ಭಾಗ್ಯವ ಕಸಿದುಕೊಂಡ ಕೊರೋನಾ-ಬಳೆಗಾರರ  ಬದುಕು ಚೂರು ಚೂರು.   

ಜೀಲ್ಲಾ ಸುದ್ದಿಗಳು

 ಭಾರತ ಸಂಪ್ರದಾಯಗಳ ಸಂಸ್ಕೃತಿಯ ಆಗರವಾಗಿದೆ,ಅಸಂಖ್ಯಾತ ಜಾತಿ ಮತಗಳ ತವರು.ಇವೆಲ್ಲವುಗಳಿಂದಲೇ ಜೀವನ ಹಸನಾಗಿಸಿಕೊಂಡಿರುವ ಅಸಂಖ್ಯಾತ ಉಪಜಾತಿಗಳು,ತಮ್ಮ ಕಸುಬುಗಳಿಂದಲೇ ಮಾಡುವ ಕಮ೯ಗಳಿಂದಲೇ ಗುರುತಿಸಿಕೊಂಡಿರುವ ಅಸಂಖ್ಯಾತ ಕಮಿ೯ಯರು.ಅಂತಹವರಲ್ಲಿ ಒಬ್ಬರು ಈ ಬಳೆಗಾರರು,ಬಳೆಗಾರರು ಭಾರತ ಸಂಸ್ಕೃತಿಯ ಭಂಟರು ಎಂದರೆ ತಪ್ಪಾಲಾರದು.ಕೊರೋನಾ ಲಾಕ್ ಡೌನ್ ಬಳೆಗಾರರ ಬದುಕಿನ ಭಾಗ್ಯವನ್ನೇ ಕಸಿದುಕೊಂಡಿದೆ.ಈ ಕುರಿತು ಬಳ್ಳಾರಿ ಜಿಲ್ಲೆ ಹಗರಿ ಬೊಮ್ಮನಹಳ್ಳಿ ತಾಲೂಕು, ಶ್ರೀ ಕ್ಷೇತ್ರ ಹೊಸಕೇರಿ ಗ್ರಾಮದ ಬಳೆಗಾರ ಭೀಮಮ್ಮ.ಕೊರೋನಾ ಬಂದು ಬಳೆ ಮಾರಲು ಹಳ್ಳಿಗಳಿಗೆ ತಿರುಗೋದು ನಿಂತಾತಿ,ಮಧುವೆ,ಜಾತ್ರಿ,ತೇರು,ಹಬ್ಬ,ಹರಿದಿನಗಳನ್ನು ಮಾಡಂಗಿಲ್ಲ.ನಾವು ಬಳೆಮಾರಾಕ ಎಲ್ಲಿಗೂ ಓಗಾಂಗಿಲ್ಲ ಬಸ್ಸು ನಿಲ್ಸ್ಯಾರ ಅಂಗಾಗಿ ಸುತ್ತ ಮುತ್ತಲ ಹಳ್ಳ್ಯಾರು ಬರುವಲ್ರು,ನಾವು ಬಳೆ ವತ್ತಗಂಡು ಓಗಾಂಗಿಲ್ಲ ಅಂಗಾಗಿ ಬಳೆಮಾರಾಟ ಆಗವಲ್ದು ಎಂದು ಲಾಕ್ ಡೌನ್ ಪರಿಣಾಮದ ಕುರಿತು ನೋವು ಅಂಚಿಕೊಂಡಿದ್ದಾರೆ ಬಳೆಗಾರ ಭೀಮಮ್ಮ.ಸೊಸೈಟ್ಯಾಗ ಅಕ್ಕಿಕೊಡುತ್ತಾರ ಆದ್ರೆ ಇನ್ ಉಳಿಕಿದ್ದು ಜೋಡಿಸಿಕೊಳ್ಳಾದ ಕಷ್ಟವಾಗ್ಯಾತಿ,ಅನಾರೋಗ್ಯ ಸೇರಿದಂತೆ ಹಲವು ಅನಿವಾಯ೯ ಕಚು೯ಗಳು,ದಿಢೀರ್ ಕಚು೯ಗಳಿಗೆ ಹಣವಿಲ್ಲದೇ ಸಾಲಾ ಸೂಲಾ ಮಾಡಬೇಕಾಗಿದೆ.ದುಡಿಮೆ ಇಲ್ಲದೇ ಬದುಕು ನುಚ್ಚು ನೂರಾಗಿದೆ ಬಳೆಗಾರರ ಬದುಕು ಅನ್ನುತ್ತಾರೆ ಭೀಮಮ್ಮ.ಮೂರು ತಿಂಗಳುಗಳಿಂದ ಜನರಿಗೆ ದುಡಿಮೆ ಇಲ್ಲದ ಕಾರಣ ಬಳೆ ಖರೀದಿ ಇಲ್ಲವಾಗಿದೆ ಹಾಗಾಗಿ ವ್ತಾಪಾರವಿಲ್ಲವಾಗಿದೆ ಎನ್ನುತ್ತಾರೆ ಬಳೆಗಾರರು.ಸಕಾ೯ರ ಗ್ರಾಮೀಣ ಭಾಗದ ಬಳೆಗಾರರನ್ನು ಪರಿಹಾರ ನಿಧಿ ಪಲಾನುಭವಿಗಳೆಂದು ಘೋಷಿಸಬೇಕು.

ಈ ಮೂಲಕ ಗ್ರಾಮೀಣ ಭಾಗದ ಬಳೆಗಾರರ ಬದುಕಲ್ಲಿ ಭಾಗ್ಯೋದಯ ಮೂಡಿಸಬೇಕು ಎಂದು ಸಕಾ೯ರಕ್ಕೆ ವಂದೇ ಮಾತರಂ ಜಾಗೃತಿ ವೆದಿಕೆ ಜಿಲ್ಲಾಧ್ಯಕ್ಷ ವಿ.ಜಿ.ವೃಷಭೇಂದ್ರ ಈ ಮೂಲಕ ಒತ್ತಾಯಿಸಿದ್ದರೆ.ಈ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆಯ ಗ್ರಾಮೀಣ ಭಾಗದ ಬಳೆಗಾರರ ಪಟ್ಟಿಯನ್ನು ತಯಾರಿಸಿ,ಅವರನ್ನು ಅಸಂಘಟಿತ ಕಾಮಿ೯ಕರ ಪಟ್ಟಿಯಲ್ಲಿ ಸೇಪ೯ಡೆಗೊಳಿಸಬೇಕು ಮತ್ತು ಆಥಿ೯ಕ ನೆರವು ನೀಡಬೇಕು ಎಂದು ವೃಷಭೇಂದ್ರ ಒತ್ತಾಯಿಸಿದ್ದಾರೆ.ಸ್ಥಳೀಯ ಆಡಲಿತಾಧಿಕಾರಿಗಳು,ತಾಲೂಕು,ಜಿಲ್ಲಾಧಿಕಾರಿಗಳು ಲಾಕ್ ಡೌನ್ ನಿಂದಾಗಿ ಕಂಗೆಟ್ಟಿರುವ ಗ್ರಾಮೀಣ ಭಾಗದ ಬಳೆಗಾರರ ಬದುಕನ್ನು,ಹಸನು ಮಾಡುವ ಸೂಕ್ತ ಕ್ರಮಗಳನ್ನು ಶೀಘ್ರವಾಗಿ ಜಾರಿತರಬೇಕೆಂದು ಈ ಮೂಲಕ ವಂದೇ ಮಾತರಂ ಜಾಗೃತಿ ವೇದಿಕೆ ಪದಾಧಿಕಾರಿಗಳು ಕೋರಿದ್ದಾರೆ.

Be the first to comment

Leave a Reply

Your email address will not be published.


*