ಬಿಗ್ ಇಂಪ್ಯಾಕ್ಟ್
ಲಾಕ್ ಡೌನ್ ನೆಪ ಹೇಳಿ ನುಣುಚಿಕೊಳ್ಳುತ್ತಿರುವ ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮ ಪಂಚಾಯಿತಿ ಅಧಿಕಾರಿಗಳು
- ಸಾಂಕ್ರಾಮಿಕ ರೋಗಗಳಿಗೆ ಭರ್ಜರಿ ಸ್ವಾಗತ ನೀಡುತ್ತಿರುವ ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮ ಪಂಚಾಯಿತಿ
ಗ್ರಾಮದ ಜನರ ದಿನನಿತ್ಯದ ಪರದಾಟ ಈಲ್ಲಿನ ಸಮಸ್ಯೆಗಳಿಗೆ ಕ್ಯಾರೇ ಎನ್ನುವವರೇ ಗತಿ ಇಲ್ಲಾ
ಎನ್ನುವ ವರದಿಯನ್ನು ಪ್ರಕಟಿಸಲಾಗಿತ್ತು.
ಅಂಬಿಗ ನ್ಯೂಸ್ ಯಾದಗಿರಿ
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮ ಪಂಚಾಯತಿಯಲ್ಲಿ ಬರುವ ವಾರ್ಡ್ ನಂ 3 ರ ಅಕ್ಕಮಹಾದೇವಿ ನಗರದ ರಸ್ತೆಯ ಮೇಲೆ ನಿಂತಿರುವ ಚರಂಡಿ ನೀರಿನ ಮಧ್ಯೆ ಜನರು, ಮಕ್ಕಳು ಪ್ರತಿನಿತ್ಯ ರಸ್ತೆ ಮೇಲೆ ಸಂಚರಿಸಲು ಪರದಾಡುತ್ತಿದ್ದರು ಇದು ನಿಜವಾಗಿಯೂ ಸಾಂಕ್ರಾಮಿಕ ರೋಗಗಳಿಗೆ ಎಡೆಮಾಡಿ ಕೊಟ್ಟಂತಿತ್ತು.
ಇದನ್ನರಿತ ಗ್ರಾಮದ ಯುವಕರು ಹಿರಿಯರು ಸೇರಿ ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವದೇ ಪ್ರಯೋಜನವಾಗಿಲ್ಲ ಅಧಿಕಾರಿಗಳು ಸುಖಾ ಸುಮ್ಮನೆ ಕುಂಟು ನೆಪ ಹೇಳುತ್ತಿದ್ದರು ಹೊರತು ಯಾವುದೇ ಪ್ರಯೋಜನವಾಗಿರಲಿಲ್ಲ
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಕ್ಕೆ ಬಂದು ಈ ಕಡೆ ಗಮನಹರಿಸಿ ಇಣಿಕಿಯೂ ಸಹ ನೋಡಿಲ್ಲ ಎನ್ನುವುದು ಜನರ ಆರೋಪವಾಗಿತ್ತು
ಇದರಿಂದಾಗಿ ಬೇಸತ್ತ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದರು.
ಕರೋನಾ ಮಹಾಮಾರಿಯಿಂದಾಗಿ ಯಾದಗಿರಿ ಜಿಲ್ಲೆ
ಸಂಪೂರ್ಣ ಲಾಕ್ ಡೌನ್ ಆಗಿದೆ, ನಾವು ಏನು ಮಾಡೋಣ ಎಂದು ಅಧಿಕಾರಿಗಳು ಬೇಜವಾಬ್ದಾರಿತನದ ಕುಂಟು ನೆಪ ಹೇಳುತ್ತಿದ್ದಾರೆ ಎಂದು ನಮ್ಮ ಅಂಬಿಗ ನ್ಯೂಸ್ ಚಾನಲ್ ಗೆ ತಮ್ಮ ಗ್ರಾಮದ ಸಮಸ್ಯೆಯನ್ನು ಹೇಳಿಕೊಂಡಿದ್ದರು.
ಇದನ್ನರಿತ ನಾವು ಸುದ್ದಿಯನ್ನು ಬಿತ್ತರಿಸುವ ಮೂಲಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದಾಗ 4-5 ದಿನಗಳಲ್ಲಿ ಶಿರವಾಳ ಗ್ರಾಮದ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಮಾತು ಕೊಟ್ಟಿದ್ದರು.
ಈ ಸಮಸ್ಯೆ ಉಲ್ಬಣಗೊಂಡಿರುವುದು ಹೇಳಿ ಕೇಳಿ ಶಹಾಪೂರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗುರು ಪಾಟೀಲ ಶಿರವಾಳರವರ ಗ್ರಾಮವದು,
ಆದ್ರೆ ಇವತ್ತು ಗ್ರಾಮ ಪಂಚಾಯಿತಿ ಅಧಿಕಾರಿ ಮಡಿವಾಳಪ್ಪ ಮಡಿವಾಳರ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಮೂಲಕ ಹಲವು ವರ್ಷಗಳಿಂದ ಸಮಸ್ಯೆಗ ಆಗರವಾಗಿ ಬಗೆಹರಿಯದೇ ನೆನೆಗುದಿಗೆ ಬಿದ್ದಿರುವ ಶಿರವಾಳ ಗ್ರಾಮದ ವಾರ್ಡ್ ನಂ 03 ರ ಅಕ್ಕಮಹಾದೇವಿ ಕಲೋನಿಯ ಜನರ ಸಮಸ್ಯೆಗೆ ಇಂದು ಬೆಳಿಗ್ಗೆಯಿಂದಲೇ ಜೆಸಿಬಿ ಯಂತ್ರದ ಮೂಲಕ ಗ್ರಾಮದ ಜನತೆಯ ಸಹಾಯದಿಂದ ಕೆಲಸವನ್ನು ಪ್ರಾರಂಭಿಸಿದ್ದಾರೆ.
ವಾಸ್ತವ ಅದೇನೆ ಇರಲಿ ಇಂಥ ದಕ್ಷ ಅಧಿಕಾರಿಗಳು ಎಚ್ಚೆತ್ತುಕೊಂಡು ತಮ್ಮ ಕಾರ್ಯ ವೈಖರಿಯನ್ನು ಸಮಾಜಕ್ಕೆ ತೋರಿಸುವ ಮೂಲಕ ಮಾದರಿಯಾಗಿ ಕೆಲಸ ಮಾಡಿದರೆ ಯಾವುದೇ ಸಮಸ್ಯೆಗಳು ತಲೆದೋರುವದಿಲ್ಲ.
ಗ್ರಾಮ ಪಂಚಾಯಿತಿ ಅಧಿಕಾರಿಗಳ ಕೆಲಸ ಹೀಗೆ ಮುಂದುವರೆಯಲಿ ಎನ್ನುವುದೇ ನಮ್ಮ ಆಶಯ.
ತುಂಬಾ ವರ್ಷಗಳಿಂದ ನಾನಾ ರೀತಿಯ ಕಾರಣಗಳಿಂದ ನೆನೆಗುದಿಗೆ ಬಿದ್ದಿರುವ ವಾರ್ಡ್ ನಂ 04 ರ ಅಕ್ಕಮಹಾದೇವಿ ಕಾಲೋನಿಯ ಜನರ ಸಮಸ್ಯೆಯನ್ನು ಅಂಬಿಗ ನ್ಯೂಸ್ ವರದಿ ಮಾಡಿ ನಮ್ಮನ್ನು ಎಚ್ಚರಿಸಿತ್ತು ಇದನ್ನರಿತ ನಾವು ಅಧ್ಯಕ್ಷರು, ಸದಸ್ಯರು, ಗ್ರಾಮದ ಹಿರಿಯರ ಜೊತೆ ಚರ್ಚಿಸಿ ಇಂದು ಕೆಲಸ ಪ್ರಾರಂಭಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ.
ಅಂಬಿಗ ನ್ಯೂಸ್ ವಾಹಿನಿಗೆ ತುಂಬು ಹೃದಯದ ಧನ್ಯವಾದಗಳು.
➡️ಮಡಿವಾಳಪ್ಪ ಮಡಿವಾಳರ. ಶಿರವಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
Be the first to comment