ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಯಾದಗಿರಿ
ಶಹಾಪೂರ :-ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮ ಪಂಚಾಯತಿಯಲ್ಲಿ ಬರುವ ವಾರ್ಡ್ ನಂ 3 ರ ಅಕ್ಕಮಹಾದೇವಿ ನಗರದ ರಸ್ತೆಯ ಸಮಸ್ಯೆ ಇದಾಗಿದ್ದು ರಸ್ತೆ ಮೇಲೆ ನಿಂತಿರುವ ಚರಂಡಿ ನೀರಿನ ಮಧ್ಯೆ ಜನರು, ಮಕ್ಕಳು ಪ್ರತಿನಿತ್ಯ ರಸ್ತೆ ಮೇಲೆ ಸಂಚರಿಸಲು ಪರದಾಡುತ್ತಿರುವ ಅನಿವಾರ್ಯತೆ ಎದುರಾಗಿದೆ.
ಈ ಕುರಿತು ಅನೇಕ ಬಾರಿ ಗ್ರಾಮದ ಯುವಕರು ಹಿರಿಯರು ಸೇರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವದೇ ಪ್ರಯೋಜನವಾಗುತ್ತಿಲ್ಲಾ ಎನ್ನುವುದು ಸಧ್ಯ ಇಲ್ಲಿನ ಜನರ ಮಾತು .
ಕರೋನಾ ಮಹಾಮಾರಿಯಿಂದಾಗಿ ಯಾದಗಿರಿ ಜಿಲ್ಲೆ
ಸಂಪೂರ್ಣ ಲಾಕ್ ಡೌನ್ ಆಗಿದೆ, ನಾವು ಏನು ಮಾಡೋಣ ಎಂದು ಅಧಿಕಾರಿಗಳು ಬೇಜವಾಬ್ದಾರಿತನದ ಕುಂಟು ನೆಪ ಹೇಳುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಕ್ಕೆ ಬಂದು ಈ ಕಡೆ ಗಮನಹರಿಸಿ ಇಣಿಕಿಯೂ ಸಹ ನೋಡಿಲ್ಲ ಎನ್ನುವುದು ಜನರ ಆರೋಪ
ಇದರಿಂದಾಗಿ ಬೇಸತ್ತ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗದ ಲಕ್ಷಣಗಳು ಕಂಡು ಬರುವುದಕ್ಕೂ ಮುನ್ನ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದರ ಕಡೆ ಗಮನ ಹರಿಸಿ ರಸ್ತೆ ದುರಸ್ತಿ ಮಾಡಿಕೊಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಊರಿನ ವಿದ್ಯಾರ್ಥಿಗಳು ಮಕ್ಕಳಿಗೆ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಗ್ರಹಿಸುತ್ತಿದ್ದಾರೆ.
Be the first to comment