ವರದಿ.ಪ್ರಕಾಶ ಮಂದಾರ.
ಕೊರಾನ ವೈರಸ್ ಜನರ ಜೀವಕ್ಕೆ ಗಂಡಾಂತರ ಉoಟು ಮಾಡಿದ್ದರೂ ಗ್ರಾಮ ಮಟ್ಟದಲ್ಲಿ ಮಾತ್ರ ಗ್ರಾಮ ಪಂಚಾಯಿತಿಗಳಿಗೆ ನಾಮ ನಿರ್ದೇಶಕ ಸದಸ್ಯರ ನೇಮಕ ಮಾಡುವ ವಿಚಾರ ಗರಿಗೆದರಿದೆ.
ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷ ಇಲ್ಲ ಅನ್ನುವುದು ಕೇವಲ ನಾಮಕಾವಸ್ಥೆ ಆದರೆ ಇಲ್ಲಿ ಸ್ಪರ್ದೆ ಮಾಡುವವರು ವಿವಿಧ ಪಕ್ಷಕ್ಕೆ ಸೇರಿದ ತಳಮಟ್ಟದ ಕಾರ್ಯಕರ್ತರೆ .
ಆಯಾ ಪಕ್ಷದ ಬಹುಮತದ ಆಧಾರದ ಮೇಲೆ ಅಧ್ಯಕ್ಷರು ಉಪಾಧ್ಯಕ್ಷರು ಆಯ್ಕೆ ಆಗುತ್ತಾರೆ.
ಪರಿಸ್ಥಿತಿ ಸರಿ ಇದ್ದು ಕೊರಾನಾ ವೈರಸ್ ಬಾದೆ ಇರದಿದ್ದರೆ ಇಷ್ಟರಲ್ಲಿ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿತ್ತು ,ಆದರೆ ಈ ಎಲ್ಲಾ ಗಂಡಾಂತರದಿಂದ ಗ್ರಾಮ ಪಂಚಾಯತ್ ಚುನಾವಣೆ ಅನಿವಾರ್ಯವಾಗಿ ಮುಂದೂಡಲೇ ಬೇಕಾಗಿದೆ.
ಮೇ ತಿಂಗಳ (2020) ಕೊನೆಗೆ ಈ ಹಿಂದಿನ 5 ವರ್ಷ ಕಾಲಾವಧಿ ಪೂರೈಸಲಿರುವ ಗ್ರಾಮ ಪಂಚಾಯತ ಆಡಳಿತ ಮಂಡಳಿಗೆ ಹೊಸ ಸದಸ್ಯರ ಚುನಾವಣೆ ನಡೆಸಲಾಗದ್ದರಿಂದ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಬೇಕಾಗಿದೆ.
ಆದರೆ ರಾಜ್ಯ ಸರ್ಕಾರ ಮುಂದಿನ ಚುನಾವಣೆ ತನಕ ಗ್ರಾಮ ಪಂಚಾಯತ್ ಗಳಿಗೆ ಆಡಳಿತ ಮಂಡಳಿ ರಚಿಸಲು ತೀಮಾ೯ನಿಸಿದೆ.
ಹಿಂದಿನ ಮೀಸಲಾತಿ ಸಂಖ್ಯೆಗೆ ಅನುಗುಣವಾಗಿ ತಮ್ಮ ಪಕ್ಷದವರನ್ನೆ ನಾಮ ನಿದೇ೯ಶನ ಮಾಡಲಿದೆ.
ಆಗ ಇಡೀ ರಾಜ್ಯದಲ್ಲಿನ ಗ್ರಾಮ ಪಂಚಾಯತಗಳು ಬಿಜೆಪಿ ಪಕ್ಷದ ಆಡಳಿತ ಮಂಡಳಿಗಳಾಗುತ್ತದೆ ಎಂದು ವಿರೋದ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿದೆ.
ಗ್ರಾಮ ಪಂಚಾಯತ್ ಮಟ್ಟದಲ್ಲಿನ ಕಾಯ೯ಕತ೯ರಿಗೆ ಆಡಳಿತದಲ್ಲಿ ಪಧಾಧಿಕಾರ ನೀಡಿ ಅವರನ್ನ ಮುಂದಿನ ಚುನಾವಣೆಗೆ ತಯಾರಿ ಮಾಡಿ ಪಕ್ಷವನ್ನ ತಳಮಟ್ಟದಲ್ಲಿ ಮಜಬೂತು ಗೊಳಿಸುವ ಅವಕಾಶವನ್ನ ರಾಜ್ಯ ಬಿಜೆಪಿ ಈ ಸಂದಭ೯ದಲ್ಲಿ ಕಳೆದುಕೊಳ್ಳಲಾರದು.
ಇಲ್ಲಿ ಕಾನೂನು ಬಳಸಿಕೊಂಡು ನೈತಿಕತೆಗೆ ಪರದೆ ಹೊದಿಸಿ ಪಂಚಾಯತ್ ರಾಜ್ ಕಾಯ್ದೆಗೆ ಅಪಮಾನ ಮಾಡಿದಂತೆ ಆಗುವುದಿಲ್ಲವಾ? ಎಂಬ ಪ್ರಶ್ನೆಗೆ ಸದ್ಯದ ಪಕ್ಷಾ೦ತರ /ಆಪರೇಷನ್ ಇತ್ಯಾದಿಗಳಿ೦ದ ರಾಜ್ಯ ಸಕಾ೯ರವೇ ರಾತ್ರೋರಾತ್ರಿ ಬದಲಾಗುವಾಗ ಇದೇನು ದೊಡ್ಡದು ಎಂಬ ಮರು ಪ್ರಶ್ನೆ ಇದೆ.
ಗ್ರಾಮ ಮಟ್ಟದಲ್ಲಿ ಜನರ ಮತದ ಹಂಗಿಲ್ಲದೆ ಮುಂದಿನ ಚುನಾವಣೆವರೆಗೆ (ಕನಿಷ್ಟ 6 ತಿಂಗಳು) ಹೊಸ ನಾಮಕರಣ ಸದಸ್ಯರ ಆಡಳಿತ ಬರಲಿದೆ.
ಕೊರಾನ ರಾಜ್ಯದಲ್ಲಿ ಅಟ್ಟಹಾಸದಲ್ಲಿ ಮೆರೆಯುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಎಲ್ಲೋ ಒಂದು ಕಡೆ ಅನುಕೂಲವಾದಂತಾಗಿದೆ
ಏನೇ ಆದರೂ ಇನ್ನು ಆರು ತಿಂಗಳು ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವುದು ಅನುಮಾನವಾಗಿದೆ .
Be the first to comment