ಜೀಲ್ಲಾ ಸುದ್ದಿಗಳು
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿರುವ 5 ಎಂ.ಎಸ್.ಪಿ.ಟಿ.ಸಿಗಳ ವತಿಯಿಂದ ಜಿಲ್ಲೆಯ ದೇವದಾಸಿ ಮಹಿಳೆಯರಿಗೆ ಗೋದಿ, ತೊಗರಿಬೇಳೆ, ಹುರಳಿಕಾಳು, ಸಕ್ಕರೆ, ಕಡಲೆಬೇಳೆ ಸೇರಿದ ಆಹಾರ ಕಿಟ್ಗಳನ್ನು ನೀಡುವ ಕಾರ್ಯಕ್ಕೆ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಚಲನೆ ನೀಡಿದರು.
ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಲ್ಲಿ ಸಾಂಕೇತಿಕವಾಗಿ ಆಹಾರ ಕಿಟ್ಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ಜಿಲ್ಲೆಯ ಎಲ್ಲ 5 ಎಂ.ಎಸ್.ಪಿ.ಟಿ.ಸಿಗಳ ಅಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
Be the first to comment