸಿ ವಂತಾಗಲಿ ಎಂಬುದು ನಮ್ಮ ಪತ್ರಿಕೆಯ ಕಳಕಳಿಯಾಗಿದೆ .

Be the first to comment

Leave a Reply

Your email address will not be published.


*