ಜೀಲ್ಲಾ ಸುದ್ದಿಗಳು
ಹರಿಹರ:-ಹರಿಹರ ತಾಲ್ಲೂಕು ವಾಸನ ಗ್ರಾಮದಲ್ಲಿರುವ ಮೊರಾಜಿ ವಸತಿ ಶಾಲೆಯಲ್ಲಿ ಕರೋನಾ ಶಂಕಿತ ಹದಿಮೂರು ಜನರನ್ನು ಕ್ವಾರಂಟೈನ್ ಮಾಡುವುದನ್ನು ವಿರೋಧಿಸಿ ಗ್ರಾಮದ ಗ್ರಾಮಸ್ಥರು ಇಂದು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ನಿಪ್ಪಾಣಿ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹರಿಹರ ತಾಲ್ಲೂಕಿನ ವಿವಿಧ ಗ್ರಾಮದ ಕಾರ್ಮಿಕರನ್ನು ಮುರಾರ್ಜಿ ವಸತಿ ಶಾಲೆಯಲ್ಲಿ ಹೋಂ ಕ್ವಾರಂಟೈನ್ ಮಾಡುವ ವಿಷಯ ತಿಳಿದ ಗ್ರಾಮದ ಗ್ರಾಮಸ್ಥರು ಒಟ್ಟಾಗಿ ಗುಂಪುಗೂಡಿ ಪ್ರತಿಭಟನೆ ನಡೆಸಿದರು.
ಕೆಲಸದ ಸ್ಥಳದಿಂದಲೇ ಬಿಡುವಾಗ ಎಲ್ಲಾ ಹದಿಮೂರು ಜನ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ನಡೆಸಿ ವಾಹನದಲ್ಲಿ ಕಳುಹಿಸಿಕೊಡಲಾಗಿತ್ತು.
ಹದಿಮೂರು ಜನ ಕಾರ್ಮಿಕರನ್ನು ಕರೆದುಕೊಂಡು ಬಂದ ವಾಹನವನ್ನು ಶಾಲೆಯ ಸಮೀಪದಲ್ಲಿ ತಡೆದು ನಿಲ್ಲಿಸಿ, ರಸ್ತೆ ತಡೆ ನಡೆಸಿ.’ಬೇಡ ,ಬೇಡ ನಮ್ಮ ಊರಿನಲ್ಲಿ ಕ್ವಾರಂಟೈನ್ ಕೇಂದ್ರ ಬೇಡ’ ಎಂದು ಗ್ರಾಮದ ಎಲ್ಲಾ ಗ್ರಾಮಸ್ಥರು ಒಟ್ಟಾಗಿ ಹೋಗಲು ಪ್ರಾರಂಭಿಸಿದರು.
ವಾಸನ ಗ್ರಾಮದ ಗ್ರಾಮಸ್ಥರು ಕ್ವಾರಂಟೈನ್ ಕೇಂದ್ರ ಬೇಡ ಎಂದು ಪ್ರತಿಭಟಿಸಲು ಕಾರಣ.ನಮ್ಮ ಊರಿನ ಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರ ಮಾಡುವುದರಿಂದ ಕರೋನ ವೈರಸ್ ಊರಿನಲ್ಲಿ ಹರಡಬಹುದು ಎಂಬ ಅನುಮಾನದಿಂದ ನಮ್ಮ ಊರಿನಲ್ಲಿ ಕೇಂದ್ರ ತೆರೆಯ ಬೇಡಿ ಎಂದು ಒಟ್ಟಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತರು,ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸರೊಡನೆ ಕೆಲ ಹೊತ್ತು ವಾಗ್ವಾದ ನಡೆಯಿತು.
ಅಧಿಕಾರಿಗಳು ಪ್ರತಿಭಟನಾ ನಿರತರ ಮನವೊಲಿಸುವ ಎಲ್ಲ ಪ್ರಯತ್ನಗಳು ವಿಫಲವಾಯಿತು.ಕೊನೆಗೆ ಪೊಲೀಸರು ಪ್ರತಿಭಟನಾ ನಿರತ ಗ್ರಾಮಸ್ಥರನ್ನು ಚದುರಿಸಿ ಪೊಲೀಸ್ ರಕ್ಷಣೆಯಲ್ಲಿ ಸಂಜೆ ಹೊತ್ತಿಗೆ ಎಲ್ಲ ಹದಿಮೂರು ಜನ ಕಾರ್ಮಿಕರನ್ನು ಶಾಲೆಯ ಒಳಗೆ ಕರೆದೊಯ್ಯಲಾಯಿತು.
ಕರೋನಾ ಹರಡಬಹುದು ಎಂಬ ಭೀತಿಯಿಂದ ಯಾರೊಬ್ಬರೂ ಹತ್ತಿರ ಸುಳಿಯಲಿಲ್ಲ ಪೊಲೀಸ್ ಭದ್ರತೆಯಲ್ಲಿ ಶಾಲೆಗೆ ಬೀಗ ಹಾಕಿ ,ಹದಿಮೂರು ಜನ ಕಾರ್ಮಿಕರನ್ನು ರಕ್ಷಣೆ ಮಾಡಲಾಯಿತು. ಇಷ್ಟಾದರೂ ಪ್ರತಿಭಟನಾನಿರತರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯುತ್ತಲೇ ಇತ್ತು.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮಂಜುನಾಥ್ ಗಂಗಲ್, ಸಿಪಿಐ ಶಿವಪ್ರಸಾದ್, ಪಿಎಸ್ಐ ಕಿರಣ್ ಕುಮಾರ್ ,ತಾಲ್ಲೂಕು ದಂಡಾಧಿಕಾರಿ ರಾಮಚಂದ್ರಪ್ಪ ಕೆಬಿ, ತಾಲ್ಲೂಕು ಆರೋಗ್ಯಾಧಿಕಾರಿ ಚಂದ್ರಮೋಹನ್ ,ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಪತಿ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೀರಪ್ಪ ಹಾಗೂ ಸಿಬ್ಬಂದಿ ವರ್ಗದವರು ಘಟನಾ ಸ್ಥಳದಲ್ಲಿ ಉಪಸ್ಥಿತರಿದ್ದರು.
Be the first to comment