“ಇ-ಆಡಳಿತ, ಡಿಜಿಟಲ್ ಲೈಬ್ರರಿ ಮತ್ತು ಇ-ಲೈಬ್ರರಿ” ಕುರಿತು “ಗೂಗಲ್ ಮೀಟ್” ಅಪ್ಲಿಕೇಷನ್ ಮುಖಾಂತರ ತರಬೇತಿ ಕಾರ್ಯಕ್ರಮ” .

ವರದಿ:- ಶರಣಪ್ಪ ಹೆಳವರ ಬಾಗಲಕೋಟ

ಜೀಲ್ಲಾ ಸುದ್ದಿಗಳು

ಬಾಗಲಕೋಟೆ: ಇ-ಲೈಬ್ರರಿ ಬಳಕೆ ಕುರಿತು ಆನ್-ಲೈನ್ ಮುಖಾಂತರ ತರಬೇತಿ ಕಾರ್ಯಕ್ರಮ

ಜಿಲ್ಲಾ ತರಬೇತಿ ಸಂಸ್ಥೆ, ಮೈಸೂರು ಮತ್ತು ಗ್ರಂಥಾಲಯ ಇಲಾಖೆ, ಮೈಸೂರು ಇವರ ಸಂಯುಕ್ತ ಸಹಯೋಗದಲ್ಲಿ, ನಾಳೆ ದಿನಾಂಕ: 26ನೇ ಮಂಗಳವಾರ ಮಧ್ಯಾಹ್ನ 3.30 ರಿಂದ 5.00 ಗಂಟೆಯವರೆಗೆ “ಇ-ಆಡಳಿತ, ಡಿಜಿಟಲ್ ಲೈಬ್ರರಿ ಮತ್ತು ಇ-ಲೈಬ್ರರಿ” ಕುರಿತು “ಗೂಗಲ್ ಮೀಟ್” ಅಪ್ಲಿಕೇಷನ್ ಮುಖಾಂತರ ತರಬೇತಿ ಕಾರ್ಯಕ್ರಮ” ವನ್ನು ಆಯೋಜಿಸಲಾಗಿದೆ.

ಈ ತರಬೇತಿ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮತ್ತು ಆಸಕ್ತಿಯುಳ್ಳ ಸಾರ್ವಜನಿಕರೂ ಸಹ ಭಾಗವಹಿಸಬಹುದಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು “ಗೂಗಲ್ ಮೀಟ್” ಅಪ್ಲಿಕೇಷನ್ ಮೀಟಿಂಗ್ ಲಿಂಕ್ ಅನ್ನು ಡೌನ್ಲೋಡ್ ಮಾಡಿಕೊಂಡು, ಇದರ ಪ್ರವೇಶಕ್ಕಾಗಿ, ಲಿಂಕ್ ಪಡೆಯಲು, ಮಂಗಳವಾರ ಬೆಳಿಗ್ಗೆ 11.00 ಗಂಟೆಗೆ ದೂರವಾಣಿ ಸಂಖ್ಯೆ:9448307076ಗೆ ಕರೆ ಮಾಡಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಶ್ರಿ ಬಿ.ಮಂಜುನಾಥ್, ಉಪ ನಿರ್ದೇಶಕರು, ಜಿಲ್ಲಾ ಗ್ರಂಥಾಲಯ ಇಲಾಖೆ, ಮೈಸೂರು ಇವರ ದೂರವಾಣಿ ಸಂಖ್ಯೆ: 918277058489 ಅಥವಾ ಶ್ರೀ ಕೆ.ವಿ.ಶಿವರಾಮಯ್ಯ, ಪ್ರಾಚಾರ್ಯರು, ಜಿಲ್ಲಾ ತರಬೇತಿ ಸಂಸ್ಥೆ, ಮೈಸೂರು ಇವರ ದೂರವಾಣಿ ಸಂಖ್ಯೆ:9448307076ಕ್ಕೆ ಕರೆಮಾಡಬಹುದಾಗಿದೆ.ಎಂದು ಮುಖ್ಯ ಗ್ರಂಥಾಲಯಾಧಿಕಾರಿಗಳು ಮಲ್ಲಿಕಾರ್ಜುನ ರೆಬಿನಾಳ ಬಾಗಲಕೋಟೆ ಜಿಲ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*