ಗಿರಿನಾಡು ಯಾದಗಿರಿ ಜಿಲ್ಲೆಗೆ ಮತ್ತೇ ವಕ್ಕರಿಸಿದ ಜವರಾಯ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 5 ಕ್ಕೆ ಏರಿಕೆ.

ವರದಿ:ರಾಘವೇಂದ್ರ ಮಾಸ್ತರ ಯಾದಗಿರಿ

ಜೀಲ್ಲಾ ಸುದ್ದಿಗಳು

ವಲಸೆಯಿಂದ ಬಂದಿರುವ ಕ್ವಾರಂಟೈನ್ ನಲ್ಲಿದ್ದ ಮೂವರು ಕಾರ್ಮಿಕರಿಗೆ ಕೋವಿಡ್-19 ಸೋಂಕು ದೃಢ ಮತ್ತೆ ಬೆಚ್ಚಿಬಿದ್ದ ಜಿಲ್ಲೆಯ ಜನತೆ

ಅಂಬಿಗ ನ್ಯೂಸ್ ಯಾದಗಿರಿ

ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವ ಮೂವರು ಕಾರ್ಮಿಕರಿಗೆ ಕೋವಿಡ್-19 ದೃಢಪಟ್ಟಿದೆ.

ಈಗ ಥಾಣೆಯಿಂದ ಬಂದ ಇಬ್ಬರಿಗೆ ಮತ್ತು ಮುಂಬೈನಿಂದ ಬಂದ ಓರ್ವನಿಗೆ ಸೋಂಕು ದೃಢವಾಗಿದೆ.

ಥಾಣೆಯಿಂದ ಬಂದ 30 ವರ್ಷದ P-1139 ಮತ್ತು 34 ವರ್ಷದ P-1141 ಇಬ್ಬರು ಪುರುಷರು ಮತ್ತು ಮುಂಬೈನಿಂದ ಬಂದ 22 ವರ್ಷದ P-1140 ಯುವಕನಿಗೆ ಸೋಂಕು ತಾಗಿರುವುದು ದೃಢವಾಗಿದೆ.

ಕಳೆದ ಮೇ.12ರಂದು ಮೊದಲ ಬಾರಿಗೆ ಸುರಪುರ ನಗರಕ್ಕೆ ಗುಜರಾತ್ ನ ಅಹಮದಾಬಾದ್ ನಿಂದ ಆಗಮಿಸಿದ ದಂಪತಿ 33 ವರ್ಷದ ಮಹಿಳೆ P- 867, ಮತ್ತು 38 ವರ್ಷದ ಪುರುಷ P- 868 ಸೋಂಕು ಕಾಣಿಸಿತ್ತು.

ಹಸಿರು ಪಟ್ಟಿಯಲ್ಲಿದ್ದ ಯಾದಗಿರಿ ಜಿಲ್ಲೆಗೆ ಮಹಾರಾಷ್ಟ್ರ, ಬೆಂಗಳೂರಿನಿಂದ ಕಾರ್ಮಿಕರು ಆಗಮಿಸಿದ್ದು ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದ್ದು ಈದೀಗ ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ನಲ್ಲಿರುವವರಿಗೆ ಸೋಂಕು ದೃಢವಾಗಿದೆ.

ಸಾಮಾನ್ಯವಾಗಿ ಕ್ವಾರಂಟೈನ್ ಕೇಂದ್ರಗಳಲ್ಲಿ ಎಲ್ಲರೂ ಸಾಮೂಹಿಕವಾಗಿಯೇ ಇರುವುದರಿಂದ ಅವರು ದಾಖಲಾದಾಗಿನಿಂದ ಅವರ ಪ್ರಾಥಮಿಕ ಸಂಪರ್ಕದಲ್ಲಿ ಎಷ್ಟು ಜನ ಬಂದವರು ಮತ್ತು ದ್ವಿತೀಯ ಸಂಪರ್ಕ ಹೊಂದಿದವರು ಎಷ್ಟು ಎನ್ನುವುದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ.

ಮುನ್ನೆಚ್ಚರಿಕೆಯ ಕ್ರಮವಾಗಿ ಕ್ವಾರಂಟೈನ್ ನಲ್ಲಿ ಇವರೊಟ್ಟಿಗೆ ವಾಸವಿದ್ದ ವೇಳೆ ಸಂಪರ್ಕಕ್ಕೆ ಬಂದ ಎಲ್ಲರನ್ನು ಪ್ರತ್ಯೇಕವಾಗಿರಿಸುವ ಸಾಧ್ಯತೆಗಳಿವೆ.

ಇಷ್ಟು ದಿನ ಕಳೆದರು ಜಿಲ್ಲೆಯಲ್ಲಿ ಕೋವಿಡ್-19 ರ ಭಯಯಿರಲಿಲ್ಲ.

ಇದೀಗ ಲಾಡ್ ಡೌನ್ ಸಡಿಲಿಕೆ ವೇಳೆಯಲ್ಲಿಯೇ ಸರಕು ಸಾಗಾಣೆ ವಾಹನದಲ್ಲಿ ಅಹಮದಾಬಾದ್ ನಿಂದ ಬಂದ ದಂಪತಿಗಳು ಸೋಂಕು ತಂದರೆ, ಇದೀಗ ಮಹಾರಾಷ್ಟ್ರ ದಿಂದ ಬಂದವರು ಮುಳುವಾಗಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರಗಳು ವಲಸೆ ಕಾರ್ಮಿಕರಿಗೆ ಬೇಕಿರುವ ಅಗತ್ಯ ಸೌಕರ್ಯಗಳನ್ನು ಅವರಿದ್ದಲ್ಲಿಯೇ ವ್ಯವಸ್ಥೆ ಮಾಡಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲವೇನೊ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

Be the first to comment

Leave a Reply

Your email address will not be published.


*