ಬಿ.ಜೆ. ಪಾರ್ವತಿ ಸೋನಾರೆಯವರ ಕಥಾ ಸಂಕಲ ಭವರಿ ಚಲನಚಿತ್ರ ನಿರ್ಮಾಣ – ಬಿ.ಜೆ. ವಿಷ್ಣುಕಾಂತ

ವರದಿ:- ಚಂದ್ರಕಾಂತ ಹಳ್ಳಿಖೇಡಕರ್ ಬೀದರ್.

ಜೀಲ್ಲಾ ಸುದ್ದಿಗಳು

ಬೀದರ್,  ಗುಲಬರ್ಗಾ ವಿಶ್ವವಿದ್ಯಾಲಯದಿಂದ ಚಿನ್ನದ ಪ್ರಶಸ್ತಿ ಪಡೆದಿರುವ ಬಿ.ಜೆ. ಪಾರ್ವತಿ ಸೋನಾರೆ ಅವರು ಬರೆದಿರುವ ಕಥಾ ಸಂಕಲ ಭವರಿ ಕಥೆಯನ್ನು ಮೂಲಾಧಾರವಾಗಿಟ್ಟುಕೊಂಡು ಚಿತ್ರಕಥೆ, ಸಂಭಾಷಣೆ ಬರೆದು ಸಿನೆಮಾ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಭವರಿ ಸಿನೆಮಾ ನಿರ್ಮಾಪಕ ಹಾಗೂ ನಿರ್ದೇಶಕರಾದ ಬಿ.ಜೆ. ವಿಷ್ಣುಕಾಂತ ಧನ್ನೂರ ಅವರು ಹೇಳಿದರು.

ಅವರು ಇಂದಿಲ್ಲಿ ವಿಜಯಕುಮಾರ ಸೋನಾರೆ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಬಿ.ಜೆ. ಪಾರ್ವತಿ ಸೋನಾರೆ ಅವರು ಬರೆದಿರುವ ಭವರಿ ಕಥಾ ಸಂಕಲದಲ್ಲಿ ಒಟ್ಟು ಐದು ಕಥೆಗಳಿವೆ. ಈ ಕಥೆಗಳಲ್ಲಿ ಭವರಿ ಕಥೆಯನ್ನು ಮೂಲಾಧಾರವಾಗಿಟ್ಟುಕೊಂಡು ಕಲ್ಯಾಣ ಕರ್ನಾಟಕ ಭಾಗದ ಬೀದರ ಮತ್ತು ಬಿಜಾಪೂರ ಭಾಷಾ ಶೈಲಿಯಲ್ಲಿ ಭವರಿ ಎಂಬ ಕಲಾತ್ಮಕ ಸಿನೇಮಾ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದೇನೆ ಎಂದರು.

ಭವರಿ ಸಿನೇಮಾದಲ್ಲಿ ಪ್ರೀತಿ, ಪ್ರೇಮ, ಹಾಸ್ಯದ ಜೊತೆ ಜೊತೆ ಈ ಭಾಗದ ಅಪ್ಪಟ ಭಾಷಾ ಸೋಗಡು ಇರಲಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಬೀದರ ಜಿಲ್ಲೆಯ ಕಥೆಗಾರ್ತಿ ಬಿ.ಜೆ. ಪಾರ್ವತಿ ಸೋನಾರೆ ಅವರ ಭವರಿ ಕಥೆಯಾಧಾರಿತ ಸಿನೇಮಾ ನಿರ್ಮಾಣದಿಂದ ಈ ಭಾಗದಲ್ಲಿ ಎಲೆಮರೆ ಕಾಯಿಯಂತಿರುವ ಸಾಹಿತಿ ಬಿ.ಜೆ. ಪಾರ್ವತಿ ಅವರಿಗೆ ಅವಕಾಶ ಕೊಟ್ಟಿದಂತಾಗುತ್ತದೆ. ಅಲ್ಲದೇ ಭವರಿ ಸಿನೇಮಾದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು ಎಂದರು.

ಭವರಿ ಸಿನೇಮಾ ನಿರ್ಮಾಣಕ್ಕೆ ಫೈನ್ಸಾರ್‍ಗಳು ಸಹಾಯ ಮಾಡಬಹುದು. ಆಸಕ್ತರು ಚಿತ್ರ ನಿರ್ದೇಶಕ ಬಿ.ಜೆ. ವಿಷ್ಣುಕಾಂತ ಧನ್ನೂರ ಅವರಿಗೆ ಸಂಪರ್ಕಿಸಬಹುದು ಎಂದು ಹೇಳಿದರು.

ಭವರಿ ಕಥಾ ಸಂಕಲದ ಲೇಖಕಿ ಶ್ರೀಮತಿ ಬಿ.ಜೆ. ಪಾರ್ವತಿ ಸೋನಾರೆ ಅವರು ಮಾತನಾಡುತ್ತ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದ ಭವರಿ ಕಥಾ ಸಂಕಲದ ಭವರಿ ಕಥೆಯಾಧಾರಿತ ಸಿನೇಮಾ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ಹಾಗೂ ನಿರ್ದೇಶಕರಾದ ಬಿ.ಜೆ. ವಿಷ್ಣುಕಾಂತ ಧನ್ನೂರ ಅವರಿಗೆ ಧನ್ಯವಾದಗಳು ಹೇಳಿದರು.

ಕಲ್ಯಾಣ ಕರ್ನಾಟಕದ ಬೀದರ ಜಿಲ್ಲೆಯ ಲೇಖಕಿಯೊಬ್ಬರ ಭವರಿ ಕಥಾ ಸಂಕಲದ ಭವರಿ ಕಥೆ ಸಿನೇಮಾ ಆಗುತ್ತಿರುವುದು ನನಗೆ ಬಹಳ ಖುಷಿ ತಂದಿದೆ. ಇದರ ಜೊತೆಗೆ ನನಗೆ ಬಹಳ ಹೆಮ್ಮೆ ಏನಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಾನಪದ ಕಲಾವಿದರ ಬಳಗದ ಬೀದರ ಜಿಲ್ಲಾ ಘಟಕದ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರು ಇದ್ದರು.

Be the first to comment

Leave a Reply

Your email address will not be published.


*