ಆರ್ಥಿಕ ಸಂಕಷ್ಟದಿಂದ ಪಾರಾಗಲು ಪರಿಹಾರ ಕೋರಿ ತಹಶಿಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ದರ್ಜಿಗಳಿಂದ ಮನವಿ.

 

ಬಾಗಲಕೋಟೆ: ಕೊರೊನ ಮಹಾಮಾರಿ ರೋಗದ ಲಾಕ್ ಡೌನ್ ಆದೇಶದಿಂದ ಟೈಲರ್ ಗಳು ಸಂಕಷ್ಟಕ್ಕೆ ಈಡಾಗಿದ್ದು, ನೊಂದ ಜೀವಗಳಿಗೆ ಸರ್ಕಾದ ವಿಶೇಷ ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಗುಡೂರು ಗ್ರಾಮದ ದರ್ಜಿ ಅಂಗಡಿ ಮಾಲೀಕರ ಸಂಘದವರು ಇಲಕಲ್ ತಾಲೂಕ ಸಭಾಭವನದಲ್ಲಿ ಇತ್ತೀಚಿಗೆ ತಹಶಿಲ್ದಾರ್ ವೇದವ್ಯಾಸ ಮುತಾಲಿಕ್ ಅವರ ಮೂಲಕ ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು.

ಕೊರೊನಾ ತಡೆಗೆ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಬಟ್ಟೆ ಅಂಗಡಿಗಳು ಬಂದ್ ಆಗಿವೆ. ಬಟ್ಟೆ ಹೊಲಿಸಿಕೊಳ್ಳಲು ಯಾರೂ ಬರುತ್ತಿಲ್ಲ. ಈ ಹಿಂದೆ ಕೊಟ್ಟಿರುವ ಬಟ್ಟೆಗಳನ್ನು ಹೊಲಿದು ಕೊಡಬೇಕೆಂದರೂ ನಮಗೆ ಅಂಗಡಿ ತೆರೆಯಲು ಅನುಮತಿ ಸಿಗುತ್ತಿಲ್ಲ ಎಂದು ಟೇಲರ್‌ಗಳು ಅಳಲು ತೋಡಿ ಕೊಂಡಿದ್ದಾರೆ.

ಪ್ರತಿ ವರ್ಷ ರಂಜಾನ್‌ ಬಂದರೆ ಟೇಲರ್‌ಗಳಿಗೆ ಕೈತುಂಬಾ ಕೆಲಸ ಇರುತ್ತಿತ್ತು. ಪ್ರಸಕ್ತ ವರ್ಷ ಕೊರೊನಾ ಟೇಲರ್‌ಗಳ ಬದುಕಿನ ಮೇಲೆ ಗದಾಪ್ರಹಾರ ನಡೆಸಿದೆ. ಸರ್ಕಾರ ಕ್ಷೌರಿಕರಿಗೆ,ಅಗಸರಿಗೆ, ಅಟೊ, ಟ್ಯಾಕ್ಸಿ ಚಾಲಕರಿಗೆ ನೆರವು ಘೋಷಿಸಿದ ರೀತಿಯಲ್ಲಿ ಟೇಲರ್ ವೃತ್ತಿಯವರಿಗೂ 5000 ರೂಪಾಯಿಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಟೇಲರ್‌ಗಳು ಲಾಕ್‌ಡೌನ್ ಯಾವಾಗ ಮುಗಿಯುತ್ತೊ ಎಂದು ಕಾತುರದಿಂದ ಕಾಯುತ್ತಿದ್ದಾರೆ.ಸರ್ಕಾರ ನಮ್ಮಂಥವರ ನೆರವಿಗೆ ಬರಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಗುಡೂರ ಟೈಲರ್ ಸಂಘದ ಅಧ್ಯಕ್ಷ ಸುಧೀರ್ ಕಾಜಗರ್, ಉಪಾಧ್ಯಕ್ಷ ಸುಲೇಮಾನ್ ನದಾಫ ,ಶಂಭು ಚಿನಿವಾಲರ್ ಅಲ್ತಾಫ್ ಸಾಲಿಮನಿ ಇತರರು ಇದ್ದರು.

Be the first to comment

Leave a Reply

Your email address will not be published.


*