ಆತ್ಮ ನಿರ್ಭರ ಭಾರತ” ಯೋಜನೆಯ ಕಾಮಗಾರಿಗೆ ಚಾಲನೆ.

ಬಾಗಲಕೋಟೆ: ನಮ್ಮ ಉನ್ನತಿ,ನಮ್ಮ ಅಭಿವೃದ್ಧಿ, ನಮ್ಮ ವಿಕಾಸ ಮತ್ತು ನಮ್ಮ ಏಳಿಗೆಯಿಂದ ಇನ್ನೊಬ್ಬರಿಗೆ ತೊಂದರೆಯಾಗದ ರೀತಿಯಲ್ಲಿ ನಮ್ಮತನವನ್ನು ಉಳಿಸಿಕೊಂಡು ಹೋಗುವಯೋಜನೆಯಲ್ಲೊಂದಾದ ಆತ್ಮ ನಿರ್ಭರ ಭಾರತ ಯೋಜನೆ.

ಪ್ರಧಾನಮಂತ್ರಿಗಳು ಘೋಷಿಸಿರುವ ಆತ್ಮ ನಿರ್ಭರ ಭಾರತ ಯೋಜನೆಯ ಭಾಗವಾಗಿ ಬಾಗಲಕೋಟೆ ಜಿಲ್ಲೆಯ ಕಿರಸೂರು ಗ್ರಾಮದಲ್ಲಿ ಎಲ್ಲರಿಗೂ ಉದ್ಯೊಗ ಒದಗಿಸುವ ೯ ಕೋಟಿ ರೂಪಾಯಿಗಳ ಕಾಮಗಾರಿಗೆ ಬಾಗಲಕೋಟೆಯ ಜನಪ್ರಿಯ ಶಾಸಕರಾದ ಡಾ ವೀರಣ್ಣ ಚರಂತಿಮಠರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಒ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದರು.
ಕಾರ್ಮಿಕರಿಗೆ ಮಾಸ್ಕ ವಿತರಿಸಿ ಸ್ಕ್ರೀನಿಂಗ ಮಾಡಿದರು.

ಸ್ವಚ್ಚ ಮಾದರಿ ಗ್ರಾಮಕ್ಕೆ ಸೂಚನೆ:
ಮಹಾ ಮಾರಿ ಕರೊನ ವೈರಸ್ ಎಲ್ಲಡೆ ತನ್ನ ರೌಧ್ರ ನರ್ತಣ ತೋರುತ್ತಿದೆ ಇಂತಹ ಸಂದರ್ಭದಲ್ಲಿ ಕಿರಸೂರ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡದ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಂಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಮತ್ತು ಜಿಲ್ಲಾ ಪಂಚಾಯತ್ ಸಿಇಒ ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ಕೆಲಸ ಮಾಡಿ ಸ್ವಚ್ಛ ಮಾದರಿಯ ಗ್ರಾಮ ಮಾಡಲು ಸೂಚನೆ ನೀಡಿದರು.

Be the first to comment

Leave a Reply

Your email address will not be published.


*